ಜ್ಯೋತಿಷ್ಯ

ಈ ಐದು ರಾಶಿಯ ವ್ಯಕ್ತಿಗಳು ಅವರ ಸಂಗಾತಿಯನ್ನು , ಮನೆಮಂದಿಯನ್ನು ಹುಚ್ಚರ ರೀತಿ ಪ್ರೀತಿ ಮಾಡ್ತಾರೆ

ಈ ಐದು ರಾಶಿಯ ವ್ಯಕ್ತಿಗಳು ಅವರ ಸಂಗಾತಿಯನ್ನು , ಮನೆಮಂದಿಯನ್ನು ಹುಚ್ಚರ ರೀತಿ ಪ್ರೀತಿ ಮಾಡ್ತಾರೆ

 

ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಕೂಡ ವಿಭಿನ್ನ. ಒಬ್ಬರ ರೀತಿ ಇನ್ನೊಬ್ಬರು ಇರುವುದಿಲ್ಲ. ಒಬ್ಬರಲ್ಲಿ ಒಂದು ವಿಶೇಷತೆ ಇರುತ್ತದೆ, ಆದರೆ ಇನ್ನೊಬ್ಬರಲ್ಲಿ ಏನಾದರೂ ಕೊರತೆ ಕಾಣುತ್ತದೆ.ಇನ್ನೂ ಬೇರೆ ಯಾರಲ್ಲೂ ಇನ್ನೂ ಬೇರೆ ಏನೋ ಇರುತ್ತದೆ.

 

 

ಅವರ ರಾಶಿಯ ಆಧಾರದಲ್ಲಿ ನೀವು ಈ ಭಿನ್ನ ವಿಭಿನ್ನ ವ್ಯಕ್ತಿಗಳಲ್ಲಿ ಕೆಲವು ಒಂದೇ ರೀತಿಯ ಸಮಾನತೆಗಳನ್ನು ಸಹ ಅವಶ್ಯವಾಗಿ ಕಾಣುತ್ತೀರಿ.ರಾಶಿಗಳ ಆಧಾರದ ಮೇಲೆ ಕೆಲವು ವಿಷಯಗಳಾದ ಇಷ್ಟ, ಸ್ವಭಾವ, ಇಷ್ಟವಿಲ್ಲದೆ ಇರುವುದು, ಚರಿತ್ರೆ, ಇನ್ನೂ ಮುಂತಾದವುಗಳು ಶಾಮೀಲಾಗಿವೆ. ಒಂದು ಕಾಲಘಟ್ಟದವರೆಗೂ ಇವೆಲ್ಲ ಒಂದೇ ರೀತಿ ಇರುತ್ತವೆ.

ನೀವು ಯಾರದ್ದಾದರೂ ಜೊತೆಗೆ ಹೊಂದಿಕೊಂಡು ಚೆನ್ನಾಗಿದ್ದೀರಾ ಎಂದರೆ ಅದರರ್ಥ ನಿಮ್ಮ ರಾಶಿ ಮತ್ತು ಅವರ ರಾಶಿ ಒಂದೇ ರೀತಿಯಾಗಿರುತ್ತದೆ. ಇದೇ ವಿಷಯವನ್ನು ಆಧಾರವಾಗಿಟ್ಟುಕೊಂಡು ಇಂದು ನಿಮಗೆ ಅದಕ್ಕೆ ಸಂಬಂಧಪಟ್ಟ ಜನ ಮತ್ತು ಅವರ ರಾಶಿಗಳ ಬಗ್ಗೆ ಹೇಳುತ್ತಿದ್ದೇವೆ. ಈ ರಾಶಿಯವರು ತುಂಬಾ ಭಾವನೆಗಳನ್ನು ಹೊಂದಿರುವ ಭಾವನಾತ್ಮಕ ಜೀವಿಗಳಾಗಿದ್ದಾರೆ. ಇವರು ಯಾರ ಜೊತೆಗಾದರೂ ತಮ್ಮ ಭಾವನೆಗಳನ್ನು ಇಟ್ಟುಕೊಂಡಿದ್ದರಿಂದ ಇವರಿಗೆ ಪ್ರತಿ ಸಮಯ ಕೂಡ ಅವರ ಅವಶ್ಯಕತೆ ಇರುತ್ತದೆ. ಅವರ ಸಂಗಾತಿ ಅಥವಾ ಪ್ರೇಮಿಯನ್ನು ಬಿಟ್ಟು ಇವರು ಇರುವುದಿಲ್ಲ, ಒಂದು ಕ್ಷಣವೂ ಇರುವುದಿಲ್ಲ. ಇವರಲ್ಲಿರುವ ಒಂದು ಕೊರತೆಯೆಂದರೆ ಬೇಗನೆ ಇವರ ಆಸೆ ಮತ್ತು ಭಾವನೆಗಳನ್ನು ಅವರ ಜೊತೆ ಜೋಡಿಸುತ್ತಾರೆ. ಒಂದು ವೇಳೆ ಇವರ ಸಂಬಂಧ ಕಡಿದು ಅಥವಾ ಮುರಿದು ಹೋದರೆ ತುಂಬಾ ದುಃಖಪಡುತ್ತಾರೆ. ಈ ರೀತಿಯ ಶ್ರೇಣಿಗಳಲ್ಲಿ ಮೊದಲು ಬರುವುದೇ….

