fbpx
ಕಿರುತೆರೆ

ತುಂಬಾ ಗೌಪ್ಯವಾಗಿ ನಡೆಯುತ್ತೆ ಬಿಗ್’ಬಾಸ್ ಗ್ರ್ಯಾಂಡ್ ಫಿನಾಲೆ ಶೂಟಿಂಗ್!

ತುಂಬಾ ಗೌಪ್ಯವಾಗಿ ನಡೆಯುತ್ತೆ ಬಿಗ್’ಬಾಸ್ ಗ್ರ್ಯಾಂಡ್ ಫಿನಾಲೆ ಶೂಟಿಂಗ್!

 

 

ಬಿಗ್ ಬಾಸ್ ಕಾರ್ಯಕ್ರಮದ ಐದನೇ ಅವತರಣಿಕೆ ಇನ್ನೇನು ಬೆರಳೆಣಿಕೆಯ ದಿನಗಳಲ್ಲಿ ಮುಗಿದುಹೋಗುತ್ತಿದೆ. ಮನೆಗೆ ಎಂಟ್ರಿಕೊಟ್ಟಿದ್ದ 18 (2 ವೈಲ್ಡ್ ಕಾರ್ಡ್ ಎಂಟ್ರಿ)ಜನ ಸ್ಪರ್ಧಿಗಳ ಪೈಕಿ 13 ಮಂದಿ ಸ್ಪರ್ಧೆಯಿಂದ ಎಲಿಮಿನೇಟ್ ಆಗಿದ್ದು 5 ಜನ ಸದಸ್ಯರಷ್ಟೇ ಬಿಗ್ ಬಾಸ್ ಫಿನಾಲೆಯಲ್ಲಿ ಉಳಿದುಕೊಂಡಿದ್ದು ಜಯರಾಂ ಕಾರ್ತಿಕ್, ಚಂದನ್ ಶೆಟ್ಟಿ, ದಿವಾಕರ್, ಶ್ರುತಿ ಪ್ರಕಾಶ್ ಮತ್ತು ನಿವೇದಿತಾ ಗೌಡ ಅವರು ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯ ಫಿನಾಲೆ ಸ್ಪರ್ಧಿಗಳಾಗಿದ್ದಾರೆ.

ಕನ್ನಡದ ಇತರೆ ಟಿವಿ ಶೋಗಳಿಗೆ ಹೋಲಿಸಿದರೆ ಬಿಗ್’ಬಾಸ್ ಕಾರ್ಯಕ್ರಮ ಹೆಚ್ಚು ಜನಪ್ರಿಯವಾದದು ಆದರೆ ಫಿನಾಲೆ ಕಾರ್ಯಕ್ರಮದ ಬಗ್ಗೆ ಚಾನಲ್ ಕಳವಳಗೊಂಡಿದೆ. ಯಾಕೆಂದರೆ ಕಳೆದ ಸೀಸನ್ ಗಳಲ್ಲಿ ಕಾರ್ಯಕ್ರಮವನ್ನು ನೋಡಲು ಬಂದಿದ್ದ ಪ್ರೇಕ್ಷಕರು ವಿಜೇತರು ಯಾರು ಎಂಬ ವಿಷಯವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿದು ಬಿಟ್ಟಿದ್ದರು. ಹೀಗೆ ಮಾಡದ್ದರಿಂದ ವಿನ್ನರ್ ಯಾರು ಎಂಬ ಕುತೂಹಲವನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹಾಗಿ ಒಂದು ದಿಢೀರ್ ನಿರ್ದಾರವನ್ನು ತೆಗೆದುಕೊಂಡಿರುವ ಬಿಗ್ ಬಾಸ್ ಆಯೋಜಕರು ಫಿನಾಲೆ ಸಂಚಿಕೆ TVಯಲ್ಲಿ ಪ್ರಸಾರವಾಗುವವರೆಗೂ ವಿಜೇತರನ್ನು ರಹಸ್ಯವಾಗಿಡಲು ಚಾನೆಲ್ ನಿರ್ಧರಿಸಿದೆ.

 


15 ವಾರಗಳ ನಂತರ, ಬಿಗ್ ಬಾಸ್ ಕನ್ನಡ ಸೀಸನ್ 5 ರ ವಿಜೇತರು ವಾರಾಂತ್ಯದ ಫಿನಾಲೆ ಸಂಚಿಕೆಯಲ್ಲಿ ಘೋಷಿಸಲ್ಪಡುತ್ತಾರೆ, ಆದರೆ ಆ ಕಾರ್ಯಕ್ರಮ ನಡೆಯುವ ವೇಳೆ ವೇದಿಕೆಯ ಮುಂಬಾಗ ಯಾವುದೇ ಅತಿಥಿಗಳಿಗೆ ಅಥವಾ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಎಂದು ಚಾನೆಲ್’ನ ಆಪ್ತಮೂಲಗಳು ತಿಳಿಸಿವೆ. ಆದರೆ ಫಿನಾಲೆ ಕಾರ್ಯಕ್ರಮದಲ್ಲಿ ಜೂನಿಯರ್ ಆರ್ಟಿಸ್ಟ್ ಗಳು ಪ್ರೇಕ್ಷಕರ ಜಾಗದಲ್ಲಿ ಇರಲಿದ್ದು ಅವರಿಗೆ ಮೊಬೈಲ್ ಫೋನ್ಗಳನ್ನು ತರುವುದನ್ನು ನಿಷೇದಿಸಲಾಗಿರುತ್ತದೆ. ಈ ಕಿರಿಯ ಕಲಾವಿದರುಗಳು ಒಮ್ಮೆ ಒಳಕ್ಕೆ ಪ್ರವೇಶವಾದರೆ ಕಾರ್ಯಕ್ರಮ ಮುಗಿಯುವವರೆಗೆ ಹೊರಹೋಗುವಂತಿಲ್ಲ. ಈಗಾಗಲೇ ಚಾನೆಲ್ 400 ಕಿರಿಯ ಕಲಾವಿದರುಗಳನ್ನ ಆಯ್ಕೆ ಮಾಡಿದ್ದು ಇವರೇ ಪ್ರೇಕ್ಷಕರಾಗಿರುತ್ತಾರೆ.

ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿರುವ 5ಜನ ಫಿನಾಲೆ ಸ್ಪರ್ಧಿಗಳಲ್ಲಿ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಗೆಲ್ಲಿಸಲು ವೋಟಿಂಗ್ ಲೈನ್’ಗಳು ಓಪನ್ ಆಗಿದ್ದು ಸಾರ್ವಜನಿಕರಿಂದ ಪಡೆದ ಮತ ಎಣಿಕೆ ಹೊರತುಪಡಿಸಿ ವಿಜೇತರ ಆಯ್ಕೆಗೆ ಯಾವುದೇ ಮಾನದಂಡ ಇರುವುದಿಲ್ಲ ಎಂದು ಚಾನೆಲ್ ಮೂಲಗಳು ತಿಳಿಸಿವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top