fbpx
ಹೆಚ್ಚಿನ

ಜೈ ಶ್ರೀ ರಾಮ ಎಂದು ಹೇಳುವಂತೆ ಒತ್ತಾಯಿಸಿ ದಲಿತ ಯುವಕನ ಮೇಲೆ ಹಲ್ಲೆ.

ಜೈ ಶ್ರೀ ರಾಮ ಎಂದು ಹೇಳುವಂತೆ
ಒತ್ತಾಯಿಸಿ ದಲಿತ ಯುವಕನ ಮೇಲೆ ಹಲ್ಲೆ.

 

ಉತ್ತರ ಪ್ರದೇಶ ರಾಜ್ಯದ ಮುಜಾಫರನಗರ ಜಿಲ್ಲೆಯ ಮೇಘಾಶಿಕಾರ್‌ಪುರ್ ಎಂಬ ಹಳ್ಳಿಯಲ್ಲಿ ದಲಿತ ಯುವಕನೊಬ್ಬನಿಗೆ ಸಂಘಟನೆಯೊಂದರ ಕಾರ್ಯಕರ್ತರು ಜೈ ಶ್ರೀರಾಮ ಎಂದು ಕೇಳಲು ಒತ್ತಾಯಿಸಿ ಅಮಾನುಷವಾಗಿ ಥಳಿಸಿ ಅವನ ಮೇಲೆ ಹಲ್ಲೆ ಮಾಡಿದ್ದಾರೆ. ವಿಪಿನ ಕುಮಾರ ಎಂಬ ವ್ಯಕ್ತಿ ಹಲ್ಲೆಗೊಳಗಾದ ಯುವಕ. ಘಟನೆಯು ರವಿವಾರ ನಡೆದಿದ್ದು ತಡವಾಗಿ ಬೆಳಕಿದೆ ಬಂದಿದೆ. ಈ ಘಟನೆಯ ವಿಡಿಯೋ ಸಮಾಜ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿದ ಅನೇಕ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆಂದು ತಿಳಿದು ಬಂದಿದೆ.

ಪೊಲೀಸರು ಪ್ರಕರಣ ದಾಖಲಿಸಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದ್ದೆ. ಘಟನೆಯು ಪುರ್ಕಾಜಿ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆ ಬಗ್ಗೆ ವಿಪಿನ್ ಕುಮಾರ್ ಅವರ ತಂದೆ ಕೆಲವರ ವಿರುದ್ದ ಪುರ್ಕಾಜಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ನಡೆಯುವ ಮುನ್ನ ದಿನ ಗ್ರಾಮದಲ್ಲಿ ಕೆಲವು ದಲಿತ ಕುಟುಂಬದವರು ಭೌದ್ದ ಧರ್ಮಕ್ಕೆ ಮತಾಂತರ ಹೊಂದಲು ಇಚ್ಛಿಸಿದ್ದರು.ಅವರಲ್ಲಿ ಕೆಲವರು ಮನೆಯಲ್ಲಿ ಹಿಂದೂ ದೇವರ ಭಾವಚಿತ್ರ ಇಡಲು ನಿರಾಕರಿಸಿದ್ದರು ಎಂದು ತಿಳಿದು ಬಂದಿದೆ.

ಆ ವಿಡಿಯೋದಲ್ಲಿ ಏನಿದೆ:
ಹಿಂದೂ ಧರ್ಮದ ದೇವತೆಗಳ ಭಾವಚಿತ್ರವನ್ನು ತೆಗೆದು ಹಾಕಿರುವುದು ತಪ್ಪು ಎಂದು ಹೇಳಿರುವ ಕಾರ್ಯಕರ್ತರು ವಿಪಿನ್ ಕುಮಾರ್‌ ಎಂಬ ಯುವಕನಿಗೆ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿರುವುದು ದಾಖಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top