fbpx
ಮನೋರಂಜನೆ

ಕನ್ನಡ ಮೀಡಿಯಂ ರಾಜು ಚಿತ್ರ ನೋಡಲಿದ್ದಾರಾ ಸಿಎಂ ಸಿದ್ದು?

ಕನ್ನಡ ಮೀಡಿಯಂ ರಾಜು ಚಿತ್ರ ನೋಡಲಿದ್ದಾರಾ ಸಿಎಂ?

 


ಗುರುನಂದನ್ ನಟಿಸಿರುವ ರಾಜು ಕನ್ನಡ ಮೀಡಿಯಂ ಚಿತ್ರ ಇದೀಗ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಒಂದು ಚಿತ್ರ ತನ್ನೊಳಗಿನ ಕಂಟೆಂಟ್, ಕ್ರಿಯೇಟಿವಿಟಿಗಳ ಮೂಲಕವೇ ಸದ್ದು ಮಾಡೋ ಸಕಾರಾತ್ಮಕ ಪ್ರಕ್ರಿಯೆಗೆ ಸಾಕ್ಷಿಯಂತಿರೋ ಈ ಚಿತ್ರ ಪ್ರೇಕ್ಷಕರ ನಿರೀಕ್ಷೆಗಳನ್ನು ತಣಿಸುವಲ್ಲಿಯೂ ಯಶ ಕಂಡಿದೆ. ಸುದೀಪ್ ಒಂದು ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿರೋದೂ ಸೇರಿದಂತೆ ನಾನಾ ಆಕರ್ಷಣೆಗಳನ್ನು ಹೊಂದಿದ್ದ ಈ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಂಡು ಮುಂದುವರೆಯುತ್ತಿದೆ.

ಎಲ್ಲೆಡೆಯಿಂದ ಒಳ್ಳೆ ಮಾತುಗಳಿಗೆ ಕಾರಣವಾಗಿರೋ ರಾಜು ಕನ್ನಡ ಮೀಡಿಯಂ ಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ನೋಡಲಿದ್ದಾರಾ ಅಂತೊಂದು ಪ್ರಶ್ನೆ ಈಗ ಎಲ್ಲೆಡೆ ಹರಿದಾಡುತ್ತಿದೆ. ಈ ಚಿತ್ರತಂಡವೇ ಜಾಹೀರು ಮಾಡಿರೋ ಸುದ್ದಿಯ ಪ್ರಕಾರ ನೋಡ ಹೋದರೆ ಆ ಸಾಧ್ಯತೆಗಳು ಹೆಚ್ಚಾಗಿವೆ!
ಕನ್ನಡ ಮೀಡಿಯಂನಲ್ಲಿ ಓದಿದ ಹುಡುಗನೊಬ್ಬ ಬದುಕಿನ ವಿವಿಧ ಮಗ್ಗುಲುಗಳನ್ನು ದಾಟಿಕೊಂಡು ಯಶ ಕಾಣುವ ಕಥಾ ಹಂದರವನ್ನು ಈ ಚಿತ್ರ ಒಳಗೊಂಡಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಕೂಡಾ ಕನ್ನಡ ಮೀಡಿಯಂನಲ್ಲಿ ಓದಿಯೇ ಈ ಹಂತಕ್ಕೇರಿರುವವರು. ಮೇಲಾಗಿ ಒಳ್ಳೆ ಚಿತ್ರಗಳು ಬಂದರೆ ಬಿಡುವು ಮಾಡಿಕೊಂಡು ನೋಡುವ ಮನಸ್ಥಿತಿ ಇರುವವರು. ಆದ್ದರಿಂದಲೇ ಚಿತ್ರ ತಂಡ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚಿತ್ರವನ್ನು ನೋಡುವಂತೆ ಆಹ್ವಾನ ನೀಡಿದೆಯಂತೆ. ಸಿದ್ದು ಕೂಡಾ ಖುಷಿಯಾಗಿಯೇ ಒಪ್ಪಿಕೊಂಡಿದ್ದಾರೆ. ಅವರು ದಿನದೊಪ್ಪತ್ತಿನಲ್ಲಿಯೇ ಬಿಡುವು ಮಾಡಿಕೊಂಡು ಚಿತ್ರವನ್ನು ವೀಕ್ಷಿಸುವ ಸಾಧ್ಯತೆಗಳಿವೆ.

 


ಟೈಟಲ್ ಹೇಳುವಂತೆ ಕನ್ನಡದ ಬಗ್ಗೆ ಪ್ರಧಾನ ಅಂಶಗಳು ಈ ಚಿತ್ರದಲ್ಲಿವೆ. ಗೋವಿಂದಾಯ ನಮಃ, ಶ್ರಾವಣಿ ಸುಬ್ರಮಣ್ಯ, ಶಿವಲಿಂಗ ಸಿನಿಮಾಗಳನ್ನು ನಿರ್ಮಿಸಿ ಸತತವಾಗಿ ಯಶಸ್ಸು ಕಂಡಿರುವ ನಿರ್ಮಾಣ ಸಂಸ್ಥೆ ಒಂದೆಡೆಯಾದರೆ, ಫಸ್ಟ್ ರ‍್ಯಾಂಕ್ ರಾಜು ಎಂಬ ಸಕ್ಸಸ್ ಬಳಿಕ ಅದೇ ನಾಯಕ, ನಿರ್ದೇಶಕ, ಸಂಗೀತ ನಿರ್ದೇಶಕ ಸೇರಿದಂತೆ ಬಹುತೇಕ ಅದೇ ತಂಡ ಈ ಚಿತ್ರಕ್ಕೂ ಕೆಲಸ ಮಾಡಿರುವುದು ಪ್ರಾರಂಭದಿಂದಲೇ ಬೇಡಿಕೆ ಹೆಚ್ಚಿಸಿಕೊಂಡಿತ್ತು. ಇದೀಗ ಈ ಚಿತ್ರ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ.

