fbpx
ಕಿರುತೆರೆ

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ: ಪ್ರೇಕ್ಷಕರಿಗೆ ನೋ ಎಂಟ್ರಿ.

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ: ಪ್ರೇಕ್ಷಕರಿಗೆ ನೋ ಎಂಟ್ರಿ.

 

 

ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಹೆಚ್ಚು ವೀಕ್ಷಕ ಬಳಗವನ್ನು ಹೊಂದಿರುವ ಬಿಗ್ ಬಾಸ್ ಕಾರ್ಯಕ್ರಮದ ಐದನೇ ಅವತರಣಿಕೆ ಇನ್ನೇನು ಬೆರಳೆಣಿಕೆಯ ದಿನಗಳಲ್ಲಿ ಮುಗಿದುಹೋಗುತ್ತಿದೆ. ಮನೆಗೆ ಎಂಟ್ರಿಕೊಟ್ಟಿದ್ದ 18 (2 ವೈಲ್ಡ್ ಕಾರ್ಡ್ ಎಂಟ್ರಿ)ಜನ ಸ್ಪರ್ಧಿಗಳ ಪೈಕಿ 13 ಮಂದಿ ಸ್ಪರ್ಧೆಯಿಂದ ಎಲಿಮಿನೇಟ್ ಆಗಿದ್ದು 5 ಜನ ಸದಸ್ಯರಷ್ಟೇ ಬಿಗ್ ಬಾಸ್ ಫಿನಾಲೆಯಲ್ಲಿ ಉಳಿದುಕೊಂಡಿದ್ದು ಜಯರಾಂ ಕಾರ್ತಿಕ್, ಚಂದನ್ ಶೆಟ್ಟಿ, ದಿವಾಕರ್, ಶ್ರುತಿ ಪ್ರಕಾಶ್ ಮತ್ತು ನಿವೇದಿತಾ ಗೌಡ ಅವರು ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯ ಫಿನಾಲೆ ಸ್ಪರ್ಧಿಗಳಾಗಿದ್ದಾರೆ.

 

 

ಬಿಗ್ ಬಾಸ್ ವಾರಾಂತ್ಯದ ಎಪಿಸೋಡ್ ಶೂಟಿಂಗ್ ನಡೆಯುತ್ತಿದ್ದ ವೇಳೆಯಲ್ಲಿ ಪ್ರೇಕ್ಷಕರು ಹೋಗಿ ಕಾರ್ಯಕ್ರಮ ನೋಡುವ ಅವಕಾಶವಿತ್ತು. ಆದರೆ ಗ್ರ್ಯಾಂಡ್ ಫಿನಾಲೆಯ ಕಾರ್ಯಕ್ರಮವನ್ನು ಚಿತ್ರೀಕರಣ ಮಾಡುವ ವೇಳೆ ವೇದಿಕೆಯ ಮುಂಭಾಗಕ್ಕೆ ಯಾವುದೇ ಪ್ರೇಕ್ಷಕರಿಗೆ ಪ್ರವೇಶವಿರುವುದಿಲ್ಲ ಎಂದು ಬಿಗ್ ಬಾಸ್ ಆಯೋಜಕರು ತಿಳಿಸಿದ್ದಾರೆ.

ಕಳೆದ ಸೀಸನ್‍ಗಳಲ್ಲಿ ಬಿಗ್‍ಬಾಸ್ ವಿಜೇತರ ಹೆಸರು ಫಿನಾಲೆ ಷೋ ಪ್ರಸಾರವಾಗುವುದಕ್ಕೆ ಮುಂಚೆಯೇ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು ಆದರೆ ಈ ಭಾರಿ ಹಾಗಾಗಬಾರದು ಎಂಬ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಬಿಗ್ ಬಾಸ್ ಟ್ರೋಫಿ ಯಾರು ಗೆಲ್ಲುತ್ತಾರೆ, ಯಾರು ರನ್ನರ್ ಅಪ್ ಆಗುತ್ತಾರೆ , ಎನ್ನುವ ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಳ್ಳುವ ಕಾರಣಕ್ಕಾಗಿ ಫಿನಾಲೆ ಶೂಟಿಂಗ್ ಅನ್ನು ಗೌಪ್ಯವಾಗಿ ನಡೆಸಲು ತೀರಮಿಸಲಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top