fbpx
ತಂತ್ರಜ್ಞಾನ

ಮೊಬೈಲ್ ಚಾರ್ಜ್ ಮಾಡುವಾಗ ಈ 10 ನಿಯಮ ಪಾಲಿಸಲೇಬೇಕು

ಮೊಬೈಲ್ ಚಾರ್ಜ್ ಮಾಡುವಾಗ ಈ 10 ನಿಯಮ ಪಾಲಿಸಲೇಬೇಕು

 

1. ನಿಮ್ಮ ಅಧಿಕೃತ ಮೊಬೈಲ್ ಕಂಪನಿಯ ಚಾರ್ಜರ್ ಮಾತ್ರ ಬಳಸಿ. ಇದರಿಂದ ನಿಮ್ಮ ಮೊಬೈಲ್ ಬ್ಯಾಟರಿ ಕ್ಷಮತೆ ಹೆಚ್ಚುತ್ತದೆ. ನಿಮ್ಮ ಮೊಬೈಲ್ ಬ್ಯಾಟರಿ ಹೆಚ್ಚು ಕಾಲ ಬರುತ್ತದೆ.

 

 

2. ಕಡಿಮೆ ದರದ ಕಳಪೆ ಗುಣಮಟ್ಟದ ಚಾರ್ಜರ್ ಗಳನ್ನೂ ಯಾವತ್ತೂ ಬಳಸಬೇಡಿ. ಇದರಿಂದ ವೋಲ್ಟೇಜ್ ಬದಲಾಗುವ ಸಾಧ್ಯತೆ ಇರುತ್ತದೆ. ಇದರಲ್ಲಿ ಸುರಕ್ಷಾ ಕ್ರಮ ಅನುಸರಿಸಿರಲ್ಲ, ಇದರಿಂದ ನಿಮ್ಮ ಮೊಬೈಲ್ ಬೇಗನೆ ಹಾಳಾಗುವ ಸಂಭವ ಹೆಚ್ಚುತ್ತಾ ಹೋಗುತ್ತದೆ.

 

3. ನೀವು ಮೊಬೈಲ್ ಚಾರ್ಜ್ ಮಾಡುವಾಗ ಪ್ರೊಟೆಕ್ಟಿವ್ ಗಾರ್ಡ್ ಬಳಸುವುದು ಸೂಕ್ತವಲ್ಲ. ಏಕೆಂದರೆ ಚಾರ್ಜ್ ಮಾಡುವಾಗ ಮೊಬೈಲ್ ಸ್ವಲ್ಪ ಬಿಸಿಯಾಗುತ್ತೆ. ಆಗ ಮೊಬೈಲ್ ಗೆ ಪ್ರೊಟೆಕ್ಟಿವ್ ಗಾರ್ಡ್ ಇದ್ದರೆ ಬಿಸಿ ಇನ್ನು ಜಾಸ್ತಿ ಆಗುತ್ತಾ ಹೋಗುತ್ತೆ. ಆದ್ದರಿಂದ ಪ್ರೊಟೆಕ್ಟಿವ್ ಗಾರ್ಡ್ ತೆಗೆದು ಚಾರ್ಜ್ ಮಾಡಿ.

 

 

4. ಫಾಸ್ಟ್ ಚಾರ್ಜರ್ ಬಳಸುವುದು ವೇಗವಾಗಿ ನಿಮ್ಮ ಮೊಬೈಲ್ ಹಾಳುಗೆಡವುದು ಒಂದೇ ಸರಿ. ನಿಮ್ಮ ಮೊಬೈಲ್ ಕಂಪನಿ ಫಾಸ್ಟ್ ಚಾರ್ಜರ್ ಕೊಟ್ಟಿದ್ದರೆ ಪರವಾಗಿಲ್ಲ. ಆದರೆ ನೀವೇ ಖುದ್ದಾಗಿ ಫಾಸ್ಟ್ ಚಾರ್ಜರ್ ಬಳಸಬೇಡಿ.

5. ರಾತ್ರಿಯಿಡಿ ಚಾರ್ಜ್ ಹಾಕಿ ಇಡಬೇಡಿ. ಇದರಿಂಗ ಬ್ಯಾಟರಿ ಸಾಮರ್ಥ್ಯ ಕುಂದುತ್ತಾ ಹೋಗುತ್ತದೆ.

 

 

6. ನೀವು ಚಾರ್ಜ್ ಮಾಡುವಾಗ, ನಿಮ್ಮ ಬ್ಯಾಟರಿ ಕನಿಷ್ಠ 80% ಚಾರ್ಜ್ ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳಿ. ಇದರಿಂದ ನಿಮ್ಮ ಮೊಬೈಲ್ ಬ್ಯಾಟರಿ ಉತ್ತಮವಾಗಿ ಕೆಲಸ ಮಾಡುತ್ತದೆ.

 

 

7. ನೀವು ಚಾರ್ಜ್ ಮಾಡುವ ಮುನ್ನ 20 % ಚಾರ್ಜ್ ಇದ್ದರೆ ಒಳ್ಳೆಯದು.

8. ವೋಲ್ಟೇಜ್ ಉಲ್ಬಣವು, ಶಾರ್ಟ್ ಸರ್ಕ್ಯೂಟ್ ಮತ್ತು ಚಾರ್ಜ್ ಮಾಡುವಿಕೆಯಿಂದ ರಕ್ಷಣೆಗೆ ಭರವಸೆ ನೀಡುವ ಪವರ್ ಬ್ಯಾಂಕುಗಳನ್ನು ಮಾತ್ರ ಖರೀದಿಸಿ

 

9. ಪವರ್ ಬ್ಯಾಂಕ್ ಬಳಸಿ ಚಾರ್ಜ್ ಮಾಡುತ್ತಿರುವಾಗ. ಮೊಬೈಲ್ ಬಳಕೆ ಮಾಡುವುದು ಸೂಕ್ತವಲ್ಲ ಇದರಿಂದ ಮೊಬೈಲ್ ತಾಪಮಾನ ಹೆಚ್ಚುತ್ತಾ ಹೋಗುತ್ತದೆ.

 

10. ಮೊಬೈಲ್ ಚಾರ್ಜ್ ಇಟ್ಟು ಕಾಲ್ ಮಾಡಿ ಮಾತನಾಡುವುದು ಸೂಕ್ತವಲ್ಲ. ನಿಮಗೆ ಕಾಲ್ ಬಂದಾಗ ಚಾರ್ಜರ್ ತೆಗೆದು ನಂತರ ಮಾತನಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top