fbpx
ಕ್ರೀಡೆ

ಎರಡನೇ ಟೆಸ್ಟ್: ಮತ್ತೊಂದು ಸೋಲಿನ ಸುಳಿಯಲ್ಲಿ ಸಿಲುಕಿದ ಭಾರತ.

ಎರಡನೇ ಟೆಸ್ಟ್: ಮತ್ತೊಂದು ಸೋಲಿನ ಸುಳಿಯಲ್ಲಿ ಸಿಲುಕಿದ ಭಾರತ.

 

 

ಟೀಂ ಇಂಡಿಯಾ ಅಗ್ರ ಕ್ರಮಾಂಕದ ಬ್ಯಾಟ್ಸ್’ಮನ್’ಗಳು ಮತ್ತೊಮ್ಮೆ ವಿಫಲವಾಗಿದ್ದರಿಂದ ಟೀಂ ಇಂಡಿಯಾ ಎರಡನೇ ಟೆಸ್ಟ್’ನಲ್ಲೂ ಸೋಲಿನ ಸುಲಿಗೆ ಸಿಲುಕಿಕೊಂಡಿದೆ. ಸೆಂಚುರಿಯನ್ ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿಗಾಗಿ 287 ರನ್‌ಗಳ ಸವಾಲಿನ ಗುರಿ ಬೆನ್ನತ್ತುತ್ತಿರುವ ಭಾರತೀಯ ತಂಡವು, ಆರಂಭಿಕ ಆಘಾತಕ್ಕೊಳಗಾಗಿದೆ.

2 ವಿಕೆಟ್ ಕಳೆದುಕೊಂಡು 90 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾ ನಾಲ್ಕನೇಯ ದಿನ 8 ವಿಕೆಟ್ ಗಳ ಸಹಾಯದಿಂದ 168 ರನ್ ಗಳಿಸಿ ಅಂತಿಮವಾಗಿ 91.3 ಓವರ್ ಗಳಲ್ಲಿ 258 ರನ್ ಗಳಿಗೆ ಆಲೌಟ್ ಆಯ್ತು. ಮೊದಲ ಇನ್ನಿಂಗ್ಸ್ 28 ರನ್ನುಗಳ ಮುನ್ನಡೆ ಪಡೆದುಕೊಂಡಿದ್ದ ದ.ಆಫ್ರಿಕಾ ಭಾರತಕ್ಕೆ 287 ರನ್ನುಗಳ ಟಾರ್ಗೆಟ್ ನೀಡಿತು.

 

 

287 ರನ್’ಗಳ ಗುರಿ ಬೆನ್ನತಿದ ಟೀಂ ಇಂಡಿಯಾ 4ನೇ ದಿನದಂತ್ಯದ ವೇಳೆಗೆ 35/3 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಗೆ ತಲುಪಿದೆ. ಆರಂಭಿಕರಾದ ಮುರಳಿ ವಿಜಯ್ (9), ಲೋಕೆಶ್ ರಾಹುಲ್ (4) ಜತೆಗೆ ಮೊದಲ ಇನ್ನಿಂಗ್ಸ್‌ನ ಶತಕವೀರ ನಾಯಕ ವಿರಾಟ್ ಕೊಹ್ಲಿ (5) ಪೆವಿಲಿಯನ್ ಸೇರಿಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೊರ್:

ದಕ್ಷಿಣ ಆಫ್ರಿಕಾ: 335 ಮತ್ತು 258

ಎಬಿ ಡಿವಿಲಿಯರ್ಸ್: 80

ಶಮಿ: 49/4

ಭಾರತ:307 ಮತ್ತು 35/3

ಪೂಜಾರ: 11*(ಬ್ಯಾಟಿಂಗ್)

ಲುಂಗಿ ಎನ್ಗಿಡಿ: 14/2

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top