fbpx
ಕಿರುತೆರೆ

ದಯಾಳ್’ಗೆ ‘ಕಾಮಿಡಿ ಪೀಸ್’ ಎಂದುಬಿಟ್ರು ಅನುಪಮಾ!

ದಯಾಳ್’ಗೆ ‘ಕಾಮಿಡಿ ಪೀಸ್’ ಎಂದುಬಿಟ್ರು ಅನುಪಮಾ!

 

 

ಬಿಗ್ ಬಾಸ್ ಕನ್ನಡ ಸೀಸನ್ 5 ಇನ್ನೇನು ಮುಗಿಯುವ ಹಂತ ತಲುಪಿದ್ದು ಕಾರ್ಯಕ್ರಮದ ಕೊನೆಯಲ್ಲಿ ಸ್ಪರ್ಧಿಗಳ ಕುರಿತು ಒಂದೊಂದೇ ವಿಷಯಗಳು ಆಚೆ ಬರುತ್ತಿವೆ. ಕೆಲವೇ ದಿನಗಳಲ್ಲಿ ಕಾರ್ಯಕ್ರಮ ಅಂತ್ಯಕಾಣಲಿದೆ.. ಮೊನ್ನೆ ಬಿಗ್ ಬಾಸ್ ನಿಂದ ಎಲಿಮಿನೇಟ್ ಆದ ಅನುಪಮಾ ಅವರು ತಾವು ಬಿಗ್ ಬಾಸ್ ನಲ್ಲಿ ತುಂಬಾ ಕ್ಲೋಸ್ ಆಗಿದ್ದ ನಿರ್ದೇಶಕ ದಯಾಳ್ ಅವರನ್ನು ಕಾಮಿಡಿ ಪೀಸ್ ಎಂದು ಅರೆದಿದ್ದಾರೆ.

 

 

ಗೆಲುವಿಗೆ ಇನ್ನೊಂದು ಮೆಟ್ಟಿಲು ಬಾಕಿ ಉಳಿದಿರುವ ಹೊತ್ತಿನಲ್ಲೇ ಪ್ರಬಲ ಸ್ಪರ್ಧಿ ಎಂದು ಎನಿಸಿಕೊಂಡಿದ್ದ ಅನುಪಮಾ ಗೌಡ ನೆನ್ನೆ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಎಂದಿನಂತೆ ಮನೆಯಿಂದ ಹೊರ ಬರುವ ಸ್ಪರ್ಧಿಗಳನ್ನು ವೇದಿಕೆಯ ಮೇಲೆ ಮಾತನಾಡಿಸುವ ಹಾಗೆ ನಿರೂಪಕ ಕಿಚ್ಚ ಸುದೀಪ್ ಅನುಪಮಾ ಅವರನ್ನು ವೇದಿಕೆಗೆ ಕರೆದು ಮಾತುಕತೆ ನಡೆಸಿದ್ದಾರೆ..

 

 

ಸುದೀಪ್ ಅವರು ವೇದಿಕೆ ಮೇಲೆ ಸಹ ಸ್ಪರ್ಧಿಗಳ ಬಗ್ಗೆ ಅಭಿಪ್ರಾಯನ್ನ ಹೇಳುವಂತೆ ಅನುಪಮಾಗೆ ಕೇಳಿದರು. ಪ್ರತಿಯೊಬ್ಬ ಸ್ಪರ್ಧಿಯ ಭಾವಚಿತ್ರವನ್ನು ತೋರಿಸುತ್ತಿದ್ದಾಗ ಅವರ ಬಗ್ಗೆ ಒಂದು ಪದ ಅಥವಾ ಒಂದು ಸಾಲಿನಲ್ಲಿ ತಮ್ಮ ಅಭಿಪ್ರಾಯವನ್ನು ಹೇಳಬೇಕಿತ್ತು ಅಂತೆಯೇ ದಯಾಳ್ ಅವರ ಭಾವಚಿತ್ರವನ್ನು ತೋರಿಸಿದಾಗ ಉತ್ತರಿಸಿದ ಅನುಪಮಾ “ಇವರೊಬ್ಬರು ಕಾಮಿಡಿ ಪೀಸ್, ಮನೆಯಲ್ಲಿದ್ದಾಗ ಸಿಕ್ಕಾಪಟ್ಟೆ ನಗಿಸುತ್ತಿದ್ದರು.ಅವರು ತುಂಬಾ ಸ್ಟ್ರೇಟ್ ಪಾರ್ವರ್ಡ್ಮ್, ಅವರಷ್ಟು ಸ್ಟ್ರೇಟಾಗಿ ಮಾತನಾಡುವವರು ಮನೆಯಲ್ಲಿ ಯಾರು ಇರಲಿಲ್ಲ” ಎಂದು ಹೇಳಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top