fbpx
ಕಿರುತೆರೆ

ವಿನ್ನರ್ ಘೋಷಿಸುವುದಕ್ಕೆ 20 ನಿಮಿಷ ಮುಂಚೆ ಫಿನಾಲೆ ಶೂಟ್.

ವಿನ್ನರ್ ಘೋಷಿಸುವುದಕ್ಕೆ 20 ನಿಮಿಷ ಮುಂಚೆ ಫಿನಾಲೆ ಶೂಟ್..

 

 

ಬಿಗ್ ಬಾಸ್ ಸೀಸನ್ 5 ಕೊನೆ ಹಂತ ತಲುಪಿದ್ದು ಇದೇ ಭಾನುವಾರ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ. ಮನೆಗೆ ಎಂಟ್ರಿಕೊಟ್ಟಿದ್ದ 18 (2 ವೈಲ್ಡ್ ಕಾರ್ಡ್ ಎಂಟ್ರಿ)ಜನ ಸ್ಪರ್ಧಿಗಳ ಪೈಕಿ 13 ಮಂದಿ ಸ್ಪರ್ಧೆಯಿಂದ ಎಲಿಮಿನೇಟ್ ಆಗಿದ್ದು 5 ಜನ ಸದಸ್ಯರಷ್ಟೇ ಬಿಗ್ ಬಾಸ್ ಫಿನಾಲೆಯಲ್ಲಿ ಉಳಿದುಕೊಂಡಿದ್ದು ಜಯರಾಂ ಕಾರ್ತಿಕ್, ಚಂದನ್ ಶೆಟ್ಟಿ, ದಿವಾಕರ್, ಶ್ರುತಿ ಪ್ರಕಾಶ್ ಮತ್ತು ನಿವೇದಿತಾ ಗೌಡ ಅವರು ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯ ಫಿನಾಲೆ ಸ್ಪರ್ಧಿಗಳಾಗಿದ್ದಾರೆ.

 

 

ಕನ್ನಡದ ಇತರೆ ಟಿವಿ ಶೋಗಳಿಗೆ ಹೋಲಿಸಿದರೆ ಬಿಗ್’ಬಾಸ್ ಕಾರ್ಯಕ್ರಮ ಹೆಚ್ಚು ಜನಪ್ರಿಯವಾದದು ಆದರೆ ಫಿನಾಲೆ ಕಾರ್ಯಕ್ರಮದ ಬಗ್ಗೆ ಚಾನಲ್ ಕಳವಳಗೊಂಡಿದೆ. ಯಾಕೆಂದರೆ ಕಳೆದ ಸೀಸನ್ ಗಳಲ್ಲಿ ಕಾರ್ಯಕ್ರಮವನ್ನು ನೋಡಲು ಬಂದಿದ್ದ ಪ್ರೇಕ್ಷಕರು ವಿಜೇತರು ಯಾರು ಎಂಬ ವಿಷಯವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿದು ಬಿಟ್ಟಿದ್ದರು. ಹೀಗೆ ಮಾಡದ್ದರಿಂದ ವಿನ್ನರ್ ಯಾರು ಎಂಬ ಕುತೂಹಲವನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ದಿಢೀರ್ ನಿರ್ದಾರವನ್ನು ತೆಗೆದುಕೊಂಡಿರುವ ಬಿಗ್ ಬಾಸ್ ಆಯೋಜಕರು ಫಿನಾಲೆ ಸಂಚಿಕೆ TVಯಲ್ಲಿ ಪ್ರಸಾರವಾಗುವವರೆಗೂ ವಿಜೇತರನ್ನು ರಹಸ್ಯವಾಗಿಡಲು ಶೋ ಪ್ರಸಾರದ 20 ನಿಮಿಷಕ್ಕೆ ಮೊದಲೇ ಬಿಗ್ಬಾಸ್ ಫಲಿತಾಂಶವನ್ನು ಚಿತ್ರೀಕರಣ ಮಾಡಲು ಚಾನೆಲ್ ನಿರ್ಧರಿಸಿದೆ ಚಾನೆಲ್ ನಿರ್ಧರಿಸಿದೆ.

 

 

15 ವಾರಗಳ ನಂತರ, ಬಿಗ್ ಬಾಸ್ ಕನ್ನಡ ಸೀಸನ್ 5 ರ ವಿಜೇತರು ವಾರಾಂತ್ಯದ ಫಿನಾಲೆ ಸಂಚಿಕೆಯಲ್ಲಿ ಘೋಷಿಸಲ್ಪಡುತ್ತಾರೆ, ಆದರೆ ಆ ಕಾರ್ಯಕ್ರಮ ನಡೆಯುವ ವೇಳೆ ವೇದಿಕೆಯ ಮುಂಬಾಗ ಯಾವುದೇ ಅತಿಥಿಗಳಿಗೆ ಅಥವಾ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಎಂದು ಚಾನೆಲ್’ನ ಆಪ್ತಮೂಲಗಳು ತಿಳಿಸಿವೆ. ಆದರೆ ಫಿನಾಲೆ ಕಾರ್ಯಕ್ರಮದಲ್ಲಿ ಜೂನಿಯರ್ ಆರ್ಟಿಸ್ಟ್ ಗಳು ಪ್ರೇಕ್ಷಕರ ಜಾಗದಲ್ಲಿ ಇರಲಿದ್ದು ಅವರಿಗೆ ಮೊಬೈಲ್ ಫೋನ್ಗಳನ್ನು ತರುವುದನ್ನು ನಿಷೇದಿಸಲಾಗಿರುತ್ತದೆ. ಈ ಕಿರಿಯ ಕಲಾವಿದರುಗಳು ಒಮ್ಮೆ ಒಳಕ್ಕೆ ಪ್ರವೇಶವಾದರೆ ಕಾರ್ಯಕ್ರಮ ಮುಗಿಯುವವರೆಗೆ ಹೊರಹೋಗುವಂತಿಲ್ಲ. ಈಗಾಗಲೇ ಚಾನೆಲ್ 400 ಕಿರಿಯ ಕಲಾವಿದರುಗಳನ್ನ ಆಯ್ಕೆ ಮಾಡಿದ್ದು ಇವರೇ ಪ್ರೇಕ್ಷಕರಾಗಿರುತ್ತಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top