fbpx
ಕಿರುತೆರೆ

ಚಂದನ್ ಪ್ರಕಾರ ಬಿಗ್ ಬಾಸ್ ಟ್ರೋಫಿ ಗೆಲ್ಲೋದಕ್ಕೆ ಜೆಕೆ ಅರ್ಹ ವ್ಯಕ್ತಿಯಂತೆ! ಕಾರಣ ಏನು ಗೊತ್ತಾ?

ಚಂದನ್ ಪ್ರಕಾರ ಬಿಗ್ ಬಾಸ್ ಟ್ರೋಫಿ ಗೆಲ್ಲೋದಕ್ಕೆ ಜೆಕೆ ಅರ್ಹ ವ್ಯಕ್ತಿಯಂತೆ! ಕಾರಣ ಏನು ಗೊತ್ತಾ?

 

 

ಬಿಗ್ ಬಾಸ್ ಸೀಸನ್ 5 ಕೊನೆ ಹಂತದಲ್ಲಿದ್ದು ಇದೆ ಭಾನುವಾರ ಕಾರ್ಯಕ್ರಮ ಮುಗಿಯಲಿದೆ. ಉಳಿದಿರುವ ಐದು ಜನ ಸದಸ್ಯರು ಗೆಲುವಿನ ಕನಸನ್ನು ಕಾಣುತ್ತಿದ್ದಾರೆ ಯಾರು ವಿಜೇತರಾಗುತ್ತಾರೆ ಎಂಬ ಲೆಕ್ಕಾಚಾರಗಳು ಶುರುವಾಗಿವೆ. ನೆನ್ನೆ ನೀಡಿದ್ದ ಚಟುವಟಿಕೆಯಲ್ಲಿ ತಮ್ಮ ಪ್ರಕಾರ ಈ ಬಾರಿ ಯಾರು ಟ್ರೋಫಿ ಗೆಲ್ಲಬೇಕು ಯಾವ ಯಾವ ಸದ್ಯರು ಯಾವ ಸ್ಥಾನವನ್ನು ಪಡ್ಕೋಬೇಕು ಎಂದು ಪ್ರತಿ ಸದಸ್ಯರು ತಿಳಿಸಬೇಕಾಗಿತ್ತು.

 

 

ಅದರಂತೆ ಎಲ್ಲಾ ಸದಸ್ಯರು ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡರು. ಅಂತೆಯೇ ಚಂದನ್ ಅವರೂ ಕೂಡ ಫೈನಲ್‌ನಲ್ಲಿ ಮೊದಲ, ಎರಡನೇ ಹಾಗೂ ಮೂರನೇ ಸ್ಥಾನದಲ್ಲಿ ಯಾವ ಸ್ಪರ್ಧಿ ಇರಬಹುದು ಎಂದು ತಿಳಿಸಿದ್ದಾರೆ. ಅವರ ಪ್ರಕಾರ ಜೆಕೆ ಬಿಗ್ ಬಾಸ್ ವಿಜೇತರಾದರೆ ಎರಡನೇ ಸ್ಥಾನದಲ್ಲಿ ಸ್ವತಃ ತಾವೇ ಇರಲು ಬಯಸುತ್ತಾರಂತೆ. ಉಳಿದಂತೆ ಮೂರನೇ ಸ್ಥಾನದಲ್ಲಿ ದಿವಾಕರ್, ನಾಲ್ಕನೇ ಸ್ಥಾನದಲ್ಲಿ ನಿವೇದಿತಾ, ಐದನೇ ಸ್ಥಾನದಲ್ಲಿ ಶ್ರುತಿ ಇರಬೇಕಂತೆ.

 

 

ಜೆಕೆಯವರಿಗೆ ಒಂದನೇ ಸ್ಥಾನ ನೀಡಿದಕ್ಕೆ ಚಂದನ್ ವಿವರಣೆ ಕೂಡ ನೀಡಿದರು. ಅವರ ಪ್ರಕಾರ ಜೆಕೆಯವರು ಗೆಲ್ಲೋದಕ್ಕೆ ಚಂದನ್’ಗಿಂತಲೂ ಅರ್ಹ ಸ್ಪರ್ಧಿಯಂತೆ. ಬಿಗ್ ಬಾಸ್ ಮನೆಯಲ್ಲಿ ಜೆಕೆಯವರು ಯಾವುದೇ ಜಗಳಗಳನ್ನು ಮಾಡದೇ ತಮಾಷೆ ಮಾಡಿಕೊಂಡು ತುಂಬಾ ಮನೋರಂಜನೆ ಮಾಡಿದ್ದರಂತೆ. ಟಾಸ್ಕ್’ಗಳಲ್ಲೂ ಕೂಡ ಎಲ್ಲೂ ಕೂಡ ಹಿಂದೇಟು ಹಾಕದೆ ತುಂಬಾ ಉತ್ಸಾಹದಿಂದ ಮಾಡುತ್ತಿದ್ದರಂತೆ ಹಾಗಾಗಿ ಜೆಕೆ ಈ ಬಾರಿ ಬಿಗ್ ಬಾಸ್ ಗೆಲ್ಲಬೇಕು ಎಂದು ಚಂದನ್ ಹೇಳಿದ್ದಾರೆ. ಆದರೆ ಚಂದನ್ ಹೇಳಿದ್ದನ್ನು ಜೆಕೆ ನಿರಾಕರಿಸಿ ಚಂದನ್ ಅವರೇ ಗೆಲ್ಲಬೇಕು ಎಂದು ಹೇಳಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top