fbpx
ಕಿರುತೆರೆ

106ದಿನಗಳ ಬಿಗ್ ಬಾಸ್ ಪಯಣವನ್ನು ಮುಗಿಸಿದ ಸ್ಪರ್ಧಿಗಳು! ದೊಡ್ಮನೆಯ ವಾಸ ನೆನ್ನೆಗೆ ಮುಕ್ತಾಯ.

106ದಿನಗಳ ಬಿಗ್ ಬಾಸ್ ಪಯಣವನ್ನು ಮುಗಿಸಿದ ಸ್ಪರ್ಧಿಗಳು! ದೊಡ್ಮನೆಯ ವಾಸ ನೆನ್ನೆಗೆ ಮುಕ್ತಾಯ.

 

 

ಬಿಗ್ ಬಾಸ್ ಸೀಸನ್ 5 ಕೊನೆ ಹಂತ ತಲುಪಿದ್ದು ನೆನ್ನೆಗೆ ಬಿಗ್ ಬಾಸ್ ಮನೆಮಂದಿಯ ದೊಡ್ಮನೆ ವಾಸ ಮುಕ್ತಯಾಗಿದೆ. ಇಂದು ಮತ್ತು ನಾಳೆ ಗ್ರಾಂಡ್ ಫಿನಾಲೆ ನಡೆಯಲಿದ್ದು ವಿನ್ನರ್ ಯಾರಾಗುತ್ತಾರೆ ಎನ್ನುವ ಕುತೂಹಲ ವೀಕ್ಷಕರಲ್ಲಿ ಮನೆಮಾಡಿದೆ.ಮನೆಗೆ ಎಂಟ್ರಿಕೊಟ್ಟಿದ್ದ 18 (2 ವೈಲ್ಡ್ ಕಾರ್ಡ್ ಎಂಟ್ರಿ)ಜನ ಸ್ಪರ್ಧಿಗಳ ಪೈಕಿ 13 ಮಂದಿ ಸ್ಪರ್ಧೆಯಿಂದ ಎಲಿಮಿನೇಟ್ ಆಗಿದ್ದು 5 ಜನ ಸದಸ್ಯರಷ್ಟೇ ಬಿಗ್ ಬಾಸ್ ಫಿನಾಲೆಯಲ್ಲಿ ಉಳಿದುಕೊಂಡಿದ್ದಾರೆ.

ಬಿಗ್‌ಬಾಸ್ ಆದೇಶ, ಟಾಸ್ಕ್‌ನ ನಿಯಮಗಳನ್ನು ಪಾಲಿಸುತ್ತಲೇ ಕೊನೆಯ ಹಂತ ತಲುಪಿರುವ ಜಯರಾಂ ಕಾರ್ತಿಕ್, ಚಂದನ್ ಶೆಟ್ಟಿ, ದಿವಾಕರ್, ಶ್ರುತಿ ಪ್ರಕಾಶ್ ಮತ್ತು ನಿವೇದಿತಾ ಗೌಡ ಅವರು ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯ ಫಿನಾಲೆ ಸ್ಪರ್ಧಿಗಳಾಗಿದ್ದು ಐದೂ ಜನರಲ್ಲೂ ಕಾಂಪಿಟೇಷನ್ ತುಂಬಾ ಜೋರಾಗಿದೆ.

 

 

ಉಳಿದಿರುವ ಐದು ಜನರಲ್ಲಿ ಬಿಗ್’ಬಾಸ್ ಟ್ರೋಫಿ ಗೆಲ್ಲುವರಾರು, ರನ್ನರ್ ಅಪ್ ಆಗುವವರು ಯಾರು ಎಂಬ ಪ್ರಶ್ನೆಗಳಿಗೆ ನಾಳೆ ಉತ್ತರ ಸಿಗಲಿದೆ. ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ವೋಟ್ ಮಾಡಲು ಐದು ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು ಇಂದು ಬೆಳಿಗ್ಗೆ 9ಗಂಟೆಗೆ ವೋಟಿಂಗ್ ಲೈನ್ ಗಳು ಕೂಡ ಕ್ಲೋಸ್ ಆಗಿವೆ. ನಾಳೆ ಸಂಜೆ ನಟ ಕಿಚ್ಚಸುದೀಪ್ ಬಿಗ್ ಬಾಸ್ ವಿಜೇತರನ್ನು ಘೋಷಿಸಲಿದ್ದು, ಬಿಗ್ ಬಾಸ್ ಫಿನಾಲೆಗೆ ಮನೆಯ ಎಲ್ಲ ಎಲಿಮಿನೇಟ್ ಸದಸ್ಯರು ಆಗಮಿಸಿದ್ದಾರೆ.

 


ಫಿನಾಲೆ ಸಂಚಿಕೆ TVಯಲ್ಲಿ ಪ್ರಸಾರವಾಗುವವರೆಗೂ ವಿಜೇತರನ್ನು ರಹಸ್ಯವಾಗಿಡಲು ಶೋ ಪ್ರಸಾರದ 20 ನಿಮಿಷಕ್ಕೆ ಮೊದಲೇ ಬಿಗ್ಬಾಸ್ ಫಲಿತಾಂಶವನ್ನು ಚಿತ್ರೀಕರಣ ಮಾಡಲು ಚಾನೆಲ್ ನಿರ್ಧರಿಸಿರುವುದರಿಂದ ಬಿಗ್ ಬಾಸ್ ಗೆದ್ದಿರುವವರು ಯಾರು ಎಂಬುದು ಇನ್ನೂ ಕೂಡ ಎಲ್ಲಿಯೂ ಬಹಿರಂಗವಾಗಿಲ್ಲ.ಒಟ್ಟಾರೆಯಾಗಿ ಬಿಗ್ ಬಾಸ್ ಮನೆಯಲ್ಲಿ 106ದಿನಗಳ ಸುದೀರ್ಘ ಪಯಣದಲ್ಲಿ ಮನೆಯೊಳಗೆ ಕಳೆದ ವಿವಿಧ ಭಾವನೆಯ ಕ್ಷಣಗಳ ನೆನಪನ್ನು ಹೊತ್ತು ಫಿನಾಲೆ ಸ್ಪರ್ಧಿಗಳು ಮನೆಯಿಂದ ಹೊರಬರುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top