ಜ್ಯೋತಿಷ್ಯ

ಈ ವರ್ಷ ಈ ಮೂರು ರಾಶಿಯವರಿಗೆ ವೈವಾಹಿಕ ಹಾಗು ಪ್ರೀತಿ ಜೀವನ ಅಷ್ಟು ಚೆನ್ನಾಗಿ ಇರುವುದಿಲ್ಲ ಎಚ್ಚರಿಕೆ

ಈ ವರ್ಷ ಈ ಮೂರು ರಾಶಿಯವರಿಗೆ ವೈವಾಹಿಕ ಹಾಗು ಪ್ರೀತಿ ಜೀವನ ಅಷ್ಟು ಚೆನ್ನಾಗಿ ಇರುವುದಿಲ್ಲ ಎಚ್ಚರಿಕೆ

 

ಜೀವನದಲ್ಲಿ ಪ್ರೀತಿ,ಹಣ ಹಾಗೂ ಆಸ್ತಿಯೂ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಹಣ ಹಾಗೂ ಆಸ್ತಿಯನ್ನು ಕಳೆದುಕೊಂಡರೂ ಜೀವನವನ್ನು ಹೇಗೋ ನಡೆಸಬಹುದು. ಆದರೆ ಮನಸ್ಸಿಗೆ ಹತ್ತಿರವಾದವರನ್ನು ಕಳೆದುಕೊಂಡರೆ ಮನಸ್ಸಿಗೆ ತುಂಬಾ ನೋವುಂಟಾಗುತ್ತದೆ. ನಮ್ಮ ಜೀವನ ಎನಿಸಿಕೊಂಡ ವ್ಯಕ್ತಿಯನ್ನು ಕಳೆದುಕೊಂಡರೆ ಅಥವಾ ಅವರು ನಮ್ಮಿಂದ ದೂರವಾದರೆ ಅದರಿಂದ ಉಂಟಾಗುವ ನೋವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆ ನೋವು ಹಾಗೂ ಬೇಸರ ನಮ್ಮನ್ನು ಮಾನಸಿಕವಾಗಿ ಕುಂದುವಂತೆ ಮಾಡುತ್ತದೆ .

ಮಿಥುನ ರಾಶಿ.

 

2017 ರ ಅಂತ್ಯದಲ್ಲಿ ಶನಿಯು ಮಕರ ರಾಶಿಗೆ ಪ್ರವೇಶ ಪಡೆದಿದೆ . ಮುಂದಿನ ಎರಡೂವರೆ ವರ್ಷಗಳ ಕಾಲವೂ ಇದು ಹಾಗೆಯೇ ಮುಂದುವರಿಯಲಿದೆ. ಈ ಪರಿಣಾಮದಿಂದ ವ್ಯಕ್ತಿಯ, ಪ್ರೀತಿ ಹಾಗೂ ಸಂಬಂಧಗಳ ಮೇಲೆ ಹೆಚ್ಚಿನ ಪ್ರಭಾವ ಉಂಟಾಗುವುದು. ಈ ಬದಲಾವಣೆಯಿಂದ ವ್ಯಕ್ತಿಯು ಪ್ರೀತಿಯ ಜೀವನದಲ್ಲಿ ಗೊಂದಲಗಳು ಹಾಗೂ ಭಿನ್ನಾಭಿಪ್ರಾಯಗಳು ಹೆಚ್ಚುವವು.

ವ್ಯಕ್ತಿ ಯಾವ ಬಗೆಯ ಹವ್ಯಾಸಗಳನ್ನು ಮುಂದುವರಿಸುತ್ತಾನೆ ಹಾಗೂ ಆತ ಈ ಮೊದಲು ಯಾವ ಬಗೆಯ ಜೀವನ ಕ್ರಮವನ್ನು ಎದುರಿಸುತ್ತಾ ಬಂದಿದ್ದಾನೆ ಎನ್ನುವುದು ಸಹ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

