fbpx
ಮನೋರಂಜನೆ

ಚಿತ್ರರಂಗದಲ್ಲಿ ಕಾಮುಕ ನಿರ್ಮಾಪಕರಿದ್ದಾರೆ ಎಂದು ಶ್ರುತಿ ಹರಿಹರನ್ ಹೇಳಿದ ಮಾತಿಗೆ ಜಗ್ಗೇಶ್ ಹೇಳಿದ್ದಿಷ್ಟು.

ಚಿತ್ರರಂಗದಲ್ಲಿ ಕಾಮುಕ ನಿರ್ಮಾಪಕರಿದ್ದಾರೆ ಎಂದು ಶ್ರುತಿ ಹರಿಹರನ್ ಹೇಳಿದ ಮಾತಿಗೆ ಜಗ್ಗೇಶ್ ನೀಡಿದ ಪ್ರತಿಕ್ರಿಯೆ ಹೀಗಿದೆ.

 

Image result for shruti hariharan

 

ನಟಿ ಶೃತಿ ಹರಿಹರನ್ ಕನ್ನಡ ಚಿತ್ರರಂಗದ ಕಾಮಪುರಾಣವನ್ನು ಬಯಾಬಯಲು ಮಾಡಿದ್ದು, ಈ ಹಿಂದೆ ತಮ್ಮನ್ನು ಐದು ಮಂದಿ ನಿರ್ಮಾಪಕರು ಮಂಚಕ್ಕೆ ಕರೆದಿದ್ದರು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಹೈದರಾಬಾದಿನಲ್ಲಿ ನಡೆದ ಇಂಡಿಯಾ ಟುಡೆ ಆಯೋಜಿಸಿದ್ದ ‘ಸಿನಿಮಾದಲ್ಲಿ ಲೈಂಗಿಕತೆ’ ಎಂಬ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿದ್ದ ಶೃತಿ ಹರಿಹರನ್, ತಾವು ಎದುರಿಸಿದ ಕಹಿ ಪರಿಸ್ಥಿತಿಯನ್ನು ವಿವರಿಸಿದ್ದು ಹೀಗೆ.

‘ನಾನು ಕೂಡ ಕಾಸ್ಟಿಂಗ್ ಕೌಚ್ ಕಹಿಯನ್ನು ಎದುರಿಸಿದ್ದೇನೆ. ನಾನು ಚಿತ್ರರಂಗಕ್ಕೆ ಬಂದಾಗ ನನಗೆ 18 ವರ್ಷ. ಆಗ ನಾನು ಎದುರಿಸಿದ ಪರಿಸ್ಥಿತಿ, ಅದರಿಂದ ಬೇಸತ್ತು ಕಣ್ಣೀರಿಟ್ಟಿದ್ದು,ಈಗಲೂ ಕಣ್ಣಮುಂದೆ ಬರುತ್ತದೆ. ಆ ಸಂದರ್ಭದಲ್ಲಿ ನನ್ನ ನೃತ್ಯ ಸಂಯೋಜಕರೊಬ್ಬರ ಬಳಿ ಈ ವಿಷಯವನ್ನು ಹೇಳಿಕೊಂಡೆ ಆಗ ಅವರು, ಇಂತಹ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಲು ಸಾಧ್ಯವಾಗದಿದ್ದರೆ ಚಿತ್ರರಂಗ ಬಿಟ್ಟು ಹೋಗುವುದು ಉತ್ತಮ ಎಂದು ಹೇಳಿದ್ದರು.

 

 

ಮೊದಲ ಕಹಿ ಘಟನೆಯಾದ ನಾಲ್ಕು ವರ್ಷದ ನಂತರ ಮತ್ತೆ ಇಂತಹುದೇ ಪರಿಸ್ಥಿತಿ ನನಗೆ ಎದುರಾಯಿತು.

ಬಳಿಕ ನನ್ನದೇ ಕನ್ನಡ ಚಲನಚಿತ್ರವೊಂದನ್ನು ತಮಿಳಿನಲ್ಲಿ ರಿಮೇಕ್​ ಮಾಡಲಿದ್ದ ಖ್ಯಾತ ನಿರ್ಮಾಪಕನೊಬ್ಬ ತಮಗೆ ಕರೆ ಮಾಡಿ, ಅದೇ ಪಾತ್ರ ನಮ್ಮ ಚಿತ್ರದಲ್ಲಿಯೂ ನಿವೇ ಮಾಡಿ ಎಂದಿದ್ದರು. ಆದರೆ, ನಾವು 5 ಜನರಿದ್ದೇವೆ ಅಡ್ಜಸ್ಟ್​ ಮಾಡಿಕೋ ಎಂದ್ದಿದ್ದರು. ಕೂಡಲೇ ನಾನು ಚಪ್ಪಲಿ ತಗೋತೀನಿ ಎಂದಿದೆ.. ಈ ಘಟನೆಯಿಂದ ನಾನು ಗಾಬರಿಯಾಗಿದ್ದೆ. ಚಿತ್ರರಂಗದಲ್ಲಿ ಹೆಣ್ಣು ಮಾರಾಟದ ವಸ್ತುವಾಗಿದ್ದಾಳೆ. ಓರ್ವ ನಿರ್ದೇಶಕನಂತೂ ವಿಚಿತ್ರವಾಗಿ ಮಾತನಾಡಿದ್ದ. ಹಿರೋಯಿನ್ ರನ್ನು ನೋಡಿದರೆ ವಾವ್ಹ್…ಅನ್ನಿಸಬೇಕು… ಎಂದು ಹೇಳಿದ್ದರು ಎಂದು ಶೃತಿ ಹೇಳಿಕೊಂಡಿದ್ದಾರೆ. ಒಟ್ಟಾರೆ ಚಿತ್ರರಂಗದ ಕೆಲ ನಿರ್ಮಾಪಕ, ನಿರ್ದೇಶಕರ ಕಾಮಪುರಾಣ ಇಡೀ ಚಿತ್ರರಂಗಕ್ಕೆ ಕಪ್ಪು ಮಸಿ ಬಳಿಯುತ್ತಿದೆ.

