fbpx
ಹೆಚ್ಚಿನ

ಡೈವೋರ್ಸ್ ಬೇಕೆಂದರೆ ವಿಚ್ಛೇದನ ಪರೀಕ್ಷೆ ತಗೋಬೇಕು , 60ಕ್ಕಿಂತಲೂ ಹೆಚ್ಚಿನ ಅಂಕ ಬಂದ್ರೆ ಡೈವೋರ್ಸ್ ಸಿಗುತ್ತೆ ಇಲ್ಲಾಂದ್ರೆ ಇಲ್ಲ !

ಡೈವೋರ್ಸ್ ಬೇಕೆಂದರೆ ವಿಚ್ಛೇದನ ಪರೀಕ್ಷೆ ತಗೋಬೇಕು , 60ಕ್ಕಿಂತಲೂ ಹೆಚ್ಚಿನ ಅಂಕ ಬಂದ್ರೆ ಡೈವೋರ್ಸ್ ಸಿಗುತ್ತೆ ಇಲ್ಲಾಂದ್ರೆ ಇಲ್ಲ !

 

 

ಚೀನಾದಲ್ಲಿ ವಿಚ್ಛೇದನಗಳು ಹೆಚ್ಚುತ್ತಿವೆ. ಸಹಜವಾಗಿಯೇ ‘ಉತ್ಪಾದನೆ’ ಕಮ್ಮಿಯಾಗುತ್ತಿದೆ! ಸಮಸ್ಯೆಗೆ ಪರಿಹಾರವಾಗಿ ಸಿಚುಯಾನ್ ಪ್ರಾಂತ್ಯದ ಕೋರ್ಟ್ ಡೈವೋರ್ಸಿಗಳಿಗೆ ಪರೀಕ್ಷೆ ನಡೆಸುತ್ತಿದೆ. ಶೇ. 60ಕ್ಕಿಂತಲೂ ಕಡಿಮೆ ಅಂಕಗಳನ್ನು ಪಡೆದವರಿಗೆ ‘ಡೈವೋರ್ಸ್ ಭಾಗ್ಯ’ ಇಲ್ಲ. ಇಷ್ಟವಿರಲಿ-ಇಲ್ಲದಿರಲಿ ಒಟ್ಟಿಗೆ ಬಾಳಬೇಕು.

 

 

ಹೋಗಲಿ ಹೆಚ್ಚಿನ ಅಂಕಕ್ಕಿಂತಲೂ ಹೆಚ್ಚು ಗಳಿಸಿದವರಿಗೆ ವಿಚ್ಛೇದನ ಗ್ಯಾರಂಟಿನಾ?

ಇಲ್ಲ. ಅಂತಹ ಜಾಣರನ್ನು ಕರೆದು ಕೌನ್ಸೆಲಿಂಗ್ ಮಾಡಲಾಗುತ್ತದೆ. ಒಂದಷ್ಟು ದಿನ ತಳ್ಳುತ್ತಾರೆ. ಅಷ್ಟಾಗಿಯೂ ಡೈವೋರ್ಸ್ ಬೇಕೆಂದರೆ ಮತ್ತೊಮ್ಮೆ ವಿಚ್ಛೇದನ ಪರೀಕ್ಷೆ ಎದುರಿಸಬೇಕು. ಅದರಲ್ಲಿ 60ಕ್ಕಿಂತಲೂ ಹೆಚ್ಚಿನ ಅಂಕ ಗಳಿಸಿದರೆ ಅಂತಹವರನ್ನು ವಿಚಾರಣೆಗೊಳಪಡಿಸುತ್ತಾರೆ. ಇಲ್ಲಿ ವಿಚ್ಛೇದನಕ್ಕೆ ಕಾರಣ, ಸಾಕ್ಷಿ, ಎಲ್ಲವನ್ನೂ ಸಾಬೀತಪಡಿಸಬೇಕು. ಅದು ನ್ಯಾಯಾಧೀಶರಿಗೆ ಒಪ್ಪಿಗೆ ಆದಲ್ಲಿ ಮಾತ್ರ ವಿಚ್ಛೇದನಕ್ಕೆ ಒಪ್ಪಿಗೆ ಸೂಚಿಸುತ್ತಾರೆ.

 

 

ಚೀನಾದಲ್ಲಿ ಪಾಶ್ಚಿಮಾತ್ಯತೆ ಆವರಿಸಿದೆ. ಸ್ವಚ್ಛಂದ ಬದುಕು ಹೆಚ್ಚುತ್ತಿದೆ. ದಾಂ ‘ಪಥ್ಯ’ವಾಗುತ್ತಿಲ್ಲ. ವಿಚ್ಛೇದನದ ಹಾದಿಯಲ್ಲಿ ಹಲವರು ಸಾಗಿದ್ದಾರೆ. ಹೀಗಾದಲ್ಲಿ ಜನ ಸಂಖ್ಯೆ ಹೆಚ್ಚಾಗದು ಎಂಬ ಕಳವಳ. ಅದಕ್ಕಾಗಿ ಡೈವೋರ್ಸ್‍ಗಳಿಗೆ ಕಡಿವಾಣ ಹಾಕುತ್ತಿದ್ದಾರೆ.

 

 

ಚೀನೀಯರ ಸಂಖ್ಯೆ ಹೆಚ್ಚಾಗಲು ಸುಲಭವಾಗ ಏನು ಮಾಡಬೇಕು?

ನಮ್ಮ ಘೋರಿ ಪಾಳ್ಯದಿಂದ 1-2 ಕುಟುಂಬಗಳನ್ನು ಕರೆದೋಯ್ದು ಚೀನಾದಲ್ಲಿ ಬಿಟ್ಟು ಬಂದರೂ ಸಾಕು ಕೆಲವೇ ವರ್ಷಗಳಲ್ಲಿ ಚೀನಾ ಮಕ್ಕಳಿಂದ ಸಮೃದ್ಧವಾಗಿರಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top