fbpx
ಕಿರುತೆರೆ

ಬಿಗ್’ಬಾಸ್ ಮನೆಯಲ್ಲಿ ಹಾವಳಿಯಿಟ್ಟ ಮಜಾಟಾಕೀಸ್ ಟೀಮ್.

ಬಿಗ್’ಬಾಸ್ ಮನೆಯಲ್ಲಿ ಹಾವಳಿಯಿಟ್ಟ ಮಜಾಟಾಕೀಸ್ ಟೀಮ್.

 

 

ಬಿಗ್ ಬಾಸ್ ಕನ್ನಡ ಸೀಸನ್ 5 ಇನ್ನೇನು ಮುಗಿಯುವ ಹಂತ ತಲುಪಿದ್ದು ಇನ್ನು ಐದಾರು ದಿನಗಳಲ್ಲಿ ಕಾರ್ಯಕ್ರಮ ಮುಗಿಯುತ್ತಿದೆ. ಈ ಹಂತದಲ್ಲಿ ಮನೆಯಲ್ಲಿ ಕೇವಲ ಆರು ಜನ ಮಾತ್ರ ಉಳಿದುಕೊಂಡಿರುವುದರಿಂದ ಮನೆ ಖಾಲಿ ಖಾಲಿ ಎನಿಸುತ್ತದೆ ಎಂದು ಕಳೆದ ವಾರದಿಂದಲೂ ಎಲಿಮಿನೇಟ್ ಆಗಿದ್ದ ಸದಸ್ಯರು, ಸ್ಪರ್ಧಿಗಳ ಕುಟುಂಬಸ್ಥರು, ನಿರೂಪಕ ಸುದೀಪ್ ಸೇರಿ ಒಬ್ಬರಲ್ಲ ಒಬ್ಬರು ಮನೆಗೆ ವಿಶೇಷ ಅಥಿತಿಗಳಾಗಿ ಆಗಮಿಸುತ್ತಿದ್ದಾರೆ.

ವಿಶೇಷ ಎಂದರೆ ಇಂದಿನ ಸಂಚಿಕೆಯಲ್ಲಿ ಸೃಜನ್ ಲೋಕೇಶ್ ನೇತೃತ್ವದ ಮಜಾ ಟಾಕೀಸ್ ತಂಡದ ಸದಸ್ಯರು ಬಿಗ್’ಬಾಸ್ ಮನೆಗೆ ಬಂದು ವೀಕ್ಷಕರಿಗೆ ಭರಪೂರ ಮನೋರಂಜನೆಯನ್ನು ಖಾತರಿ ಮಾಡಿದ್ದಾರೆ. ಸೃಜನ್ ಲೋಕೇಶ್, ಶ್ವೇತ, ಕುರಿ ಪ್ರತಾಪ್, ಅಪರ್ಣ, ಪವನ್ ಮತ್ತು ವಿಶ್ವ ಮಜಾ ಟಾಕೀಸ್ ತಂಡದ ಪರವಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.

 

 

ಮಜಾ ಟಾಕೀಸ್ ತನ್ನ ಎರಡನೇ ಸೀಸನ್ ಇದೇ ಫೆಬ್ರವರಿ 08ನೇ ತಾರೀಕಿನಿಂದ ಶುರುವಾಗಲಿದ್ದು ಅದರ ಪ್ರಮೋಷನ್’ಗಾಗಿ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಮುಖ್ಯವಾಗಿ ಈ ಭಾರಿಯ ಮಜಾಟಾಕೀಸ್
ಪ್ರಸಾರವಾಗುತ್ತಿರುವುದು ಕಲರ್ಸ್ ಕನ್ನಡ ಚಾನೆಲ್’ನಲ್ಲಿ ಅಲ್ಲ ಬದಲಾಗಿ ಅದರ ಮತ್ತೊಂದು ಅಂಗ ಸಂಸ್ಥೆಯಾದ ಕಲರ್ಸ್ ಸೂಪರ್ ಚಾನೆಲ್’ನಲ್ಲಿ. ಕಳೆದ ಭಾರಿ ವೀಕೆಂಡ್ ಗಳಲ್ಲಿ(ಶನಿವಾರ ಮತ್ತು ಭಾನುವಾರ) ಪ್ರಸಾರವಾಗುತ್ತಿದ್ದ ಮಜಾ ಟಾಕೀಸ್ ಈ ಭಾರಿ ಗುರುವಾರ ಮತ್ತು ಶುಕ್ರವಾರ ರಾತ್ರಿ ಎಂಟು ಗಂಟೆಗೆ ಪ್ರಸಾರವಾಗಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top