fbpx
ಕಿರುತೆರೆ

ಸಮೀರಾಚಾರ್ಯ ಪತ್ನಿ ಶ್ರಾವಣಿಯ ಆಸೆಯನ್ನು ಕೊನೆಗೂ ಈಡೇರಿಸಿದ ಚಂದನ್ ಶೆಟ್ಟಿ.

ಸಮೀರಾಚಾರ್ಯ ಪತ್ನಿ ಶ್ರಾವಣಿಯ ಆಸೆಯನ್ನು ಕೊನೆಗೂ ಈಡೇರಿಸಿದ ಚಂದನ್ ಶೆಟ್ಟಿ.

 

 

ಬಿಗ್’ಬಾಸ್ ಕನ್ನಡ ಸೀಸನ್ 5ನ ಕೊನೆ ಹಂತ ತಲುಪಿದ್ದು, ಇದೇ ಶನಿವಾರ- ಭಾನುವಾರ ಗ್ರಾಂಡ್ ಫಿನಾಲೆ ಕಾರ್ಯಕ್ರಮ ನಡೆಯಲಿದೆ. ಈ ಭಾರಿಯ ಬಲಾಢ್ಯ ಸ್ಪರ್ದಿಗಳಲ್ಲಿ ಮುಂಚೂಣಿ ಸ್ಥಾನದಲ್ಲಿರುವ ಚಂದನ್ ಶೆಟ್ಟಿ ಮನೆಯೊಳಗೇ ಮತ್ತು ಹೊರಗೆ ಎಲ್ಲರಿಗೂ ಸಕತ್ ಮನೋರಂಜನೆ ನೀಡಿದ್ದಾರೆ. ಕೈಗೆ ಸಿಕ್ಕ ವಸ್ತುಗಳನ್ನೇ ಸಂಗೀತ ಸಂಯೋಜನೆ ಉಪಕರಣಗಳನ್ನಾಗಿ ಉಪಯೋಗಿಸಿಕೊಂಡು, ಸ್ಥಳದಲ್ಲೇ ರ‍್ಯಾಪ್‌ ಸಾಂಗ್‌ ಮಾಡುವ ಚಂದನ್‌ ಟ್ಯಾಲೆಂಟ್‌ಗೆ ಎಲ್ಲರೂ ಫಿದಾ ಆಗಿದ್ದಾರೆ..

 

 

ಕಳೆದವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದ ಸಮೀರಾಚಾರ್ಯ ಅವರ ಪತ್ನಿಯ ಆಸೆಯನ್ನ ಚಂದನ್ ಈಡೇರಿಸಿದ್ದಾರೆ. ಎರಡು ವಾರಗಳ ಹಿಂದೆ ಬಿಗ್ ಬಾಸ್ ಮನೆಯೊಳಕ್ಕೆ ಪ್ರತಿ ಸ್ಪರ್ಧಿಗಳ ಕುಟುಂಬದವರನ್ನು ಕರೆಸಿದ್ದಾಗ ಬಂದಿದ್ದ ಸಮೀರಾಚಾರ್ಯ ಪತ್ನಿ ಶ್ರಾವಣಿ, ಚಂದನ್ ಅವರ ಜೊತೆ ಮಾತನಾಡುವಾಗ ”ನನ್ನ ಮೇಲೆ ಒಂದು ಹಾಡು ಮಾಡಿ” ಎಂದು ಕೇಳಿಕೊಂಡಿದ್ದರು.. ಆಗ ಚಂದನ್ ಕೂಡ ‘ಆಯಿತು” ಎಂದು ಸಮ್ಮತಿಸಿದರು.

 

 

ಫಿನಾಲೆಗೆ ಇನ್ನೊಂದು ವಾರ ಮಾತ್ರ ಬಾಕಿ ಉಳಿದಿರುವಾಗ ಮನೆಯಿಂದ ಎಲಿಮಿನೇಟ್ ಆದ ಸಮೀರಾಚಾರ್ಯ ಅವರನ್ನು ನೆನೆದು ಅವರು ಮನೆಯಿಂದ ಹೊರಹೋಗಿದ್ದಕ್ಕೆ ಬೇಸರ ವ್ಯಕ್ತಡಿಸಿದ ಚಂದನ್  ಗಾರ್ಡನ್ ಏರಿಯಾದಲ್ಲಿ ಕೂತು ನಿವೇದಿತಾ ಜೊತೆ ಮಾತನಾಡುತ್ತಿದ್ದಾಗ  ಸಮೀರಾಚಾರ್ಯ ಅವರ ಪತ್ನಿಯ ಕುರಿತು ಹಾಡೊಂದನ್ನು ಮಾಡಿ ಹಾಡಿದ್ದಾರೆ. ಈ ಕೆಳಗಿನ ರೀತಿ ಸಾಹಿತ್ಯವನ್ನು ರಚಿಸಿದ್ದಾರೆ.

” ಶ್ರಾವಣಿ ಶ್ರಾವಣಿ ಯು ಆರ್ ಮೈ ಕಣ್ಮಣಿ
ಹಾರ್ಟ್ ಅನ್ನೋ ಪಂಜರಕ್ಕೆ ಅರಗಿಣಿ.

ಆ ತುಪ್ಪ ತಂದ್ರೂ ಖಾಲಿ
ಆ ಡ್ರೈ ಫ್ರೂಟ್ಸ್ ತಂದ್ರೂ ಖಾಲಿ
ಆ ಜ್ಯೂಸ್ ತಂದ್ರೂ ಖಾಲಿ
ಆ ಜಾಮೂನು ತಂದ್ರೂ ಖಾಲಿ
ರೀ ಯಾಕ್ರೀ ರೀ. ಎಲ್ಲಾ ತಿಂದು ಮುಗಿಸ್ಬಿಡದೇ…

ಶ್ರಾವಣಿ ಶ್ರಾವಣಿ ಯು ಆರ್ ಮೈ ಕಣ್ಮಣಿ
ಹಾರ್ಟ್ ಅನ್ನೋ ಪಂಜರಕ್ಕೆ ಅರಗಿಣಿ….

ಆ ಬೇಗ ಏಳಬೇಕು
ಆ ಪೂಜೆ ಮಾಡಬೇಕು
ಆ ಊಟ ಮುಗಿಸಿಕೊಂಡು
ಆ ನಿದ್ದೆ ಮಾಡಬೇಕು
ರೀ ಯಾಕ್ರೀ ರೀ… ಏ ಬ್ಯಾಸರ ಬರ್ಲೀಕತ್ತದ…

ಶ್ರಾವಣಿ ಶ್ರಾವಣಿ ಯು ಆರ್ ಮೈ ಕಣ್ಮಣಿ
ಹಾರ್ಟ್ ಅನ್ನೋ ಪಂಜರಕ್ಕೆ ಅರಗಿಣಿ.

ಶ್ರಾವಣಿ ಶ್ರಾವಣಿ ಯು ಆರ್ ಮೈ ಕಣ್ಮಣಿ
ಹಾರ್ಟ್ ಅನ್ನೋ ಪಂಜರಕ್ಕೆ ಅರಗಿಣಿ”

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top