fbpx
ಕಿರುತೆರೆ

ದಿವಾಕರ್ ಆಡಿದ ಈ ಒಂದು ಮಾತಿಗೆ ಬಿಕ್ಕಿ ಬಿಕ್ಕಿ ಅತ್ತ ನಿವೇದಿತಾ ಗೌಡ!

ದಿವಾಕರ್ ಆಡಿದ ಈ ಒಂದು ಮಾತಿಗೆ ಬಿಕ್ಕಿ ಬಿಕ್ಕಿ ಅತ್ತ ನಿವೇದಿತಾ ಗೌಡ!

 

 

ಬಿಗ್ ಬಾಸ್ ಸೀಸನ್ 5 ಕಾರ್ಯಕ್ರಮವು ಮುಗಿಯುವ ಹಂತವನ್ನು ತಲುಪಿದ್ದು ಇದೆ ಭಾನುವಾರ ಟ್ರೋಫಿಗೆ ಮುತ್ತಿಡುವವರು ಯಾರು ಎಂದು ತಿಳಿಯಲಿದೆ. ಕೊನೆ ಹಂತದಲ್ಲಿ ಫಿನಾಲೆ ಸ್ಪರ್ಧಿಗಳಾಗಿ ಜೆಕೆ, ಚಂದನ್, ದಿವಾಕರ್,ನಿವೇದಿತಾ,ಶ್ರುತಿ ಉಳಿದುಕೊಂಡಿದ್ದಾರೆ. ನೆನ್ನೆಯ ಸಂಚಿಕೆಯಲ್ಲಿ ದಿವಾಕರ್ ಆಡಿದ ಒಂದು ಮಾತಿನಿಂದ ನಿವೇದಿತಾ ಗೊಳೋ ಎಂದು ಕಣ್ಣೀರಿಟ್ಟಿದ್ದಾಳೆ.

ನೆನ್ನೆ ಬಿಗ್ ಬಾಸ್ ಸದಸ್ಯರಿಗೆ ನನ್ನ ಹಾಡು ನನ್ನದು ಎಂಬ ವಿಶೇಷ ಚಟುವಟಿಕೆಯನ್ನು ನೀಡಲಾಗಿತ್ತು. ಅದರ ಪ್ರಕಾರ ಸ್ಪರ್ಧಿಗಳು ಬೆಳಿಗ್ಗೆ ಹೊತ್ತು ಹಾಕಲಾಗುವ ವೇಕ್ ಅಪ್ ಹಾಡುಗಳನ್ನು ಉಳಿದ ಮೂರು ದಿನಗಳಿಗೆ ತಮಗಿಷ್ಟ ಬಂದವುಗಳನ್ನು ಆಯ್ಕೆ ಮಾಡಿಕೊಂಡು ಬಿಗ್ ಬಾಸ್’ಗೆ ತಿಳಿಸಬೇಕಾಗಿತ್ತು. ಅದರಂತೆ ಎಲ್ಲರೂ ಕೂಡ ತಮಗಿಷ್ಟವಾದ ಹಾಡುಗಳನ್ನು ಬಿಗ್ ಬಾಸ್ ಗೆ ತಿಳಿಸುತ್ತಿದ್ದರು.

 

 

ಈ ವೇಳೆ ದಿವಾಕರ್ ಅವರು ವಿಷ್ಣುವರ್ಧನ್ ಅವರ ಯಾವುದಾದರೊಂದು ಹಾಡನ್ನು ಪ್ಲೇ ಮಾಡುವಂತೆ ಹೇಳಿದ್ದರು ಆಗ ಮದ್ಯೆ ಬಾಯಿ ಹಾಕಿದ ನಿವೇದಿತಾ ಬೇರೆ ಯಾವುದಾದರೂ ಮೆಲೋಡಿ ಸಾಂಗ್ ಪ್ಲೇ ಮಾಡುವಂತೆ ಕೇಳಿಕೊಂಡರು. ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಮಾತಿನ ಚಕಮಕಿ ಬೆಳೆದು ಮಾತಿನ ನಡುವೆ ದಿವಾಕರ್ ಮೆಂಟಲ್ ಅಂದಿದ್ದರಿಂದ ನಿವೇದಿತಾ ಕಣ್ಣೀರಿಟ್ಟಿದ್ದಾರೆ. ಕೋಪಗೊಂಡು ನಿವೇದಿತಾ ಇಷ್ಟುದಿನ ಹಿಡಿದಿಟ್ಟುಕೊಂಡಿದ್ದ ಕೂಡ ತನ್ನ ನಿಜವಾದ ಕೋಪವನ್ನು ದಿವಾಕರ್ ಗೆ ತೋರಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top