fbpx
ಕಿರುತೆರೆ

“ಅರ್ಹತೆಯಿಲ್ಲದ ನಿವೇದಿತಾ ಬಿಗ್’ಬಾಸ್ ಗೆಲ್ಲಬಾರದು” ಹೀಗಂತ ಹೇಳಿದ್ದು ಯಾರು ಗೊತ್ತಾ?

“ಅರ್ಹತೆಯಿಲ್ಲದ ನಿವೇದಿತಾ ಬಿಗ್’ಬಾಸ್ ಗೆಲ್ಲಬಾರದು” ಹೀಗಂತ ಹೇಳಿದ್ದು ಯಾರು ಗೊತ್ತಾ?

 

 

ಬಿಗ್ ಬಾಸ್ ಕನ್ನಡ ಸೀಸನ್ 5 ಇನ್ನೇನು ಮುಗಿಯುವ ಹಂತ ತಲುಪಿದ್ದು ಕಾರ್ಯಕ್ರಮದ ಕೊನೆಯಲ್ಲಿ ಸ್ಪರ್ಧಿಗಳ ಕುರಿತು ಒಂದೊಂದೇ ವಿಷಯಗಳು ಆಚೆ ಬರುತ್ತಿವೆ. ಕೆಲವೇ ದಿನಗಳಲ್ಲಿ ಕಾರ್ಯಕ್ರಮ ಅಂತ್ಯಕಾಣಲಿದೆ. ಕಾಮನ್ ಮ್ಯಾನ್ ಕೋಟಾದಲ್ಲಿ ಬಂದು ಘಟಾನುಘಟಿ ಸ್ಪರ್ಧಿಗಳಿಗೂ ಪೈಪೋಟಿ ನೀಡಿ ಫಿನಾಲೆವರೆಗೂ ತಲುಪಿರುವ ನಿವೇದಿತಾ ಗೌಡ ಈ ಬಾರಿ ಬಿಗ್ ಬಾಸ್ ಗೆಲ್ಲಬಾರದು ಅವರಿಗೆ ಆ ಅರ್ಹತೆ ಇಲ್ಲ ಎಂದು ಬಿಗ್ ಬಾಸ್ ಸ್ಪರ್ಧಿಯೊಬ್ಬರು ಹೇಳಿಕೆ ಕೊಟ್ಟಿದ್ದಾರೆ.

 

 

ಗೆಲುವಿಗೆ ಇನ್ನೊಂದು ಮೆಟ್ಟಿಲು ಬಾಕಿ ಉಳಿದಿರುವ ಹೊತ್ತಿನಲ್ಲೇ ಪ್ರಬಲ ಸ್ಪರ್ಧಿ ಎಂದು ಎನಿಸಿಕೊಂಡಿದ್ದ ಅನುಪಮಾ ಗೌಡ ನೆನ್ನೆ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಎಂದಿನಂತೆ ಮನೆಯಿಂದ ಹೊರ ಬರುವ ಸ್ಪರ್ಧಿಗಳನ್ನು ವೇದಿಕೆಯ ಮೇಲೆ ಮಾತನಾಡಿಸುವ ಹಾಗೆ ನಿರೂಪಕ ಕಿಚ್ಚ ಸುದೀಪ್ ಅನುಪಮಾ ಅವರನ್ನು ವೇದಿಕೆಗೆ ಕರೆದು ಮಾತುಕತೆ ನಡೆಸಿದ್ದಾರೆ..

ಸುದೀಪ್ ಅವರು ಅನುಪಮಾಗೆ ಬಿಗ್ ಬಾಸ್ ಸ್ಪರ್ಧಿಗಳ ಕುರಿತು ಕೆಲವು ಪ್ರಶ್ನೆಗಳನ್ನು ಕೇಳಿದರು. ಅದರಂತೆ ಈ ಭಾರಿಯ ಬಿಗ್ ಬಾಸ್ ಟ್ರೋಫಿಯನ್ನು ಯಾರು ಗೆಲ್ಲಬಾರದು ಮತ್ತು ಯಾಕೆ ಎಂದು ಹೇಳುವತೆ ಕೇಳಿದರು ಸುದೀಪ್ ಅವರ ಈ ಪ್ರಶ್ನೆಗೆ ಉತ್ತರಿಸಿದ ಅನುಪಮಾ ನಿವೇದಿತಾ ಗೌಡ ಗೆಲ್ಲಬಾರದು ಎಂದು ಉತ್ತರಿಸಿ ಬಿಗ್’ಬಾಸ್ ಮನೆಯಲ್ಲಿರುವ ಅರ್ಹತೆ ನಿವೇದಿತಾಗೆ ಇಲ್ಲ ಟಾಸ್ಕಿನಲ್ಲಿ ಯಾವುದೇ ರೀತಿಯ ಆಸಕ್ತಿ ತೋರಿಸಲ್ಲ. ಯಾವುದೇ ಕೆಲಸವನ್ನು ಮಾಡೋದಿಲ್ಲ, ಮನರಂಜನೆಯನ್ನೂ ಮಾಡೋದಿಲ್ಲ ಎಂದು ಅನುಪಮಾ ಗೌಡ ಹೇಳಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top