fbpx
News

ಮೊಬೈಲ್ ಬಳಕೆದಾರರಿಗೆ ಇಲ್ಲಿದೆ ಒಂದು ಸಿಹಿಸುದ್ದಿ : ಬೆಂಗಳೂರಿನ ಹಲವು ಕಡೆ ಸಿಗಲಿದೆ ಉಚಿತ ವೈ-ಫೈ .

ಮೊಬೈಲ್ ಬಳಕೆದಾರರಿಗೆ ಇಲ್ಲಿದೆ ಒಂದು ಸಿಹಿಸುದ್ದಿ : ಬೆಂಗಳೂರಿನ ಹಲವು ಕಡೆ ಸಿಗಲಿದೆ ಉಚಿತ ವೈ-ಫೈ .

 

 

ಬೆಂಗಳೂರಿಗರು ಇನ್ನು ಮುಂದೆ ಮೊಬೈಲ್ ಡೇಟಾವಿಲ್ಲವೆಂದು ಚಿಂತಿಸಬೇಕಾಗಿಲ್ಲ . ಏಕೆಂದರೆ ನಗರದ ವಿವಿಧ ಕೆಡೆಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಒದಗಿಸಲು ಬಿಬಿಎಂಪಿ ಮುಂದಾಗಿದೆ . ಈ ಮೂಲಕ ಬೆಂಗಳೂರಿಗರಿಗೆ ಉಚಿತ ಡೇಟಾ ವ್ಯವಸ್ಥೆ ಕೊಡಲು ಸಿದ್ಧವಾಗಿದೆ . ಸ್ಮಾರ್ಟ್ ಬೆಂಗಳೂರಿನ ನಿರ್ಮಾಣದ ಉದ್ದೇಶದಿಂದ ಬಿಬಿಎಂಪಿ ಈ ನಿರ್ಧಾರಕ್ಕೆ ಬಂದಿದೆ .

 

 

ಮೊದಲು ನಗರದ ಪ್ರಮುಖ 5 ಸ್ಥಳಗಳಲ್ಲಿ ಉಚಿತ ವೈ-ಫೈ ಅನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುತ್ತದೆ . ಅವುಗಳೆಂದರೆ ಮೆಜೆಸ್ಟಿಕ್ , ಶಿವಾಜಿನಗರ ಬಸ್ ನಿಲ್ದಾಣ , ಕೆ ಆರ್ ಮಾರ್ಕೆಟ್ , ಬಿಬಿಎಂಪಿ ಕೇಂದ್ರ ಕಚೇರಿ ಮತ್ತು ಹೊಸೂರು ರಸ್ತೆಯ ಮಾರುಕಟ್ಟೆ . ಮೊದಲ ಹಂತದಲ್ಲಿ ಇಂಡಸ್ ಕಂಪನಿಯು ವೈ-ಫೈ ಪೂರೈಸುತ್ತದೆ . ನಂತರದಲ್ಲಿ ಏರ್ ಟೆಲ್ ಮತ್ತು ವೋಡಾಪೋನ್ ಕಂಪನಿಗಳು ವೈ-ಫೈ ಒದಗಿಸುತ್ತವೆ .

 

 

ಮೊಬೈಲ್ ಬಳಕೆದಾರರು ಮೊದಲ 30 ನಿಮಿಷ ಉಚಿತ ವೈ-ಫೈ ಸೇವೆ ಪಡೆಕೊಳ್ಳಲಿದ್ದು , ನಂತರದಲ್ಲಿ ವೈ-ಫೈ ನೀಡುವ ಕಂಪನಿ ಶುಲ್ಕ ವಿಧಿಸುತ್ತದೆ . ನಗರದಲ್ಲಿ ಹೆಚ್ಚು ಜನ ಇರುವ ಸ್ಥಳಗಳಲ್ಲಿ ಉಚಿತ ವೈ-ಫೈ ಸೌಲಭ್ಯವನ್ನು ಆರಂಭಿಸಲಾಗುತ್ತದೆ . ನಗರದಲ್ಲಿ ಒಟ್ಟು 300 ಕಡೆ ಉಚಿತ ವೈ-ಫೈ ಸೌಲಭ್ಯವನ್ನು ಒದಗಿಸಲು ಬಿಬಿಎಂಪಿ ನಿರ್ಧರಿಸಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top