 

 

ಮಿಥುನ ರಾಶಿ.
ಮಿಥುನ ರಾಶಿಯವರಿಗೆ ಯಾರಾದರೂ ಇವರಿಗೆ ಅವರ ಯೋಜನೆಯನ್ನು ಹೇಳಿದರೆ ಅಥವಾ ಹೊಸ ಪ್ಲಾನ್ ಗಳನ್ನು ಹೇಳಿದರೆ, ಈ ರಾಶಿಯವರು ತುಂಬಾ ಬೇಗನೇ ಉತ್ಸಾಹಿತರಾಗುತ್ತಾರೆ. ಒಂದೇ ಬಾರಿಗೆ ಇವರು ಅದರ ಬಗ್ಗೆ ಕನಸನ್ನು ಕಾಣುತ್ತಾರೆ. ಅವರ ಸಂಗಾತಿಯ ಬಗ್ಗೆ ಮತ್ತು ಅವರ ಬಗ್ಗೆ ದೊಡ್ಡ ದೊಡ್ಡ ಕನಸನ್ನು ಕಾಣುತ್ತಾರೆ. ಅನೇಕ ಬಾರಿ ಅವುಗಳನ್ನು ನನಸಾಗಿಸಲು ಕಷ್ಟವಾಗುತ್ತದೆ.
ತೊಂದರೆ.
ಆದರೆ ಯಾವುದೋ ಒಂದು ಕಾರಣದಿಂದ ಅವರ ಕನಸುಗಳು ನನಸಾಗದಿದ್ದರೆ, ಅವರಿಗೆ ತುಂಬಾ ತೊಂದರೆಯಾಗುತ್ತದೆ. ಅವರು ಅವರ ಬಾಳ ಸಂಗಾತಿ ಇಲ್ಲದೆ ಅವರ ಜೀವನವನ್ನು ಊಹಿಸಲು ಸಾಧ್ಯವಿಲ್ಲ ಅಥವಾ ದೂರ ಉಳಿಯುವುದನ್ನು ಕೂಡ ಯೋಚಿಸಲು ಅವರಿಂದ ಸಾಧ್ಯವಾಗುವುದಿಲ್ಲ. ಸ್ವಲ್ಪ ಸಮಯ ಅವರಿಂದ ದೂರ ಉಳಿಯುವುದು ಇವರಿಗೆ ಸಾಧ್ಯವಾಗುವುದಿಲ್ಲ.

 

 

ಕಟಕ ರಾಶಿ.
ಒಂದು ವೇಳೆ ಯಾರಿಗಾದರೂ ಕಟಕ ರಾಶಿಯವರ ಜತೆಗೆ ಪ್ರೇಮ ಸಂಬಂಧವನ್ನು ನಿಭಾಯಿಸುವ ಅವಸರ ಸಿಕ್ಕಿದ್ದರೆ ಆಗ ನೀವೇ ಅದೃಷ್ಟವಂತರು ಎಂದು ತಿಳಿದುಕೊಳ್ಳಿ. ವಿಶ್ವಾಸಕ್ಕೆ ಅರ್ಹರು ಮತ್ತು ಜವಾಬ್ದಾರಿಯುತ ಸಂಗತಿಯಾಗಿದ್ದಾರೆ ಇವರು. ಈ ಮಾತು ಯಾರಿಗೆ ಅರ್ಥವಾಗುತ್ತದೆ ಎಂದರೆ ನಿಮ್ಮಲ್ಲಿ ಯಾರಿಗಾದರೂ ಕಟಕ ರಾಶಿಯ ಪ್ರೇಮಿಗಳು ಇದ್ದಾಗ ಅಥವಾ ಬಾಳಸಂಗಾತಿ ಇದ್ದಾಗ ಮಾತ್ರ ಸಂಗಾತಿ ಮೇಲೆ ಅವಲಂಬಿತರಾಗಿರುತ್ತಾರೆ.

