fbpx
ಮನೋರಂಜನೆ

ಗ್ಲಾಮರ್ ಜಗತ್ತಿನ ಕರಾಳ ಮುಖದ ಅನಾವರಣ ಮಾಡಿದ ನಟಿ ತಾಪ್ಸಿ.

ಗ್ಲಾಮರ್ ಜಗತ್ತಿನ ಕರಾಳ ಮುಖದ ಅನಾವರಣ ಮಾಡಿದ ನಟಿ ತಾಪ್ಸಿ.

 

 

ಹೀರೋಯಿನ್ನುಗಳಿಗೆ ಥರ ಥರದ ಕಾಟ ಕೊಡುವ ಪ್ರವೃತ್ತಿ ಬಾಲಿವುಡ್ ಸೇರಿದಂತೆ ಎಲ್ಲ ಭಾಷೆಗಳ ಚಿತ್ರರಂಗಕ್ಕೂ ಅಂಟಿಕೊಂಡಿರೋ ಸಾಂಕ್ರಾಮಿಕ ರೋಗ. ಭಾರತದ ಸಾಮಾಜಿಕ ರಚನೆಯಲ್ಲಿಯೇ ಹಾಸು ಹೊಕ್ಕಾಗಿರೋ ಪುರುಷಪ್ರಧಾನ ದೌಲತ್ತು ಲೀಡ್ ಹೀರೋಯಿನ್ನುಗಳನ್ನೂ ಕೂಡಾ ಯಾವ್ಯಾವ ರೀತಿಯಲ್ಲಿ ಕಾಡುತ್ತದೆ ಎಂಬುದಕ್ಕೆ ಬಾಲಿವುಡ್‌ನ ಪ್ರಸಿದ್ಧ ನಟಿ ತಾಪ್ಸಿ ಪನ್ನು ಮಾತುಗಳೇ ಸ್ಪಷ್ಟ ಸಾಕ್ಷಿ!

ಸದಾ ಟ್ರಾಲ್ ಪೇಜುಗಳಿಗೆ ಆಹಾರವಾಗುತ್ತಾ, ಆಗಾಗ ಅನ್ನಿಸಿದ್ದನ್ನು ಹೇಳಿ ವಿವಾದ ಸೃಷ್ಟಿಸುತ್ತಾ ಸುದ್ದಿಯಲ್ಲಿರುವ ತಾಪ್ಸಿ ನಟನೆಯ ಬಲದಿಂದಲೇ ಬಾಲಿವುಡ್ಡಲ್ಲಿ ಚಾಲ್ತಿಯಲ್ಲಿರುವವಳು. ಆದರೆ ಹೀಗೆ ಬಾಲಿವುಡ್ಡಲ್ಲಿ ಬೇಡಿಕೆಯ ನಟಿಯಾಗಿ ರೂಪುಗೊಂಡಿದ್ದರ ಹಿಂದೆ ತಾನು ಅನುಭವಿಸಿತ್ತಾ ಬಂದ ನಾನಾ ಕಿರುಕುಳ, ಸಂಕಟಗಳಿವೆ ಎಂಬುದನ್ನು ತಾಪ್ಸಿಯೇ ಹೇಳಿಕೊಂಡಿದ್ದಾಳೆ. ಇದಕ್ಕಾಗಿ ಬಾಲಿವುಡ್ ಸೇರಿದಂತೆ ತಾನು ನಟಿಸಿರೋ ಭಾಷೆಗಳ ಚಿತ್ರರಂಗದ ಪುರುಷ ಪ್ರಧಾನ ಮನಸ್ಥಿತಿಗಳ ಜೊತೆ ನಿರಂತರವಾಗಿ ನಾಲಕ್ಕು ವರ್ಷಗಳಿಂದ ಬಡಿದಾಡುತ್ತಾ ಬಂದಿರೋದಾಗಿಯೂ ತಾಪ್ಸಿ ಹೇಳಿಕೊಂಡಿದ್ದಾಳೆ.

