ಮಾಹಿತಿ

ಗಣರಾಜ್ಯೋತ್ಸವಕ್ಕೆ ಜಿಯೋ ಕಡೆಯಿಂದ ಭರ್ಜರಿ ಕೊಡುಗೆ.

ಗಣರಾಜ್ಯೋತ್ಸವಕ್ಕೆ ಜಿಯೋ ಕಡೆಯಿಂದ ಭರ್ಜರಿ ಕೊಡುಗೆ.

 

 

ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಗ್ರಾಹಕರನ್ನು ಸೃಷ್ಟಿಸಿಕೊಂಡಿರುವ ರಿಲಯನ್ಸ್ ಜಿಯೋ ವರ್ಷಕ್ಕೆ ಎರಡು ಆಫರ್’ಗಳನ್ನ ಘೋಷಿಸಿದೆ. ಜಿಯೋ ಸಿಮ್ ಬಂದಾಗಿನಿಂದಲೂ ತತ್ತರಿಸಿ ಹೋಗಿದ್ದ ಉಳಿದ ಟೆಲಿಕಾಂ ಸಂಸ್ಥೆಗಳು ಜಿಯೋಗೆ ಸೆಡ್ಡುಹೊಡೆಯಲು ಒಂದರ ಮೇಲೆಂದು ಆಫರ್ ಗಳನ್ನೂ ನೀಡುತ್ತಾ ಬಂದಿದ್ದರೂ ತನ್ನ ಪ್ರಭಾವವನ್ನು ಕುಗ್ಗಿಸಿಕೊಳ್ಳದ ಜಿಯೋ ಭಾರಿ ಆಫರ್ ನೀಡಿದೆ.

ಹಾಲಿ ಜಿಯೋ ಗ್ರಾಹಕರಿಗಾಗಿ ಗಣ ರಾಜ್ಯೋತ್ಸವದ ಪ್ರಯುಕ್ತ ಹೆಚ್ಚುವರಿ ಶೇ.50 ರಷ್ಟು ಡಾಟಾ ಆಫರ್ ಅನ್ನು ಜಿಯೋ ನೀಡಿದೆ. ಪ್ರಸ್ತುತ 149, 349, 399 ಹಾಗೂ 449ರೂಪಾಯಿಯ ರಿಚಾರ್ಜ್ ಪ್ಲಾನ್ ಉಪಯೋಗಿಸುತ್ತಿರುವವರು ಸದ್ಯ ನೀಡಲಾಗುತ್ತಿರುವ ಒಂದು ಜಿಬಿ ಡೇಟಾ ಬದಲಾಗಿ 1.5ಜಿಬಿ, 4G ಡೇಟಾ ಪಡೆಯಲಿದ್ದಾರೆ.

 

 

ಅಂತೆಯೇ 198, 398, 448 ಹಾಗೂ 498ರೂ. ರಿಚಾರ್ಜ್ ಪ್ಲಾನ್ ಬಳಸುತ್ತಿರುವ ಗ್ರಾಹಕರು ದಿನಕ್ಕೆ ಪಡೆಯುತ್ತಿದ್ದ 1.5ಜಿಬಿ ಬದಲಿಗೆ 2 ಜಿಬಿ ಡೇಟಾ ಪಡೆದರೆ, 199, 348 ಹಾಗೂ 509 ಪ್ಲಾನ್ ಬಳಸುತ್ತಿರುವ ಗ್ರಾಹಕರು ದಿನಕ್ಕೆ ಪಡೆಯುತ್ತಿದ್ದ 2 ಜಿಬಿಯ ಬದಲಿಗೆ 2.5 ಜಿಬಿ ಡೇಟಾ ಪಡೆಯಲಿದ್ದಾರೆ. ಈ ಎಲ್ಲಾ ಆಫರ್ ಗಳು ಜನವರಿ 26 ರಿಂದ ಜಾರಿಗೆ ಬರಲಿವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top