fbpx
ಹೆಚ್ಚಿನ

80ರ ಅಜ್ಜಿ14 ವರ್ಷಗಳಿಂದ ಬ್ಯಾಟ್ ಧಾರಿಯಾಗಿ ಬಂದು ಸೊಳ್ಳೆ ಹೊಡೆದು ಹೋಗ್ತಾಳೆ

80ರ ಅಜ್ಜಿ14 ವರ್ಷಗಳಿಂದ ಬ್ಯಾಟ್ ಧಾರಿಯಾಗಿ ಬಂದು ಸೊಳ್ಳೆ ಹೊಡೆದು ಹೋಗ್ತಾಳೆ

 

ನಮಗೆಲ್ಲಾ ಋಣಪಾತಕರು ಗೊತ್ತು. ಆದರೆ ನೊಣಪಾತಕರು ತಿಳಿಯದು. ಆದರೆ ಇಲ್ಲೊಬ್ಬಳು ನೊಣಪಾತಕಿ ಇದ್ದಾಳೆ. ಏನವಳ ಚೇಷ್ಟೆ ಇಲ್ಲಿದೆ ಮಾಹಿತಿ…

 

 

ನಿತ್ಯ ನೊಣ ಹೊಡೆಯೋದು ಅಂದ್ರೆ ‘ನೊಣ ಹೊಡೆದಷ್ಟು’ ಸುಲಭವಲ್ಲ. ವ್ರತಾ ಎಂಬಂತೆ ವೃಥಾ ನೊಣಪಾತಕತನ ಮಾಡೋದು ಕಡುಕಷ್ಟ. ‘ಮನಸ್ಸಿದ್ದಲ್ಲಿ ಮಶ್ಚಿಕವಿದೆ’ ಎಂದುಕೊಂಡು ನೊಣಭೇಟೆಯಾಡುತ್ತಿದ್ದಾಳೆ…. 80ರ ಅಜ್ಜಿ.

14 ವರ್ಷಗಳಿಂದ ಪ್ರತಿದಿನ ಕನಿಷ್ಠ ಸಾವಿರ ನೊಣಗಳಿಗೆ ಮುಕ್ತಿ ಕಾಣಿಸುತ್ತಿದ್ದಾಳೆ.

ಅಷ್ಟೊಂದು ನೊಣ ಎಲ್ರೀ ಸಿಗುತ್ತದೆ?

ಕೊಂಡು ತರಲೇನು ಅದೇನು ಬೆಲ್ಲದ ಉಂಡೆಯಾ? ಹುಡುಕಿ ಹೋಗಬೇಕು. ತ್ಯಾಜ್ಯ ವಿಲೇವಾರಿ ಕೇಂದ್ರ, ತಿಪ್ಪೆಗುಂಡಿ, ಕಸದರಾಶಿ, ಕೊಳಚೆ ಪ್ರದೇಶಗಳಲ್ಲಿ ಇವು ಹೇರಳ. ಅಲ್ಲಿಗೆಲ್ಲಾ ಬ್ಯಾಟ್ ಧಾರಿಯಾಗಿ ತೆರಳುವ ಈ ಅಜ್ಜಿ ನಿಶ್ಶಸ್ತ್ರ ನೊಣಗಳ ಮೇಲೆ ಮನ ಬಂದಂತೆ ದಾಳಿ ಮಾಡುತ್ತಾಳೆ. ಸಾವಿರ ಸತ್ತಿರುವುದು ಮನದಟ್ಟಾಗುತ್ತಿದಂತೆಯೇ ಕದನ ವಿರಾಮ ಘೋಷಿಸಿ ಮನೆಗೆ ಮರಳುತ್ತಾಳೆ. ಮರುದಿನ ಅದೇ ಚಾಳಿ.

 

ಗೊಣಗುಟ್ಟದೆ ನೊಣ ಹೊಡೆಯುವ ಟ್ಯಾಂಗ್ ಅಜ್ಜಿ ಚೈನಾದ ದಕ್ಷಿಣಭಾಗದ ಹ್ಯಾಂಗ್‍ಝೌ ಪ್ರಾಂತ್ಯದಲ್ಲಿದ್ದಾಳೆ.

ಅಜ್ಜಿಯ ದಾಳಿ ಏಕೆ?

ನೊಣಗಳ ಉಪಟಳ ಹೆಚ್ಚಾಗುತ್ತಿದ್ದು ಹಲವು ಕಾಯಿಲೆಗಳಿಗೆ ಮೂಲವೆಂದು ಹೇಳುತ್ತಾಳೆ ಈ ಅಜ್ಜಿ. ಹೀಗಾಗಿ ಭೇಟೆಯಾಡಿ ಅವುಗಳನ್ನು ಕೊಂದು ಹಾಕುತ್ತಾಳಂತೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top