fbpx
ಕಿರುತೆರೆ

ಅನುಪಮಾ ಎಲಿಮಿನೇಟ್ ಆದ ನಂತರ ಸಮೀರ್ ಔಟಾಗಲು ಕಾರಣವೇನು ಗೊತ್ತಾ?

ಅನುಪಮಾ ಎಲಿಮಿನೇಟ್ ಆದ ನಂತರ ಸಮೀರ್ ಔಟಾಗಲು ಕಾರಣವೇನು ಗೊತ್ತಾ?

 

 

ಬಿಗ್ ಬಾಸ್ 5 ನೇ ಆವೃತ್ತಿಯ ಸ್ಫರ್ಧಿ ಸಮೀರ್ ಆಚಾರ್ಯ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ . ಸ್ಪರ್ಧೆಯ 15 ನೇ ವಾರದ ಪ್ರಾರಂಭದಲ್ಲಿ ಸಮೀರ್ ಆಚಾರ್ಯ ಅವರು ಬಿಗ್ ಬಾಸ್ ಮನೆಯ ಪ್ರಯಾಣವನ್ನು ಮುಗಿಸಿದ್ದಾರೆ . 14 ನೇ ವಾರ ಮನೆಯಿಂದ ಹೊರ ಹೋಗಲು ಎಲ್ಲರೂ ನೊಮಿನೇಟ್ ಆಗಿದ್ದರು . ಅದರಂತೆ ಅತೀ ಕಡಿಮೆ ಮತಗಳನ್ನು ಪಡೆದ ಅನುಪಮಾ ಅವರು ಆ ವಾರದ ಅಂತ್ಯದಲ್ಲಿ ಅಂದರೆ ಶನಿವಾರ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದರು .

 

 

ಇದಾದ ಎರಡು ದಿನಗಳ ನಂತರ ಅಂದರೆ ಸೋಮವಾರ ಅನುಪಮಾ ಅವರಿಗಿಂತ ಹೆಚ್ಚು ಹಾಗೂ ಉಳಿದ ಸ್ಪರ್ಧಿಗಳಿಗಿಂತ ಕಡಿಮೆ ಮತಗಳನ್ನು ಪಡೆದಿದ್ದ ಸಮೀರ್ ಆಚಾರ್ಯ ಅವರು ಮನೆಯಿಂದ ಹೊರಬಿದ್ದಿದ್ದಾರೆ . ಉಳಿದಂತೆ ಚಂದನ್ ಶೆಟ್ಟಿ , ಜಯರಾಮ್ ಕಾರ್ತಿಕ್ , ದಿವಾಕರ್ , ಶೃತಿ ಪ್ರಕಾಶ್ ಹಾಗೂ ನಿವೇದಿತಾ ಗೌಡ ಅವರು ಬಿಗ್ ಬಾಸ್ 5 ನೇ ಆವೃತ್ತಿಯ ಅಂತಿಮ ಸುತ್ತನ್ನು ತಲುಪಿದ್ದಾರೆ .

 

 

ಇಷ್ಟು ದಿನ ವೀಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ಮತ ಹಾಕುತ್ತಿದ್ದರು . ಆದರೆ ಈಗ ತಮ್ಮ ನೆಚ್ಚಿನ ಸ್ಪರ್ಧಿಯನ್ನು ಗೆಲ್ಲಿಸಲು ಮತ ಹಾಕಬೇಕಿದೆ . ಸಮೀರ್ ಆಚಾರ್ಯ ಅವರ ಎಲಿಮಿನೇಷನ್ ವಿಶೇಷವಾಗಿತ್ತು . ವೀಕ್ಷಕರ ಮತಗಳ ಆಧಾರದ ಮೇಲೆ ಮೊದಲು ಚಂದನ್ ಶೆಟ್ಟಿ ಮತ್ತು ಜಯರಾಮ್ ಕಾರ್ತಿಕ್ ಲಿವಿಂಗ್ ಏರಿಯಾದಲ್ಲಿ ಸೇಫ್ ಆದರು . ನಂತರ ಸಮೀರ್ ಆಚಾರ್ಯ , ದಿವಾಕರ್ , ಶೃತಿ ಪ್ರಕಾಶ್ ಹಾಗೂ ನಿವೇದಿತಾ ಗೌಡ ಅವರನ್ನು ಗಾರ್ಡನ್ ಏರಿಯಾಗೆ ಬರುವಂತೆ ಬಿಗ್ ಬಾಸ್ ಆದೇಶಿಸಿದರು .

 

 

ಅಲ್ಲಿ ಬಜರ್ ಆದಾಗ ಯಾವ ಸ್ಪರ್ಧಿಯ ಪ್ರತಿಕೃತಿ ದಹನವಾಗುತ್ತದೆಯೋ ಆ ಸ್ಪರ್ಧಿ ಮನೆಯಿಂದ ಹೊರಬಿದ್ದಂತೆ ಎಂದು ಹೇಳಲಾಯಿತು . ಅದರಂತೆ ಸ್ಪರ್ಧಿಗಳು ಬಜರ್ ಒತ್ತಿದಾಗ ಸಮೀರ್ ಆಚಾರ್ಯ ಅವರ ಪ್ರತಿಕೃತಿ ದಹನವಾಯಿತು .

 

 

ಚಂದನ್ ಶೆಟ್ಟಿ , ಜಯರಾಮ್ ಕಾರ್ತಿಕ್ , ದಿವಾಕರ್ , ಶೃತಿ ಪ್ರಕಾಶ್ ಹಾಗೂ ನಿವೇದಿತಾ ಗೌಡ ಅವರು ಬಿಗ್ ಬಾಸ್ 5 ನೇ ಆವೃತ್ತಿಯ ಅಂತಿಮ ಸುತ್ತನ್ನು ತಲುಪಿದ್ದು , ಇವರಲ್ಲಿ ಯಾರು ವಿಜಯಶೀಲರಾಗುತ್ತಾರೆ ಎಂದು ಕಾಡು ನೋಡಬೇಕಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top