ಕಟಕ ರಾಶಿಯ ಜಾತಕದವರಿಗೆ ಪ್ರೇಮದ ಜೊತೆ ಜೊತೆಗೆ ಅವರ ನೋವು, ದುಃಖ ಮತ್ತು ಉದ್ದೇಶಗಳನ್ನು ಹೇಳಿಕೊಳ್ಳುವುದು ಸಹ ಚೆನ್ನಾಗಿ ಗೊತ್ತಿರುತ್ತದೆ. ಇವರು ಇವರ ನೂರು ಪ್ರತಿಶತವನ್ನು ಅವರಿಗೆ ಕೊಡುತ್ತಾರೆ. ಆದರೆ ಮರಳಿ ಇವರ ಸಂಗಾತಿಯಿಂದಲೂ ಕೂಡ ಅದನ್ನೇ ಅಪೇಕ್ಷೆ ಪಡುತ್ತಾರೆ. ನಿಮ್ಮ ಸಮಯ ಇವರಿಗೆ ಅತ್ಯಮೂಲ್ಯವಾದದ್ದು ಕಟಕ ರಾಶಿಯವರು ಪೂರ್ಣ ರೂಪದಲ್ಲಿ ಅವರ ಸಂಗಾತಿಯ ಮೇಲೆ ಅವಲಂಬಿತರಾಗಿರುತ್ತಾರೆ.
ಉತ್ತಮ ಜೀವನ ಸಂಗಾತಿ.

ತಿರುಗಾಡಲು ಅಥವಾ ಖರೀದಿಸಲು ಹೋಗಲು ಕೂಡ ಇವರಿಗೆ ಅವರ ಸಂಗಾತಿ ಬೇಕೇ ಬೇಕು. ಸಂಗಾತಿ ಇಲ್ಲದೆ ಯಾವುದೇ ಯೋಜನೆಗಳನ್ನು ರೂಪಿಸುವುದಿಲ್ಲ. ಇವರ ಆತ್ಮದಿಂದ ಸಂಗಾತಿಯ ಕಡೆಗೆ ಅವಲಂಬಿತರಾಗಿರುತ್ತಾರೆ. ಪ್ರತಿ ಕ್ಷಣ ಕೂಡ ಇವರಿಗೆ ಅವರ ಸಂಗಾತಿ ಬೇಕು. ಆದ್ದರಿಂದ ಇವರನ್ನು ಒಬ್ಬ ಅತ್ಯುತ್ತಮ ಸಂಗಾತಿ ಎಂದು ಹೇಳಲಾಗುತ್ತದೆ. ಇವರ ಪ್ರೀತಿಯಲ್ಲಿ ಯಾವುದೇ ಕೊರತೆ ಕಾಣುವುದಿಲ್ಲ.

 

 

ಕನ್ಯಾ ರಾಶಿ.
ಕನ್ಯಾ ರಾಶಿಯವರು ತುಂಬಾ (ಫ್ಲೆಕ್ಸಿಬಲ್) ಹೊಂದಿಕೊಳ್ಳುವರು ಎಂದು ಪರಿಗಣಿಸಲಾಗಿದೆ. ಅವರು ಅವರ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಹೋರಾಡಿ ಅವುಗಳನ್ನೆಲ್ಲ ಬಗೆಹರಿಸಿ ಜೀವನ ಸಾಗಿಸುತ್ತಾರೆ. ಇವರು ಯಾರಾದರೂ ಜೊತೆ ಸಂಬಂಧದಲ್ಲಿ ಇದ್ದರೆ ಇವರ ನೂರು ಪ್ರತಿಶತವನ್ನು ನೀಡುತ್ತಾರೆ. ಇವರಿಗೆ ಇವರ ಪ್ರೇಮಿಯನ್ನು ಬಿಟ್ಟು ಬೇರೇನೂ ಹೆಚ್ಚಾಗಿ ಕಾಣುವುದಿಲ್ಲ. ಇವರ ಮನಸ್ಸು ಇವರ ಪ್ರೇಮ ಅಥವಾ ಸಂಗಾತಿಯನ್ನು ಬಿಟ್ಟು ಹಿಂದೆ ಸರಿಯುವುದಿಲ್ಲ. ಇವರ ಪ್ರೇಮಿ ಏನು ಮಾಡುತ್ತಿದ್ದಾರೆ ? ಯಾರ ಜೊತೆಗೆ ಇದ್ದಾರೆ ? ಏನು ಊಟ ತಿಂಡಿ ಮಾಡಿದ್ದಾರೆ ? ಯಾವಾಗ ನಿದ್ರೆ ಮಾಡುತ್ತಾರೆ ? ಯಾವಾಗ ನಿದ್ರೆಯಿಂದ ಎದ್ದೇಳುತ್ತಾರೆ ? ಎಂದು ಇವರಿಗೆ ಎಲ್ಲವೂ ತಿಳಿದಿರಬೇಕು. ಈ ಸ್ವಭಾವದ ಕಾರಣದಿಂದಲೇ ಇವರ ಸಂಬಂಧ ಬಹುದಿನಗಳವರೆಗೆ ಅಥವಾ ತುಂಬಾ ವರ್ಷಗಳವರೆಗೆ ಸರಿ ಹೋಗುವುದಿಲ್ಲ.

