fbpx
ಹೆಚ್ಚಿನ

ರೈಲ್ವೆಯಲ್ಲಿ ಕೆಳಗಿನ ಸೀಟ್ ಬೇಕಾದರೆ ಹಾಗು ಹಬ್ಬದ ದಿನದಲ್ಲಿ ನಿಮ್ಮ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ?

ರೈಲ್ವೆಯಲ್ಲಿ ಕೆಳಗಿನ ಸೀಟ್ ಬೇಕಾದರೆ ಹಾಗು ಹಬ್ಬದ ದಿನದಲ್ಲಿ
ನಿಮ್ಮ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ?

 

 

ರೈಲ್ವೆ ಪ್ರಯಾಣಿಕರು ಕೆಳಗಿನ ಸೀಟ್ ಬೇಕಾದರೆ ಇನ್ನು ಹೆಚ್ಚಿನ ಶುಲ್ಕ ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ ಮತ್ತು ಹಬ್ಬದ ಋತುವಿನಲ್ಲಿ ಪ್ರಯಾಣಿಸುವುವಾಗ ಶುಲ್ಕ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸಲುವಾಗಿ ರೈಲ್ವೇ ಪರಿಶೀಲನ ಸಮಿತಿಯು ರೈಲ್ವೇ ಮಂಡಳಿಗೆ ಕೆಲವು ಶಿಫಾರಸುಗಳನ್ನು ಮಾಡಿದ್ದು, ಇದು ಅನುಷ್ಠಾನಕ್ಕೆ ಬಂದಲ್ಲಿ ಪ್ರಯಾಣಿಕರು ಹೆಚ್ಚಿನ ಮೊತ್ತ ಪಾವತಿ ಮಾಡಬೇಕಾಗಿರುವುದು ನಿಶ್ಚಿತ ಆಗಿದೆ.

ಈ ಮೊದಲಿನಿಂದಲೇ ಈ ನಿಯಮಾವಳಿ ವಿಮಾನ ದಲ್ಲಿ ಜಾರಿಯಾಗಿದೆ. ವಿಮಾನದಲ್ಲಿ ನಿಮಗೆ ಮೊದಲನೇ ಸಾಲಿನ ಸೀಟ್ ಬೇಕಾದರೆ ಕೆಲವೊಂದು ಬಾರಿ ಹೆಚ್ಚಿನ ದರ ವಿಧಿಸುತ್ತಾರೆ.

 

 

ಈ ಮೊದಲು ವರ್ಷವೆಲ್ಲ ಒಂದೇ ದರ ಇರುತ್ತಿತ್ತು ಈಗ ರೈಲ್ವೆ ಪರಿಶೀಲನ ಸಮಿತಿಯು ಹಬ್ಬದ ಋತುಗಳಲ್ಲಿ ದರಗಳನ್ನು ಹೆಚ್ಚಿಸಬೇಕು ಮತ್ತು ಉಳಿದ ದಿನಗಳಲ್ಲಿ ಅವುಗಳನ್ನು ಕಡಿಮೆಗೊಳಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.

ನಿನ್ನೆ ರೈಲ್ವೆ ಪರಿಶೀಲನ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿತು, ಈ ಬದಲಾವಣೆಯನ್ನು ಫ್ಲೆಕ್ಸಿ-ಶುಲ್ಕ ವ್ಯವಸ್ಥೆಯಲ್ಲಿ ಪ್ರಸ್ತಾಪಿಸಿದೆ. ಇದ್ದು ಜಾರಿಯಾದಲ್ಲಿ ಪ್ರೀಮಿಯಂ ರೈಲುಗಳ ದರದಲ್ಲಿ 50 ಶೇ ವರೆಗೂ ಹೆಚ್ಚಳವಾಗಲಿದೆ.

 

 

ಸಮಿತಿ, ಮೂಲಗಳು ಹೇಳುವಂತೆ, ರಾತ್ರಿಯ ರೈಲುಗಳಿಗೆ ಪ್ರೀಮಿಯಂ ಶುಲ್ಕ ವಿಧಿಸಬೇಕು ಎಂದು ಶಿಫಾರಸು ಮಾಡಿದೆ. ಆದರೆ ಈ ಶಿಫಾರಸನ್ನು ರೈಲ್ವೆ ಜಾರಿಗೊಳಿಸುತ್ತಾ ಇನ್ನಷ್ಟೇ ಕಾಡು ನೋಡಬೇಕಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top