fbpx
ಮನೋರಂಜನೆ

ಹೊಸ ರೂಪದ ಮಜಾಟಾಕೀಸ್ ಸೂಪರ್ ಸೀಸನ್’ನಲ್ಲಿ ಎಲ್ಲವೂ ಅದಲು ಬದಲು!

ಹೊಸ ರೂಪದ ಮಜಾಟಾಕೀಸ್ ಸೂಪರ್ ಸೀಸನ್’ನಲ್ಲಿ ಎಲ್ಲವೂ ಅದಲು ಬದಲು!

 

 

ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿಬರುತ್ತಿದ್ದ ಮಜಾ ಟಾಕೀಸ್ ಶೋನ ಮೊದಲ ಸೀಸನ್ ಭರ್ಜರಿ ಯಶಸ್ಸನ್ನು ಗಳಿಸಿತ್ತು ಸುಮಾರು 250 ಕ್ಕೂ ಅಧಿಕ ಎಪಿಸೋಡ್ಗಳನ್ನ ಪ್ರಸಾರ ಮಾಡಿದ್ದ ಮಜಾಟಾಕೀಸ್ ಅತಿಹೆಚ್ಚು ಎಪಿಸೋಡ್ ಗಳನ್ನೂ ಪ್ರಸಾರ ಮಾಡಿದ ಕಾಮಿಡಿ ಷೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ವಾರಾಂತ್ಯದಲ್ಲಿ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮದ ಕಲಾವಿದ ಕಾಮಿಡಿ ಸೃಜನ್ ನಿರೂಪಣೆಗೆ ವೀಕ್ಷಕರು ಫಿದಾ ಆಗಿದ್ದರು. ಆದರೆ ಕೆಲವು ದಿನಗಳ ಹಿಂದೆಯಷ್ಟೇ ಮಜಾ ಟಾಕೀಸ್ ಮುಕ್ತಾಯಗೊಂಡಿತ್ತು.

ಕಿರುತೆರೆಯಲ್ಲಿ ಎಲ್ಲರನ್ನೂ ನಕ್ಕು ನಲಿಸುತ್ತಿದ್ದ ‘ಮಜಾ ಟಾಕೀಸ್’ ಹೊಸ ಸೀಸನ್ ಆರಂಭವಾಗುತ್ತಿದೆ. ಈ ಸಲ ಹಲವಾರು ಬದಲಾವಣೆಗಳೊಂದಿಗೆ ಹೊಸತನದಿಂದ ಈ ಕಾಮಿಡಿ ಶೋ ಮೂಡಿಬರಲಿದೆ. ಫೆಬ್ರವರಿ 08ರಿಂದ ಪ್ರಾರಂಭವಾಗುತ್ತಿರುವ ಮಜಾ ಟಾಕೀಸ್ ಸೂಪರ್ ಸೀಸನ್ ಕಾರ್ಯಕ್ರಮ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿದೆ. ಹೊಸ ವಿನ್ಯಾಸ, ಹೊಸ ಮಾಧುರ್ಯ ಒಂದಷ್ಟು ಹೊಸ ಪಾತ್ರಗಳೊಂದಿಗೆ ಕಾರ್ಯಕ್ರಮ ಇನ್ನಷ್ಟು ರಂಗೇರಿಸಲಿದೆ.

 

 

ಮುಖ್ಯವಾಗಿ ಈ ಭಾರಿಯ ಕಾರ್ಯಕ್ರಮ ಪ್ರಸಾರವಾಗುತ್ತಿರುವುದು ಕಲರ್ಸ್ ಕನ್ನಡ ಚಾನೆಲ್’ನಲ್ಲಿ ಅಲ್ಲ ಬದಲಾಗಿ ಅದರ ಮತ್ತೊಂದು ಅಂಗ ಸಂಸ್ಥೆಯಾದ ಕಲರ್ಸ್ ಸೂಪರ್ ಚಾನೆಲ್’ನಲ್ಲಿ. ಕಳೆದ ಭಾರಿ ವೀಕೆಂಡ್ ಗಳಲ್ಲಿ(ಶನಿವಾರ ಮತ್ತು ಭಾನುವಾರ) ಪ್ರಸಾರವಾಗುತ್ತಿದ್ದ ಮಜಾ ಟಾಕೀಸ್ ಈ ಭಾರಿ ಗುರುವಾರ ಮತ್ತು ಶುಕ್ರವಾರ ರಾತ್ರಿ ಎಂಟು ಗಂಟೆಗೆ ಪ್ರಸಾರವಾಗಲಿದೆಯಂತೆ, ಹೀಗಂತ ಸ್ವತಃ ಸೃಜನ್ ಲೋಕೇಶ್ ಅವರೇ ಹೇಳಿದ್ದಾರೆ. ಏನೇ ಬದಲಾವಣೆಯಾಗಲಿ ಹಿಂದಿನ ಸೀಸನ್’ನಂತೆ ಈ ಭಾರಿಯ ಪ್ರತಿ ಎಪಿಸೋಡ್‌ನಲ್ಲೂ ಭರ್ಜರಿ ಮನರಂಜನೆಗೆ ನಿರಾಸೆಯಾಗುವುದಿಲ್ಲ ಎನ್ನುವುದು ಸೃಜನ್ ಅಂಡ್ ಟೀಮ್’ನ ವಿಶ್ವಾಸ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top