fbpx
ಕರ್ನಾಟಕ

ಶೀತ ಮತ್ತು ಕಫದಿಂದ ಬಳಲಿದ ಸಿದ್ದಗಂಗಾಶ್ರೀಗಳಿಗೆ ಅನಾರೋಗ್ಯ: ಬೆಂಗಳೂರು ಬಿಜಿಎಸ್ ಆಸ್ಪತ್ರೆಗೆ ದಾಖಲು

ಶೀತ ಮತ್ತು ಕಫದಿಂದ ಬಳಲಿದ ಸಿದ್ದಗಂಗಾಶ್ರೀಗಳಿಗೆ ಅನಾರೋಗ್ಯ: ಬೆಂಗಳೂರು ಬಿಜಿಎಸ್ ಆಸ್ಪತ್ರೆಗೆ ದಾಖಲು

ತುಮಕೂರು: ಸಿದ್ದಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಶೀತ ಮತ್ತು ಕಫ ಹೆಚ್ಚಾಗಿ ಬಳಲುತ್ತಿದ್ದರಿಂದ ಶುಕ್ರವಾರ ಬೆಳಗಿನ ಜಾವ ಬೆಂಗಳೂರು ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Image result for siddaganga shree

ರಾತ್ರಿ ಶೀತ,ಕಫ ದಿಂದ ಬಳಲುತ್ತಿದ್ದರು. ಈ ಸ್ಥಿತಿಯಲ್ಲೇ ಅವರು ಇಷ್ಟಲಿಂಗ ಪೂಜೆ ನೆರವೇರಿಸಿದರು. ಬಳಿಕ ಅವರನ್ನು ಬಿಜಿಎಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಯಿತು ಎಂದು ಮಠದ ಮೂಲಗಳು ತಿಳಿಸಿವೆ.

Related image

ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಗೆ ಶುಕ್ರವಾರ ಬೆಳಿಗ್ಗೆ ದಾಖಲಿಸಲಾಗಿದೆ. ಶೀತ, ಕಪ, ಜ್ವರದಿಂದ ಬಳಲಿರುವ ಡಾ. ಶಿವಕುಮಾರ ಸ್ವಾಮೀಜಿ ಅವರನ್ನು ಮಠದ ಸಿಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗುರುವಾರ ಸಂಜೆ ವೇಳೆ ಜ್ವರ ಕಾಣಿಸಿಕೊಂಡಿತ್ತು ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top