 

 

ಕುಂಭ ರಾಶಿ .
ಕುಂಭ ರಾಶಿಯವರು ಯಾರ ಜೊತೆಗೆ ಆದರೂ ಜೋಡಿಯಾಗುತ್ತಾರೆ ಎಂದರೆ ನೀವೇ ಅರ್ಥಮಾಡಿಕೊಳ್ಳಿ ಅವರು ಅವರ ಜೊತೆ ಜೀವನ ಪೂರ್ತಿ ಜೋಡಿಯಾಗಿದ್ದಾರೆಂದು. ಇವರು ಯಾವುದೇ ಸಮಯದಲ್ಲಾದರೂ ಸರಿ ಅವರ ಪ್ರೀತಿ ಪಾತ್ರರಿಂದ ದೂರ ಉಳಿಯುವುದಿಲ್ಲ. ಯಾರ ಜೊತೆಗಾದರೂ ಅವರ ಭಾವನೆಗಳೊಂದಿಗೆ ಭಾವನಾತ್ಮಕವಾಗಿ ಜೊತೆಯಾಗಿದ್ದಾರೆ ಎಂದರೆ ಅವರೊಂದಿಗೆ ಸದಾ ಜವಾಬ್ದಾರಿಯುತವಾಗಿ ಇರುತ್ತಾರೆ. ಅವರ ಸಂಗಾತಿ ಇಲ್ಲದೆ ಇವರ ಜೀವನ ಏನೇನೂ ಅಲ್ಲ ಎಂದು ಅಂದುಕೊಳ್ಳುತ್ತಾರೆ.

ಮೀನ ರಾಶಿ .
ಈ ಮೀನ ರಾಶಿಯವರು ಅವರ ಸಂಗಾತಿಯೊಂದಿಗೆ ಇರುವ ರೀತಿಯಲ್ಲಿ ಬೇರೆ ಯಾವ ರಾಶಿಯವರು ಕೂಡ ಈ ರೀತಿಯ ಸಂಬಂಧವನ್ನು ಇಟ್ಟುಕೊಂಡಿರುವುದಿಲ್ಲ. ಇವರು ಇವರ ಸಂಗಾತಿಯನ್ನು ತುಂಬಾ ಆರೈಕೆ ಮಾಡುತ್ತಾರೆ ಮತ್ತು ಅಷ್ಟೇ ಬೇಗನೆ ಭಾವುಕರಾಗುತ್ತಾರೆ .ಇವರಿಗೆ ಈ ಜಗತ್ತಿನಲ್ಲಿ ಅತ್ಯವಶ್ಯಕವಾದ ವ್ಯಕ್ತಿ ಯಾರಾದರೂ ಇದ್ದರೆ ಅದು ಅವರ ಬಾಳ ಸಂಗಾತಿ ಅಥವಾ ಪ್ರೇಮಿ ಮಾತ್ರ. ಮಹತ್ವದ ಅರಿವಾಗುವುದು.

ಇವರು ಯಾರ ಜೊತೆಗಾದರು ಪ್ರೇಮ ಸಂಬಂಧದಲ್ಲಿ ಇರುತ್ತಾ ಎಂದರೆ ಇವರಿಗೆ ಪ್ರತಿ ಸಮಯವೂ ಕೂಡ ಅವರ ಅವಶ್ಯಕತೆ ಇರುತ್ತದೆ ಮತ್ತು ಅದರ ಮಹತ್ವದ ಅರಿವನ್ನು ಮಾಡಿಕೊಳ್ಳುತ್ತಾರೆ. ತುಂಬಾ ಜನರಿಗೆ ಈ ರೀತಿಯ ಅಭ್ಯಾಸ ಸಮಸ್ಯೆಯನ್ನು ಉಂಟು ಮಾಡುತ್ತದೆ. ಆದರೆ ಈ ಸ್ವಭಾವವನ್ನು ಮೀನ ರಾಶಿಯವರು ಎಂದಿಗೂ ಸಹ ಗೌಪ್ಯವಾಗಿ ಇಡುವುದಿಲ್ಲ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top