 

 

ಇದರ ಬಗ್ಗೆ ಪ್ರಕ್ರಿಯೆ ನೀಡಿರುವ ಹಿರಿಯ ನಟ ಜಗ್ಗೇಶ್ ತಮ್ಮ ಟ್ವಿಟರ್ ಅಕೌಂಟಿನಲ್ಲಿ ಸರಣಿ ಟ್ವೀಟ್ ಮಾಡಿ ನಟಿಗೆ ಸಲಹೆಯನ್ನು ನೀಡಿದ್ದಾರೆ.

“ಒಬ್ಬ ಹಿರಿಯನಟನಾಗಿ ಹೇಳುವೆ..ಆ ರೀತಿ ಯಾರೆ ನಿಮಗೆ ತಲಹರಟೆ ಮಾಡಿದ್ದರೆ ದೈರ್ಯವಾಗಿ ಹೆಸರುಹೇಳಿ ಕಾನೂನು ಕ್ರಮಕ್ಕೆಯತ್ನಿಸಿ..!ಎಲ್ಲೋ ಯಾರೋ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟು ಗೊಂದಲ ಶೃಷ್ಠಿಸಬೇಡಿ..ನಮ್ಮ ಉಧ್ಯಮಕ್ಕೆ ತನ್ನದೆ ಆದ ಘನತೆ ಇದೆ..ಜಾಲತಾಣ ಙ್ನಾನಕ್ಕೆ ಪ್ರೀತಿಗೆ ವಿಷಯ ವಿನಿಮಯಕ್ಕೆ ಬಳಸುವ..ಸ್ವಾರ್ಥಕ್ಕೆ ಬೇಡ..ವಿನಂತಿ..!”

“ನಮ್ಮ ವಾಣಿಜ್ಯ ಮಂಡಳಿ, ನಿರ್ಮಾಪಕ, ಕಲಾವಿದರ ಸಂಘ ಹಾಗೂ ಮಾಧ್ಯಮ ತುಂಬ strong ಇದೆ ಯಾರಿಗೆ ಏನೆ ಸಮಸ್ಯ ಆದರು ನೇರವಾಗಿ ಮುಲಾಜಿಲ್ಲದೆ ದೂರು ನೀಡಿ..ಒಂದುವೇಳೆ ಹೆಣ್ಣಮಕ್ಕಳಿಗೆ ತೊಂದರೆ ನೀಡುವರಿದ್ದರೆ ಎಂದು ಅವರು ಕಾರ್ಯಮಾಡದಂತೆ ತಡೆದು ಬುಧ್ಧಿ ಕಲಿಸುತ್ತೇವೆ..!ನಾವುಗಳಿದ್ದೇವೆ ಧೈರ್ಯವಾಗಿ ಕಾರ್ಯಮಾಡಿ..ಉಧ್ಯಮದ ಪರವಾಗಿ ನಿಮ್ಮೊಂದಿಗೆ.”

“ನಮ್ಮ ಕಲಾವಿದರ ಸಂಘ ಉಧ್ಘಾಟನೆಗೆ ಕಾಯುತ್ತಿದ್ದೇವೆ..ಇದಾದನಂತರ ಉಧ್ಯಮ ಶಿಸ್ತಿನಿಂದ ವರ್ತಿಸಲು ನಿಯಮ ಜಾರಿಗೆ ತರಲು ಒತ್ತಾಯ ಮಾಡುವೆ..ಸರಿಯಾದ ಬೈಲಾ ಇಲ್ಲದೆ ಸ್ವಲ್ಪ ಏರುಪೇರಾಗಿದೆ..!ಎಲ್ಲರು ಒಂದೆಡೆ ಕೂತ ಮಾತಾಡಿದರೆ ಭವಿಷ್ಯ ಶಿಸ್ತುಬಧ್ಧವಾಗಿರುತ್ತದೆ ಅನ್ನಿಸುತ್ತದೆ..ಆ ದಿನ ಬೇಗ ಬರಲಿ ಎಂದು ಆಶಿಸುವೆ..” ಎಂದು ಹೇಳಿದ್ದಾರೆ.

 

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top