fbpx
ಮನೋರಂಜನೆ

ರಾಗಿಣಿಯ ಗುಪ್ತ ಗೆಳೆಯ ಯಾರು?

ರಾಗಿಣಿಯ ಗುಪ್ತ ಗೆಳೆಯ ಯಾರು?

 

 

ವೀರ ಮದಕರಿ ಚಿತ್ರದಲ್ಲಿ ಕಿಚ್ಚಾ ಸುದೀಪ್ ಜೋಡಿಯಾಗಿ ಬಂದ ಘಳಿಗೆಯಲ್ಲಿ ಚಿಗರೆಯಂತಿದ್ದ ನಟಿ ರಾಗಿಣಿ. ಆ ನಂತರದಲ್ಲಿ ಹೀರೋ ಕಂ ಹೀರೋಯಿನ್ನಾಗಿ, ಮಾಸ್ ಲುಕ್ಕಲ್ಲಿ ಕಂಗೊಳಿಸುತ್ತಿರೋ ರಾಗಿಣಿಗೆ ಅಭಿಮಾನಿಗಳ ಸಂಖ್ಯೆಯೇನು ಕಡಿಮೆಯಿಲ್ಲ. ಆ ಲಿಸ್ಟಿನಲ್ಲಿರೋ ಗಂಡು ಅಭಿಮಾನಿಗಳೆಲ್ಲ ರಾಗಿಣಿಯ ಖಾಸಗಿ ಬದುಕಿನ ಬಗ್ಗೆ ಆಕೆಯ ಚಿತ್ರಗಳಿಗಿಂತಲೂ ಹೆಚ್ಚಾಗಿ ಆಸಕ್ತಿ ಹೊಂದಿದ್ದಾರೆ!

ರಾಗಿಣಿಗೆ ಬಾಯ್ ಫ್ರೆಂಡ್ ಇದ್ದಾರಾ ಎಂಬ ಪ್ರಶ್ನೆಯನ್ನಂತೂ ಆಕೆಯ ಅಭಿಮಾನಿಗಳು ಒಳಗಿಟ್ಟುಕೊಳ್ಳಲೂ ಆಗದೆ, ಕಾರಿಕೊಳ್ಳಲೂ ಆಗದೆ ಕಂಗಾಲಾಗಿದ್ದರು. ಅಂಥ ಸಮಸ್ತರ ಎದೆಗೂ ಬೆಂಕಿ ಬೀಳುವಂಥಾದ್ದೊಂದು ವಿಚಾರವನ್ನು ಸ್ವತಃ ರಾಗಿಣಿ ಜಾಹೀರು ಮಾಡಿದ್ದಾರೆ!.

 

 

ರಾಗಿಣಿ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗಲೂ ಈ ಖಾಸಗೀ ಪ್ರಶ್ನೆಗಳು ತೇಲಿ ಹೋಗುತ್ತಿದ್ದವು. ಆದರೆ ಆಕೆ ಹಾರಿಕೆಯ ಉತ್ತರ ಕೊಟ್ಟು, ಕೀಟಲೆ ಮಾಡಿ ಆ ಪ್ರಶ್ನೆಯನ್ನೇ ಮರೆಸುತ್ತಿದ್ದರು. ಮೊನ್ನೆ ದಿನ ರಾಗಿಣಿ ಖಾಸಗೀ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಲ್ಲಾ? ಆ ಸಂದರ್ಭದಲ್ಲಿಯೂ ಈ ಮದುವೆ ಮುಂತಾದ ಖಾಸಗಿ ವಿಚಾರಗಳ ಬಗ್ಗೆ ಪ್ರಸ್ತಾಪವಾಗಿತ್ತು. ಅದಕ್ಕೆಲ್ಲ ರಾಗಿಣಿ ಕೊಂಚ ನಿಗೂಢವಾಗಿಯೇ ಉತ್ತರ ಕೊಟ್ಟಿದ್ದಾರೆ!

ಅವರೇ ಹೇಳಿಕೊಂಡಿರೋ ಪ್ರಕಾರ ಅವರ ಬದುಕಿನಲ್ಲೋರ್ವ ವಿಶೇಷ ವ್ಯಕ್ತಿಯ ಪ್ರವೇಶವಾಗಿದೆ. ಆದರೆ ಎಂಗೇಜ್‌ಮೆಂಟ್, ಮದುವೆ ಮುಂತಾದವುಗಳ ಬಗ್ಗೆ ಸದ್ಯಕ್ಕೆ ಏನೂ ನಿರ್ಧಾರ ತೆಗೆದುಕೊಂಡಿಲ್ಲವಂತೆ. ಆದರೆ ರಾಗಿಣಿ ಆ ಹಾದಿಯಲ್ಲಿರೋದಂತೂ ನಿಜ ಎಂಬುದನ್ನು ಆಕೆಯೇ ಒಪ್ಪಿಕೊಂಡಿದ್ದಾರೆ! ಹೀಗೆ ರಾಗಿಣಿ ಹೇಳಿದೇಟಿಗೆ ಕೆಲ ಮಂದಿ ಆ ವಿಶೇಷ ವ್ಯಕ್ತಿ ಯಾರೆಂಬುದನ್ನು ಹುಡುಕಲು ನಿಂತಿದ್ದಾರಂತೆ. ಆಕೆಯ ಅಭಿಮಾನಿಗಳಂತೂ ಆತ ಯಾರೆಂಬ ಬಗ್ಗೆ ಯಾರಾದರೂ ಆದಷ್ಟು ಬೇಗನೆ ಡೀಟೇಲುಗಳನ್ನು ಜಾಹೀರು ಮಾಡಲಿ ಅಂತ ಕಾದು ನಿಂತಿದ್ದಾರೆ. ಆದರೆ ರಾಗಿಣಿಯೇ ಹೇಳಿಕೊಳ್ಳುವವರೆಗೂ ಆಕೆಯ ಗುಪ್ತ ಗೆಳೆಯ ಗುಪ್ತವಾಗಿರೋ ಸಾಧ್ಯತೆಗಳೇ ಹೆಚ್ಚು!

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top