 

 

ಒಂದು ಚಿತ್ರದಲ್ಲಿ ಅದೇನೇ ವಿವಾದಗಳು ಸೃಷ್ಟಿಯಾದರೂ ಅದಕ್ಕೆ ಮೊದಲು ಬಲಿಯಾಗೋದೇ ನಾಯಕಿ. ಯಾವುದೇ ಭಾಷೆಗಳ ಚಿತ್ರಗಳಲ್ಲಿ ಚಿತ್ರೀಕರಣ ನಡೆಯುತ್ತಿರೋ ಸಂದರ್ಭದಲ್ಲಿಯೇ ನಾಯಕಿಯರು ಬದಲಾಗುತ್ತಾರೆ. ಆದರೆ ನಾಯಕರು ಬದಲಾಗೋ ಉದಾಹರಣೆ ತೀರಾ ಕಡಿಮೆ. ಸಾಮಾನ್ಯವಾಗಿ ಆರಂಭದಲ್ಲಿ ಒಂದು ಮೊತ್ತದ ಸಂಭಾವನೆಗೆ ಒಪ್ಪಿಕೊಂಡು ನಾಯಕಿಯ ಆಯ್ಕೆ ನಡೆದಿರುತ್ತದೆ. ಆದರೆ ಅರ್ಧ ಚಿತ್ರೀಕರಣ ಮುಗಿದಾದ ಮೇಲೆ ಸಂಭಾವನೆ ಕಡಿತಗೊಳಿಸೋ ಮೂಲಕ ನಾಯಕಿಯನ್ನು ‘ಎಲ್ಲ’ದಕ್ಕೂ ಒಗ್ಗಿಸಿಕೊಳ್ಳೋ ಆಟ ಶುರುವಾಗುತ್ತದೆ. ಆದರೆ ನಾನು ಅಂಥವನ್ನೆಲ್ಲ ಅವುಡುಕಚ್ಚಿ ಸಹಿಸೋದಿಲ್ಲ. ಅದರ ವಿರುದ್ಧ ಧ್ವನಿಯೆತ್ತುತ್ತೇನೆ ಎಂಬುದು ತಾಪ್ಸಿ ಮಾತು.

 

 

ಹೀಗೆ ವಿರುದ್ಧ ಮಾತಾಡಿದ ನಟಿಯರನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಕೆಟ್ಟದಾಗಿ ಬಿಂಬಿಸಲಾಗುತ್ತೆ. ಇದರ ವಿರುದ್ಧ ಮತ್ತದೇ ಚಿತ್ರರಂಗದ ಅತೃಪ್ತ ಆತ್ಮಗಳು ಕೆಲಸ ಮಾಡುತ್ತಿರುತ್ತವೆ ಅಂದಿರೋ ತಾಪ್ಸಿ, ತಾನು ಪ್ರತೀ ದಿನ ಒಂದಾದರೂ ಟ್ರಾಲ್‌ಗೆ ಆಹಾರವಾಗುತ್ತಿರೋ ದುರಂತವನ್ನೂ ತೆರೆದಿಟ್ಟಿದ್ದಾಳೆ. ಎಲ್ಲವನ್ನೂ ನೇರಾ ನೇರವಾಗಿ ತಣ್ಣಗೆ ಹೇಳಿಕೊಂಡಿರೋ ತಾಪ್ಸಿ ಇದೀಗ ಬಾಲಿವುಡ್ ಮಾತ್ರವಲ್ಲದೇ ದೇಶಾದ್ಯಂತ ಸುದ್ದಿಯಲ್ಲಿದ್ದಾಳೆ. ಆಕೆ ಎತ್ತಿರೋ ವಿಚಾರಗಳ ಬಗ್ಗೆ ಎಲ್ಲಡೆ ಚರ್ಚೆಗಳಾಗುತ್ತಿವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top