fbpx
ಕಿರುತೆರೆ

ಅನುಪಮಾ ನಂತರ ಬಿಗ್’ಬಾಸ್ ಮನೆಯಿಂದ ಹೊರ ಹೋಗಲಿರುವ ಸ್ಪರ್ಧಿ ಯಾರು ಗೊತ್ತಾ?

ಅನುಪಮಾ ನಂತರ ಬಿಗ್’ಬಾಸ್ ಮನೆಯಿಂದ ಹೊರ ಹೋಗಲಿರುವ ಸ್ಪರ್ಧಿ ಯಾರು ಗೊತ್ತಾ?

 

 

ಬಿಗ್ ಬಾಸ್ ಸೀಸನ್ 5 ಇನ್ನೇನು ಮುಗಿಯುವ ಹಂತ ತಲುಪಿದ್ದು ಕೇವಲ ಇನ್ನು ಕೆಲವೇ ದಿನಗಳಲ್ಲಿ ಗ್ರ್ಯಾಂಡ್ ಫೈನಲ್ ನಡೆಯಲಿದೆ. ಈ ಹಂತದಲ್ಲಿ ನೆನ್ನೆ ಅನುಪಮಾ ಗೌಡ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಆರಂಭದಲ್ಲಿ ಅನುಪಮಾ ಫೈನಲ್ ಬರುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು ಆದರೆ ಅನುಪಮಾ ಅವರ ಕೆಲವು ವರ್ತನೆಗಳು ವೀಕ್ಷಕರಿಗೆ ಬೇಸರವನ್ನುಂಟು ಮಾಡುತ್ತಿದ್ದುದು ಸುಳ್ಳಲ್ಲ. ಸೋಷಿಯಲ್ ಮೀಡಿಯಾಗಳಲ್ಲಿ ಅವರ ಬಗ್ಗೆ ಸಿಕ್ಕಾಪಟ್ಟೆ ಟ್ರೊಲ್ ಆಗುತ್ತಿತ್ತು.

 

 

ಮನೆಗೆ ಎಂಟ್ರಿಕೊಟ್ಟಿದ್ದ 18 (2 ವೈಲ್ಡ್ ಕಾರ್ಡ್ ಎಂಟ್ರಿ)ಜನ ಸ್ಪರ್ಧಿಗಳ ಪೈಕಿ ಈಗಾಗಲೇ 12 ಮಂದಿ ಮನೆಯಿಂದ ಹೊರ ಹೋಗಿದ್ದು ಈಗ ಕೇವಲ 6 ಜನ ಸದಸ್ಯರಷ್ಟೇ ಬಿಗ್ ಬಾಸ್ ಮನೆಯ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಆದರೆ ಫಿನಾಲೆಗೆ ಪ್ರವೇಶವಿರುವುದು ಕೇವಲ ಐದು ಜನರಿಗೆ ಮಾತ್ರ.. ಹಾಗಾಗಿ ನಾಳೆ ಇನ್ನೊಂದು ಎಲಿಮಿನೇಷನ್ ನಡೆಯಲಿದೆ. ಜಿಕೆ, ಶೃತಿ, ದಿವಾಕರ್, ನಿವೇದಿತಾ, ಸಮಿರಾಚಾರ್ಯ ಮತ್ತು ಚಂದನ್ ಶೆಟ್ಟಿ ಒಳಗೊಂಡ ಆರುಜನರಲ್ಲಿ ಒಬ್ಬ ಸ್ಪರ್ಧಿ ಮನೆಯಿಂದ ಹೊರಬರಲಿದ್ದಾರೆ. ಮೂಲಗಳ ಪ್ರಕಾರ ಶ್ರುತಿ ಪ್ರಕಾಶ್ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎಂದು ತಿಳಿದು ಬಂದಿದೆ.

ನಂತರ ಉಳಿಯುವ ಐದು ಜನರಲ್ಲಿ ಬಿಗ್ ಬಾಸ್ ಟ್ರೋಫಿ ಗೆಲ್ಲುವರಾರು, ರನ್ನರ್ ಅಪ್ ಆಗುವವರು ಯಾರು ಎಂಬ ಪ್ರಶ್ನೆಗಳಿಗೆ ಮುಂದಿನ ಭಾನುವಾರ ಉತ್ತರ ಸಿಗಲಿದೆ. ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ವೋಟ್ ಮಾಡಲು ಐದು ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top