fbpx
ಕಿರುತೆರೆ

ಬಿಗ್’ಬಾಸ್ ನಿಂದ ಹೊರಬಂದ ಅನುಪಮಾ ಜಗನ್ ಜೊತೆಗಿನ ಸ್ನೇಹದ ಬಗ್ಗೆ ಹೇಳಿದ್ದೇನು ಗೊತ್ತಾ?

ಬಿಗ್’ಬಾಸ್ ನಿಂದ ಹೊರಬಂದ ಅನುಪಮಾ ಜಗನ್ ಜೊತೆಗಿನ ಸ್ನೇಹದ ಬಗ್ಗೆ ಹೇಳಿದ್ದೇನು ಗೊತ್ತಾ?

 

 

ಬಿಗ್ ಬಾಸ್ ಕನ್ನಡ ಸೀಸನ್ 5 ಇನ್ನೇನು ಮುಗಿಯುವ ಹಂತ ತಲುಪಿದ್ದು ಕಾರ್ಯಕ್ರಮದ ಕೊನೆಯಲ್ಲಿ ಸ್ಪರ್ಧಿಗಳ ಕುರಿತು ಒಂದೊಂದೇ ವಿಷಯಗಳು ಆಚೆ ಬರುತ್ತಿವೆ. ಕೆಲವೇ ದಿನಗಳಲ್ಲಿ ಕಾರ್ಯಕ್ರಮ ಅಂತ್ಯಕಾಣಲಿದೆ.. ಮೊನ್ನೆ ಬಿಗ್ ಬಾಸ್ ನಿಂದ ಎಲಿಮಿನೇಟ್ ಆದ ಅನುಪಮಾ ಅವರು ತಾವು ಬಿಗ್ ಬಾಸ್’ಗೆ ಹೋಗುವುದಕ್ಕೂ ಮುಂಚಿನಿಂದಲೂ ಸ್ನೇಹಿತನಾಗಿದ್ದ ಜಗನ್ ಬಗ್ಗೆ ಮಾತನಾಡಿದ್ದಾರೆ.

ಬಿಗ್ ಬಾಸ್ ಶುರುವಾದಾಗ ಅನುಪಮಾ ಮತ್ತು ಜಗನ್ ನಡುವೆ ಏನೋ ನಡೆದಿದೆ, ಅವರಿಬ್ಬರೂ ಮಾಜಿ ಪ್ರೇಮಿಗಳು ಈಗ ಬ್ರೇಕ್ ಅಪ್ ಆಗಿವೆ ಎಂಬೆಲ್ಲಾ ಸುದ್ದಿಗಳು ಆಗಾಗ ಕೇಳಿ ಬರುತ್ತಿದ್ದವು ಇದಕ್ಕೆ ಪುಷ್ಟಿ ನೀಡುವಂತೆ ಅನುಪಮಾ ಅವರು ಕೂಡ ಇತರ ಸ್ಪರ್ದಿಗಳ ಜೊತೆ ಇದರ ಬಗ್ಗೆ ಮಾತನಾಡುತ್ತಿದ್ದುದು ಮತ್ತಷ್ಟು ಗಾಸಿಪ್ ಹರಡುವ ಹಾಗೆ ಮಾಡುತ್ತಿತ್ತು. ಜಗನ್ ಹೆಸರನ್ನು ತೆಗೆದುಕೊಳ್ಳದೆಯೇ ಅನೇಕ ಭಾರಿ ತಮ್ಮ ಹಳೆಯ ಕಥೆಯನ್ನು ಪರೋಕ್ಷವಾಗಿ ಇತರ ಸದಸ್ಯರೊಂದಿಗೆ ಅನುಪಮಾ ಹೇಳಿಕೊಳ್ಳುತ್ತಿದ್ದರು.

 

 

ಗೆಲುವಿಗೆ ಇನ್ನೊಂದು ಮೆಟ್ಟಿಲು ಬಾಕಿ ಉಳಿದಿರುವ ಹೊತ್ತಿನಲ್ಲೇ ಪ್ರಬಲ ಸ್ಪರ್ಧಿ ಎಂದು ಎನಿಸಿಕೊಂಡಿದ್ದ ಅನುಪಮಾ ಗೌಡ ನೆನ್ನೆ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಎಂದಿನಂತೆ ಮನೆಯಿಂದ ಹೊರ ಬರುವ ಸ್ಪರ್ಧಿಗಳನ್ನು ವೇದಿಕೆಯ ಮೇಲೆ ಮಾತನಾಡಿಸುವ ಹಾಗೆ ನಿರೂಪಕ ಕಿಚ್ಚ ಸುದೀಪ್ ಅನುಪಮಾ ಅವರನ್ನು ವೇದಿಕೆಗೆ ಕರೆದು ಮಾತುಕತೆ ನಡೆಸಿದ್ದಾರೆ..

 

 

ಸುದೀಪ್ ಅವರು ವೇದಿಕೆ ಮೇಲೆ ಸಹ ಸ್ಪರ್ಧಿಗಳ ಬಗ್ಗೆ ಅಭಿಪ್ರಾಯನ್ನ ಹೇಳುವಂತೆ ಅನುಪಮಾಗೆ ಕೇಳಿದರು. ಪ್ರತಿಯೊಬ್ಬ ಸ್ಪರ್ಧಿಯ ಭಾವಚಿತ್ರವನ್ನು ತೋರಿಸುತ್ತಿದ್ದಾಗ ಅವರ ಬಗ್ಗೆ ಒಂದು ಪದ ಅಥವಾ ಒಂದು ಸಾಲಿನಲ್ಲಿ ತಮ್ಮ ಅಭಿಪ್ರಾಯವನ್ನು ಹೇಳಬೇಕಿತ್ತು ಅಂತೆಯೇ ಜಗನ್ ಭಾವಚಿತ್ರವನ್ನು ತೋರಿಸಿದಾಗ ಉತ್ತರಿಸಿದ ಅನುಪಮಾ “ಜಗನ್ ನನ್ನ ಒಳ್ಳೆಯ ಸ್ನೇಹಿತ, ಕೋಪಿಷ್ಠ. ಬಿಗ್ ಬಾಸ್’ಗೆ ಹೋಗುವ ಮುಂಚೆ ಇದ್ದ ಜಗನ್’ಗೂ ಎಲಿಮಿನೇಟ್ ಆದಾಗ ಇದ್ದ ಜಗನ್’ಗೂ ತುಂಬಾ ಬದಲಾವಣೆಯಾಯ್ತು. ಹೊರಗಡೆ ಹೋದ ನಂತರ ಮೊದಲು ಅವನನ್ನ ಭೇಟಿ ಮಾಡುತ್ತೇನೆ. ತನ್ನ ಕೋಪವನ್ನ ಬಿಟ್ಟರೆ ತುಂಬಾ ಕುಶಿಯಾಗಿರುತ್ತಾನೆ” ಎಂದು ಮಾತು ಮುಗಿಸಿದರು.

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top