fbpx
ಕಿರುತೆರೆ

ಸ್ಯಾಂಡಲ್’ವುಡ್’ನ ಈ ಯುವನಟನಿಗೆ ಹೊಸ ಬಿರುದು ನೀಡಿದ್ರು ಕಿಚ್ಚ ಸುದೀಪ್!

ಸ್ಯಾಂಡಲ್’ವುಡ್’ನ ಈ ಯುವನಟನಿಗೆ ಹೊಸ ಬಿರುದು ನೀಡಿದ್ರು ಕಿಚ್ಚ ಸುದೀಪ್!

 

 

 

ಬಿಗ್ ಬಾಸ್ ಕನ್ನಡ ಸೀಸನ್ 5 ಇನ್ನೇನು ಮುಗಿಯುವ ಹಂತ ತಲುಪಿದ್ದು ಕಾರ್ಯಕ್ರಮದ ಅಂಗವಾಗಿ ಪ್ರಸಾರವಾಗುತ್ತಿದ್ದ ‘ಕಿಚನ್ ಟೈಮ್’ ಸಂಚಿಕೆಯು ಕೂಡ ತನ್ನ ಕೊನೆಯ ಎಪಿಸಿಸೋಡನ್ನು ಯಶಸ್ವಿಯಾಗಿ ಮುಕ್ತಾಯವಾಗಿದೆ. ಸೂಪರ್ ಸಂಡೆ ಸಂಚಿಕೆಯಲ್ಲಿ ಪ್ರತಿ ವಾರ ಸೆಲೆಬ್ರೆಟಿಗಳು ಅಥಿತಿಯಾಗಿ ಬಂದು ಸುದೀಪ್ ಅವರ ಜೊತೆ ಅಡುಗೆ ಮಾಡಿ ಸ್ವಲ್ಪ ಮಾತುಕತೆ ನಡೆಸಿ ಹರಟೆ ಹೊಡೆದು ಹೋಗುತ್ತಾರೆ. ಅದೇ ರೀತಿ ನೆನ್ನೆ ಕಿಚನ್ ಟೈಮ್’ಗೆ ‘3ಘಂಟೆ 30ದಿನ 30ಸೆಕೆಂಡ್’ ಚಿತ್ರದ ನಾಯಕ ಅರುಣ್ ಗೌಡ, ನಾಯಕಿ ಕಾವ್ಯಾ ಶೆಟ್ಟಿ ಅಥಿತಿಗಳಾಗಿ ಆಗಮಿಸಿದ್ದರು.

 

 

ಅಥಿತಿಗಳನ್ನು ಬರಮಾಡಿಕೊಂಡು ಅವರ ಜೊತೆ ಅಡುಗೆ ಮಾಡುತ್ತಾ ಮಾತುಕತೆ ನಡೆಸಿದ ಕಿಚ್ಚ ಸುದೀಪ್ ‘3ಘಂಟೆ 30ದಿನ 30ಸೆಕೆಂಡ್’ ಚಿತ್ರದ ನಟನ ಕಾಲೆಳೆದರು. ಅಲ್ಲದೆ ಅರುಣ್ ಗೌಡ್ ಅವರಿಗೆ ‘ಇನ್-ಕಂಪ್ಲೀಟ್ ಸ್ಟಾರ್‌ ಎಂಬ ತಮಾಷೆಯ ಬಿರುದನ್ನೂ ಸುದೀಪ್ ನೀಡಿದರು. ಅಷ್ಟಕ್ಕೂ ಈ ಬಿರುದು ನೀಡಲು ಕಾರಣ ಏನು ಅಂತೀರಾ ಮುಂದೆ ಓದಿ.

ಅರುಣ್ ಗೌಡ ಅವರು ಮಾತನಾಡುವಾಗ ತಮ್ಮ ಜೀವನದ ಕೆಲವು ಘಟನೆಗಳ ಬಗ್ಗೆ ಮೆಲುಕು ಹಾಕಿದರು. ಈ ಮಧ್ಯೆ ತಾವು ಡಿಗ್ರಿಯನ್ನು ಮತ್ತು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿರುವ ವಿಷಯವನ್ನು ಹೇಳಿದರು, ನಂತರ ಅವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಸಂಪೂರ್ಣವಾಗಿ ಮುಗಿಸುವುದಕ್ಕೆ ಸಾಧ್ಯವಾಗೋದಿಲ್ಲ ಎಂದು ಹೇಳಿದರು. ಆಗ ಕಿಚ್ಚ ಸುದೀಪ್ “ನೀವು ಯಾವ ಕೆಲಸವನ್ನು ಕಂಪ್ಲೀಟ್ ಮಾಡೋಲ್ಲ ಅಂತೀರಾ ಹಾಗಾಗಿ ನೀವು ಇನ್-ಕಂಪ್ಲೀಟ್ ಸ್ಟಾರ್‌ ಅಂತ ಬಿರುದು ಇಟ್ಕೊಳಿ” ಎಂದು ಅರುಣ್ ಅವರ ಕಾಲೆಳೆದರು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top