fbpx
ಮಾಹಿತಿ

ಟ್ರಾಫಿಕ್ ಪೊಲೀಸರು DL, RC ಹಾಗು ಇನ್ಶೂರೆನ್ಸ್ ಕೇಳಿದ್ರೆ, ಇನ್ಮೇಲೆ ಮೊಬೈಲ್ ನಲ್ಲೆ ತೋರಿಸಿ

ಟ್ರಾಫಿಕ್ ಪೊಲೀಸರು DL, RC ಹಾಗು ಇನ್ಶೂರೆನ್ಸ್ ಕೇಳಿದ್ರೆ, ಇನ್ಮೇಲೆ ಮೊಬೈಲ್ ನಲ್ಲೆ ತೋರಿಸಿ

 

ನೀವು ಲೈಸನ್ಸ್ ದಾಖಲೆ ಪತ್ರವನ್ನು ಮರೆತು ಸವಾರಿ ಮಾಡಿ ಟ್ರಾಫಿಕ್ ಪೋಲೀಸರ ಬಳಿ ಸಿಕ್ಕು ದಂಡ ಕಟ್ಟುವ ಸಮಸ್ಯೆಗೆ ಇನ್ನು ಕೆಲವೇ ದಿನದಲ್ಲಿ ಇನ್ನು ಗುಡ್ ಬೈ ಹೇಳಿ. ಯಾಕಂದ್ರೆ ಇನ್ಮೇಲೆ ಮೊಬೈಲ್ ನಲ್ಲೆ ನಿಮ್ಮ ಲೈಸನ್ಸ್ ದಾಖಲೆ ಪತ್ರವನ್ನು ತೋರಿಸಬಹುದು ಅದು ಹೇಗೆ ಅಂತೀರಾ ಮುಂದೆ ಓದಿ.

 

 

ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ಹೊಸ ಆಪ್ “ಡಿಜಿ ಲಾಕರ” ನಲ್ಲಿ ನಿಮ್ಮ ಲೈಸನ್ಸ್ ದಾಖಲೆ ಪತ್ರವನ್ನು ಸ್ಕ್ಯಾನ್ ಮಾಡಿ ಸೇವ್ ಮಾಡಬಹುದು. ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಕೇಳಿದಾಗ ಮೊಬೈಲ್ ತೋರಿಸಿದರೆ ಸಾಕು. ಈ ಯೋಜನೆಯನ್ನು ರಾಜ್ಯದಲ್ಲಿ ಇನ್ನು ಕೆಲವೇ ದಿನದಲ್ಲಿ ಪ್ರಾಯೋಜಿಕವಾಗಿ ಜಾರಿಗೆ ತರಲು ನಿರ್ಣಯ ಮಾಡಿದ್ದಾರೆ. ಈ ಯೋಜನೆ ಯಶಸ್ವಿಯಾದರೆ ದೇಶ್ಯಾದ್ಯಂತ ಜಾರಿಗೆ ತರಲು ಯೋಜನೆ ರೂಪಿಸಿದ್ದಾರೆ.

 

 

ನೀವು “ಡಿಜಿ ಲಾಕರ” ನಲ್ಲಿ ವಾಹನ ಚಾಲನಾ ಪರವಾನಗಿ (ಡಿಎಲ್) ಮತ್ತು ನೋಂದಣಿ ಪ್ರಮಾಣಪತ್ರ (ಆರ್‍ಸಿ), ವಿಮೆ ಪತ್ರವನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಬಹುದು. ಇದರಿಂದ ಸಾಕಷ್ಟು ಜನರಿಗೆ ಪ್ರಯೋಜನವಾಗಲಿದೆ.

 

 

ಎಲ್ಲರು ಏನ್ ಮರೆತರು ಮೊಬೈಲ್ ಅಂತೂ ಮರೆಯಲ್ಲ ಹೀಗಾಗಿ ಅನಾವಶ್ಯಕವಾಗಿ ಟ್ರಾಫಿಕ್ ಅಧಿಕಾರಿಗಳಿಗೆ ದಂಡ ಕಟ್ಟೋದು ಇನ್ಮೇಲೆ ತಪ್ಪುತ್ತೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಡಿಜಿಟಲ್ ಇಂಡಿಯಾ ಭಾಗವಾಗಿ ‘ಡಿಜಿ ಲಾಕರ’ ಜಾರಿಗೆ ತಂದಿದ್ದರು. ಆದರೆ ಇದನ್ನು ಈಗ ಕಾರ್ಯರೂಪಕ್ಕೆ ತರಲು ಯೋಜನೆ ತರುತ್ತಿದ್ದಾರೆ. ಇಂದಿನ ಯುಗದಲ್ಲಿ ನಾವೆಲ್ಲ ಹೆಚ್ಚೆಚ್ಚು ಡಿಜಿಟಲ್ ಬಳಸುವ ಅವಶ್ಯಕತೆ ಇದೆ ಯಾಕಂದೆ ಇದು ಪಾರದರ್ಶಕ ವಾಗಿರುತ್ತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top