ರಾಜು ಕನ್ನಡ ಮೀಡಿಯಂ ಚಿತ್ರದ ಬಿಡುಗಡೆ ಪೂರ್ವ ದಾಖಲೆಗಳೂ ಕೂಡಾ ಗಮನ ಸೆಳೆಯುವಂತಿವೆ. ಇದರ ಟ್ರೈಲರ್ ಐವತ್ತೆರಡು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿತ್ತು. ಇದು ಖಂಡಿತಾ ಕನ್ನಡ ಚಿತ್ರಗಳ ಮಟ್ಟಿಗೆ ದೊಡ್ಡ ದಾಖಲೆ. ಟೀಸರ್, ಫಸ್ಟ್ ಲುಕ್, ಹಾಡು ಸೇರಿದಂತೆ ಚಿತ್ರ ತಂಡದ ಪ್ರತೀ ಕೆಲಸ ಕಾರ್ಯಗಳಿಗೂ ಪ್ರೇಕ್ಷಕರು ಫಿದಾ ಆಗಿದ್ದರು. ಇದೀಗ ಅಂಥಾ ಪ್ರೇಕ್ಷಕರೆಲ್ಲರೂ ಕನ್ನಡ ಮೀಡಿಯಂ ರಾಜುನನ್ನು ಅಪ್ಪಿಕೊಂಡಿದ್ದಾರೆ. ಇಂಥಾ ಚಿತ್ರವನ್ನು ಮುಖ್ಯಮಂತ್ರಿಗಳೇ ನೋಡುವ ಕ್ಷಣಗಳು ಹತ್ತಿರದಲ್ಲಿವೆ!

 

 

ಟ್ವೀಟ್ ಮೂಲಕ ಸುದೀಪ್ ಏನಂದ್ರು ಗೊತ್ತಾ?
ರಾಜು ಕನ್ನಡ ಮೀಡಿಯಂ ಚಿತ್ರಕ್ಕೆ ನಿರೀಕ್ಷೆಯಂತೆಯೇ ಭರ್ಜರಿ ಓಪನಿಂಗ್ ಸಿಕ್ಕಿದೆ. ಇಂಥಾ ಅಮೋಘವಾದ ಬೆಂಬಲ ಕಂಡು ಚಿತ್ರ ತಂಡವೂ ಖುಷಿಗೊಂಡಿದೆ. ಇದೆಲ್ಲವನ್ನು ಈ ಚಿತ್ರದ ಮುಖ್ಯ ಭಾಗವಾಗಿಯೇ ಗಮನಿಸುತ್ತಿರೋ ಕಿಚ್ಚಾ ಸುದೀಪ್ ಅವರು ಈ ಬಗ್ಗೆ ಟ್ವೀಟ್ ಮಾಡೋ ಮೂಲಕ ಸಂತಸ ಹಂಚಿಕೊಂಡಿರೋದಲ್ಲದೆ ಈ ಚಿತ್ರವನ್ನು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಲ್ಲಿ ವೀಕ್ಷಿಸುವಂತೆ ಮನವಿಯನ್ನೂ ಮಾಡಿದ್ದಾರೆ. ಅಪರಿಮಿತವಾದ ಉತ್ಸಾಹ ಹೊಂದಿರೋ ರಾಜು ಕನ್ನಡ ಮೀಡಿಯಂ ಚಿತ್ರತಂಡ ಎಲ್ಲರ ನಂಬಿಕೆಗೆ ಅರ್ಹವಾಗಿದೆ. ತಾವೆಲ್ಲರೂ ಚಿತ್ರ ಮಂದಿರಕ್ಕೇ ಹೋಗಿ ಈ ಚಿತ್ರವನ್ನು ನೋಡೋ ಮೂಲಕ ದೊಡ್ಡ ಮಟ್ಟದಲ್ಲಿ ಬೆಂಬಲಿಸಿ ಅಂತ ಸುದೀಪ್ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಸುದೀಪ್ ಇಂಥಾ ಚೆಂದದೊಂದು ಚಿತ್ರದಲ್ಲಿ ತಮ್ಮನ್ನೂ ಪ್ರಮುಖ ಭಾಗವಾಗಿಸಿಕೊಂಡಿದ್ದಕ್ಕೆ ಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ನಿರೀಕ್ಷೆಯಂತೆಯೇ ಈ ಚಿತ್ರದಲ್ಲಿ ಸುದೀಪ್ ಅವರ ಪಾತ್ರ ಪ್ರೇಕ್ಷಕರ ಮನ ಗೆದ್ದಿದೆ. ಅದುವೇ ಇಡೀ ಚಿತ್ರದ ಪ್ರಮುಖ ಆಕರ್ಷಣೆಯಾಗಿಯೂ ಅಭಿಮಾನಿಗಳನ್ನು ಆವರಿಸಿಕೊಂಡಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top