fbpx
ಮನೋರಂಜನೆ

ರಾಮ್ ಗೋಪಾಲ್ ವರ್ಮಾ ನಿರ್ದೇಶನದ GST(ಗಾಡ್ ಸೆಕ್ಸ್ ಅಂಡ್ ಟ್ರುಥ್)ಗೆ ಎದುರಾಯ್ತು ಸಂಕಷ್ಟ.

ರಾಮ್ ಗೋಪಾಲ್ ವರ್ಮಾ ನಿರ್ದೇಶನದ GST(ಗಾಡ್ ಸೆಕ್ಸ್ ಅಂಡ್ ಟ್ರುಥ್)ಗೆ ಎದುರಾಯ್ತು ಸಂಕಷ್ಟ.

 

 

ರಿಯಲಿಸ್ಟಿಕ್ ಅಂಡರ್‌ವರ್ಲ್ಡ್ ಕಥೆಗಳನ್ನಾಧರಿಸಿದ ಮಾಸ್ ಚಿತ್ರಗಳ ಮೂಲಕವೇ ದೇಶಾದಂತ ಹೆಸರುವಾಸಿಯಾಗಿದ್ದವರು ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಆದರೆ ಈಗ ನೀಲಿ ಚಿತ್ರತಾರೆ ಮಿಯಾ ಮಲ್ಕೊವಾ ಅವರ ಜೀವನದ ಕುರಿತು GST(ಗಾಡ್ ಸೆಕ್ಸ್ ಅಂಡ್ ಟ್ರುಥ್) ಚಿತ್ರವನ್ನು ಮಾಡಿದ್ದಾರೆ. ಚಿತ್ರ ಇದೇ ತಿಂಗಳು 26 ರಂದು ಬಿಡುಗಡೆಯಾಗುತ್ತಿದೆ. ಆದರೆ ಈ ಚಿತ್ರಕ್ಕೆ ಈಗ ಮಹಾ ಸಂಕಟ ಎದುರಾಗಿದೆ.

ರಾಮ್​ಗೋಪಾಲ್ ವರ್ಮಾ ವಿರುದ್ಧ ಹೈದರಾಬಾದ್​​ನಲ್ಲಿ ಬಿಜೆಪಿ ಮಹಿಳಾ ಘಟಕ, ಮತ್ತು ವಿವಿಧ ಮೋರ್ಚಾಗಳು ಪ್ರತಿಭಟನೆ ನಡೆಸಿ ‘ಗಾಡ್​​​​​, ಸೆಕ್ಸ್​​​​​​​​​​​, ಟ್ರೂತ್​​ ’ ಚಿತ್ರ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಚಿತ್ರದ ಮೇಲೆ ನಿಷೇಧ ಹೇರುವಂತೆ ಆಗ್ರಹಿಸಿರುವ ಬಿಜೆಪಿ ಮಹಿಳಾ ಮೋರ್ಚಾ ಮಹಿಳೆಯರ ಬಗ್ಗೆ ಕೆಟ್ಟದಾಗಿ ಚಿತ್ರೀಕರಿಸಲಾಗಿದೆ ಹಾಗಾಗಿ ಯಾವುದೇ ಕಾರಣಕ್ಕೂ GST(ಗಾಡ್ ಸೆಕ್ಸ್ ಅಂಡ್ ಟ್ರುಥ್) ಚಿತ್ರ ರಿಲೀಸ್ ಆಗಬಾರದು ಎಂದು ಹೈದರಾಬಾದ್​’ನಲ್ಲಿ ಬಿಜೆಪಿ ಮಹಿಳಾ ಘಟಕ ಆಗ್ರಹಿಸಿದೆ.

 

 

ಈ ಸಂಭಂದ ಬಿಜೆಪಿ ಮಹಿಳಾ ಘಟಕ ಸೂರ್ಯರಾವ್ ಪೇಟೆಯ ಪೊಲೀಸ್ ಠಾಣೆಯಲ್ಲಿ ದೂರು ಧಾಖಲಿಸಿದ್ದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. “GST(ಗಾಡ್ ಸೆಕ್ಸ್ ಅಂಡ್ ಟ್ರುಥ್) ಚಿತ್ರದಿಂದ ನಮ್ಮ ಭಾರತೀಯ ಸಂಸ್ಕೃತಿಯನ್ನು ಹಾಳು ಮಾಡಲಾಗುತ್ತಿದೆ. ಇಂತಹ ಚಿತ್ರಗಳಿಗೆ ಅವಕಾಶ ಮಾಡಿಕೊಡಬಾರದು ” ಎಂಬುದು ಬಿಜೆಪಿ ಮೋರ್ಚಾಗಳ ಮಾತು.

ಸದ್ಯ ಈ ಚಿತ್ರದ ಟ್ರೈಲರ್ ಒಂದು ಬಿಡುಗಡೆಯಾಗಿ ಅದೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಿಯಾ ಮಾಲ್ಕೋವಾರನ್ನು ಬ್ಲೂ ಫಿಲಂ ಹೊರತಾಗಿ ಬೇರೆ ಆಯಾಮದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಈ ಸಿನಿಮಾಗೆ ಸಂಬಂಧಿಸಿದ ಸಂಪೂರ್ಣ ವೀಡಿಯೋವನ್ನು ಜನವರಿ 26ರ ಗಣರಾಜ್ಯೋತ್ಸವ ದಿನದಂದು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top