fbpx
ಕಿರುತೆರೆ

ಬಿಗ್’ಬಾಸ್ ಫಿನಾಲೆಗೆ ಮುನ್ನವೇ ಸಮೀರ್ ಆಚಾರ್ಯ ಎಲಿಮಿನೇಟ್.

ಬಿಗ್’ಬಾಸ್ ಫಿನಾಲೆಗೆ ಮುನ್ನವೇ ಸಮೀರ್ ಆಚಾರ್ಯ ಎಲಿಮಿನೇಟ್.

 

 

ಬಿಗ್ ಬಾಸ್ ಸೀಸನ್ 5 ಇನ್ನೇನು ಮುಗಿಯುವ ಹಂತ ತಲುಪಿದ್ದು ಕೇವಲ ಇನ್ನು ಕೆಲವೇ ದಿನಗಳಲ್ಲಿ ಗ್ರ್ಯಾಂಡ್ ಫೈನಲ್ ನಡೆಯಲಿದೆ. ಈ ಹಂತದಲ್ಲಿ ಮನೆಯಿಂದ ಸಮೀರ್ ಆಚಾರ್ಯ ಹೊರಬಂದಿದ್ದಾರೆ. ವೀಕ್ಷಕರ ಮತಗಳಿಗನುಗುಣವಾಗಿ ಅನುಪಮಾ ಅವರಿಗಿಂತ ಹೆಚ್ಚು ಮತ್ತು ಉಳಿದ ಸ್ಪರ್ಧಿಗಳಿಗಿಂತ ಕಡಿಮೆ ಮತಗಳನ್ನು ಪಡೆದ ಕಾರಣ ಸಮೀರಾಚಾರ್ಯ ಎಲಿಮಿನೇಟ್ ಆಗಿದ್ದಾರೆ.ಈ ಮೂಲಕ ಫಿನಾಲೆಗೆ ಹೋಗಬೇಕು ಎನ್ನುವ ಸಮೀರ್ ಅವರ ಕನಸಿಗೆ ತಣ್ಣೀರು ಬಿದ್ದಿದೆ.

 

 

ಮನೆಗೆ ಎಂಟ್ರಿಕೊಟ್ಟಿದ್ದ 18 (2 ವೈಲ್ಡ್ ಕಾರ್ಡ್ ಎಂಟ್ರಿ)ಜನ ಸ್ಪರ್ಧಿಗಳ ಪೈಕಿ ಈಗಾಗಲೇ 12 ಮಂದಿ ಮನೆಯಿಂದ ಹೊರ ಹೋಗಿದ್ದು ಈಗ ಕೇವಲ 6 ಜನ ಸದಸ್ಯರಷ್ಟೇ ಬಿಗ್ ಬಾಸ್ ಮನೆಯ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಆದರೆ ಫಿನಾಲೆಗೆ ಪ್ರವೇಶವಿರುವುದು ಕೇವಲ ಐದು ಜನರಿಗೆ ಮಾತ್ರ.. ಹಾಗಾಗಿ ಇಂದು ಇನ್ನೊಂದು ಎಲಿಮಿನೇಷನ್ ನಡೆದಿದೆ.

ನಂತರ ಉಳಿಯುವ ಐದು ಜನರಲ್ಲಿ ಬಿಗ್ ಬಾಸ್ ಟ್ರೋಫಿ ಗೆಲ್ಲುವರಾರು, ರನ್ನರ್ ಅಪ್ ಆಗುವವರು ಯಾರು ಎಂಬ ಪ್ರಶ್ನೆಗಳಿಗೆ ಮುಂದಿನ ಭಾನುವಾರ ಉತ್ತರ ಸಿಗಲಿದೆ. ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ವೋಟ್ ಮಾಡಲು ಐದು ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top