ವಿಜಯ್ ಅಭಿಮಾನಿಗಳಿಗೆ ದೀಪಾವಳಿ ಧಮಾಕಾ!
ತಮಿಳು ಚಿತ್ರರಂಗದಲ್ಲಿ ಮತ್ತೊಮ್ಮೆ ಮೈಕೊಡವಿಕೊಂಡು ಗೆಲುವಿನ ಓಟ ಆರಂಭಿಸಿರೋ ನಟ ವಿಜಯ್. ಮತ್ತೆ ಮೇಲೆದ್ದು ನಿಂತಿರೋ ವಿಜಯ್ ಮುಂದಿನ ಚಿತ್ರಗಳ ಬಗ್ಗೆ ಅಭಿಮಾನಿಗಳಂತೂ ಕಾತರರಾಗಿ ಕಾಯುತ್ತಲೇ ಇದ್ದಾರೆ. ಸದ್ಯ ಅವರೆಲ್ಲರ ಬಹು ನಿರೀಕ್ಷಿತ ಚಿತ್ರ ವಿಜಯ್ ಮತ್ತು ಮುರುಗಾದಾಸನ್ ಕಾಂಬಿನೇಷನ್ನಿನ ಮೂರನೇ ಚಿತ್ರ ದಳಪತಿ ೬೨!
ಇದೀಗ ಚಿತ್ರೀಕರಣ ನಡೆಸಿಕೊಳ್ಳುತ್ತಿರೋ ಈ ಚಿತ್ರವನ್ನು ಇದೇ ದೀಪಾವಳಿ ಹಬ್ಬಕ್ಕೆ ತೆರೆಗೆ ತರೋದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಈ ವರ್ಷವೇ ಈ ಚಿತ್ರ ನೋಡಲೇಬೇಕೆಂಬ ಇರಾದೆಯಿಂದಿದ್ದ ಅಭಿಮಾನಿಗಳೆಲ್ಲರೂ ಈಗ ಹೊರ ಬಿದ್ದರೋ ಸುದ್ದಿಯಿಂದ ಖುಷಿಗೊಂಡಿದ್ದಾರೆ.
ಈ ಹಿಂದೆ ತುಪಾಕಿ, ಕತ್ತಿ ಮುಂತಾದ ಚಿತ್ರಗಳ ಮೂಲಕ ಭಾರೀ ಗೆಲುವು ದಾಖಲಿಸಿದ್ದ ಜೋಡಿ ಮುರುಗದಾಸನ್ ಮತ್ತು ವಿಜಯ್ ಅವರದ್ದು. ಇವೆರಡೂ ಚಿತ್ರಗಳ ಭರ್ಜರಿ ಗೆಲುವೇ ಈ ಜೋಡಿ ಮತ್ತೆ ಒಂದಾಗಿರೋದರ ಬಗ್ಗೆ ಮತ್ತುಷ್ಟು ನಿರೀಕ್ಷೆಗಳು ಚಿಗುರಿಕೊಳ್ಳುವಂತೆ ಮಾಡಿರೋದು ಸುಳ್ಳಲ್ಲ.
ಸನ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣಗೊಳ್ಳಲಿರೋ ಈ ಚಿತ್ರದ ತಾಂತ್ರಿಕ ವರ್ಗವನ್ನೂ ಕೂಡಾ ಮುರುಗದಾಸ್ ಅತ್ಯಂತ ಶ್ರದ್ಧೆ ವಹಿಸಿ ಆಯ್ಕೆ ಮಾಡಿದ್ದಾರೆ. ಗಿರೀಶ್ ಗಂಗಾಧರನ್ ಎಂಬ ಮಲೆಯಾಳದ ಛಾಯಾಗ್ರಾಹಕ ಈ ಚಿತ್ರಕ್ಕೂ ಛಾಯಾಗ್ರಹಣ ಮಾಡಲಿದ್ದಾರೆ. ’ಕಲಿ’ಯಂಥಾ ಚಿತ್ರಗಳ ಛಾಯಾಗ್ರಹಣದ ಮೂಲಕ ಗಿರೀಶ್ ಗಮನ ಸೆಳೆದಿದ್ದಾರೆ. ಇನ್ನುಳಿದಂತೆ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿರೋದು ಎ ಆರ್ ರೆಹಮಾನ್ ಎಂಬುದು ಅಸಲೀ ಆಕರ್ಷಣೆ. ರೆಹಮಾನ್ ಇಷ್ಟರಲ್ಲಿಯೇ ಸಂಗೀತ ಸಂಯೋಜನೆಯ ಕೆಲಸವನ್ನು ಶುರು ಮಾಡಿಕೊಳ್ಳಲಿದ್ದಾರಂತೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
