fbpx
ಸಿನಿಮಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರೀತಿಯ ಲ್ಯಾಂಬೋರ್ಗಿನಿ ಕಾರು ನೋಡಲು ಬಂದ ಸ್ಯಾಂಡಲ್ ವುಡ್ ತಾರೆಯರು

ಬಾಕ್ಸ್ ಆಫೀಸ್ ಸುಲ್ತಾನ್ ಇತ್ತೀಚಿಗೆ ಲ್ಯಾಂಬೋರ್ಗಿನಿ ಕಾರು ತೆಗೆದುಕೊಂಡ ವಿಷಯ ಎಲ್ಲರಿಗು ಗೊತ್ತೇ ಇದೆ , ಇತ್ತೀಚೆಗಷ್ಟೇ ಬಹು ನಿರೀಕ್ಷಿತ `ಕುರುಕ್ಷೇತ್ರ’ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ಬಂದ ದಚ್ಚು ಮನೆಗೆ ಸ್ಯಾಂಡಲ್ ವುಡ್ ಮಂದಿ ಬಂದಿದ್ದರು .

 

 

 

ಎಲ್ಲರ ಗಮನ ಸೆಳೆದ ಲ್ಯಾಂಬೋರ್ಗಿನಿ ಕಾರಿನ ಜೊತೆಗೆ ಪೋಸ್ ಕೊಟ್ಟು ನಗು ನಗುತ್ತಾ ಫೋಟೋ ತೆಗೆಸಿಕೊಂಡರು ತಾರೆಯರು .

ಪ್ರಜ್ವಲ್ ದೇವರಾಜ್, ಮೆಜೆಸ್ಟಿಕ್’ ಚಿತ್ರ ನಿರ್ಮಾಪಕ ಎಂ.ಜಿ ರಾಮಮೂರ್ತಿ, ಯಶಸ್ ಸೂರ್ಯ, ಚಿರಂಜೀವಿ ಸರ್ಜಾ ,ತರುಣ್ ಸುಧೀರ್ ಸಹ ಈ ಸಮಯದಲ್ಲಿ ಹಾಜರಿದ್ದರು.

 

 

 

 

ಸಂಕ್ರಾಂತಿ ದಿನ ಕಾರು ಪೂಜೆ ಮಾಡಿ ಸ್ವತಃ ಲ್ಯಾಂಬೊರ್ಗಿನಿ ಕಾರನ್ನು ಡ್ರೈವ್ ಮಾಡಿಕೊಂಡು ದರ್ಶನ್ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದರು. ಅಂದಹಾಗೆ ಲ್ಯಾಂಬೊರ್ಗಿನಿ ಕಾರಿನ ಮೊತ್ತ ಬರೋಬ್ಬರಿ ಹತ್ತು ಕೋಟಿ. ಇದು ಇಡೀ ಭಾರತದಲ್ಲಿ ಮೂರು ಮಂದಿಯ ಬಳಿ ಮಾತ್ರವೇ ಇದೆ. ಅದರಲ್ಲಿ ಸ್ಟಾರ್ ದರ್ಶನ್ ಕೂಡಾ ಒಬ್ಬರು.

 

 

ನಟರನೇಕರಿಗೆ ದರ್ಶನ್ ಅವರಿಗಿರುವಂಥಾದ್ದೇ ಕಾರಿನ ಕ್ರೇಜ್ ಇರುತ್ತೆ. ಬಾಲಿವುಡ್ ನಟರಿಗಂತೂ ಇಂಥಾ ಕ್ರೇಜ್ ತುಸು ಹೆಚ್ಚೇ ಇರುತ್ತೆ. ಅಚ್ಚರಿಯ ಸಂಗತಿಯೆಂದರೆ, ಬಾಲಿವುಡ್ ನಟರ ಬಳಿಯೂ ಲ್ಯಾಂಬೊರ್ಗಿನಿ ಕಾರಿಲ್ಲ. ಬಾಲಿವುಡ್ಡೇ ಯಾಕೆ? ಬೇರೆ ಯಾವ ಭಾಷೆಗಳ ನಟರಲ್ಲಿಯೂ ಈ ಕಾರಿಲ್ಲ.

 

 

ಈ ಮೂಲಕ ಈ ದುಬಾರಿ ಕಾರು ಖರೀದಿಸಿರೋ ಭಾರತದ ಏಕೈಕ ನಟನಾಗಿಯೂ ದರ್ಶನ್ ಹೊರ ಹೊಮ್ಮಿದ್ದಾರೆ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top