ಮಿಥುನ ರಾಶಿಯವರು ಸಾಮಾನ್ಯವಾಗಿ ಇತರರಲ್ಲಿ ತಮ್ಮನ್ನು ಹುಡುಕುತ್ತಾರೆ. ಅವರು ಇತರರಲ್ಲಿ ತಮ್ಮ ತನವನ್ನು ಹುಡುಕುವ ಪ್ರವೃತ್ತಿ ಹೊಂದಿರುವುದರಿಂದ, ಬಹುಬೇಗ ಪ್ರೀತಿಯಲ್ಲಿ ಬೀಳುವ ಸಾಧ್ಯತೆಗಳಿವೆ. ಇವರು ಮೆಚ್ಚಿರುವ ವ್ಯಕ್ತಿಗಾಗಿ ತಮ್ಮ ಸಂಪೂರ್ಣ ಜೀವನವನ್ನೇ ಬದಲಿಸಿಕೊಳ್ಳಲು ಸಹ ಸಿದ್ಧರಾಗಿರುತ್ತಾರೆ.

ಈ ವರ್ಷ ಮಿಥುನ ರಾಶಿಯವರು ಹೇಗೆ ತಮ್ಮನ್ನು ತಾವು ಸಂಪೂರ್ಣವಾದ ವ್ಯಕ್ತಿತ್ವವನ್ನು ಹೊಂದಬೇಕು ? ಬೇರೆಯವರಲ್ಲಿ ಹೇಗೆ ತಮ್ಮ ಪ್ರೀತಿಯನ್ನು ಕಾಣಬೇಕು ? ಎನ್ನುವುದನ್ನು ತಿಳಿದುಕೊಳ್ಳುವಿರಿ.ಈ ವರ್ಷ ಕೆಲವರು ತಮ್ಮ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ.

ಪ್ರೀತಿಯ ಹುಡುಕಾಟದಲ್ಲಿರುವವರು ನಿಮ್ಮ ಪ್ರೀತಿಯನ್ನು ಪಡೆಯಲು ಸೂಕ್ತ ದಾರಿಯನ್ನು ಅನುಸರಿಸಿ. ಆದರೆ ಈ ವರ್ಷ ಅದು ನಿಮಗೆ ಲಭಿಸದು ಎನ್ನುವುದನ್ನು ನೀವು ನೆನಪಿನಲ್ಲಿ ಇಟ್ಟುಕೊಂಡಿರಬೇಕು.

 

ತುಲಾ ರಾಶಿ .

 

ಈ ವರ್ಷ ನೀವು ನಿಮ್ಮ ಜೀವನವನ್ನು ಹೇಗೆ ಸಮತೋಲನದಲ್ಲಿ ಕೊಂಡೊಯ್ಯುತ್ತೀರಿ ಎನ್ನುವುದು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ.ಬಾಲ್ಯದಲ್ಲಿ ಕಂಡ ನಿರಾಸೆಯ ಬದುಕು ಈ ಬಾರಿ ನಿಮ್ಮನ್ನು ಕಾಡುವ ಸಾಧ್ಯತೆಗಳಿವೆ. ನಿಮ್ಮದೇ ರೀತಿಯಲ್ಲಿ ಸನ್ನಿವೇಶ ಹಾಗೂ ಸಮಸ್ಯೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಜಾಣ್ಮೆಯನ್ನು ನೀವು ತೋರಬೇಕಾಗುವುದು.

ಈ ವರ್ಷ ನಿಮ್ಮ ಭಾವನೆಯ ಆಸೆಗಳು ಪ್ರೀತಿಯೂ ಭೂ ಸಮನಾಗಿಸುತ್ತದೆ ಎಂದು ಹೇಳಬಹುದು.

ಈ ವರ್ಷದುದ್ದಕ್ಕೂ ನಿಮ್ಮ ಜೀವನ ಛಿದ್ರತೆಯನ್ನು ಅನುಭವಿಸುವ ಸಾಧ್ಯತೆಗಳಿವೆ. ನೀವು ಇಟ್ಟ ನಂಬಿಕೆಯನ್ನು ಕಳೆದುಕೊಳ್ಳುವಿರಿ, ನಿಮ್ಮ ಪ್ರೀತಿ ಪಾತ್ರರು ನಿಮ್ಮ ಭಾವನೆಯೊಂದಿಗೆ ಆಟ ಆಡುವ ಲಕ್ಷಣಗಳೇ ಹೆಚ್ಚಾಗಿ , ನಿಮ್ಮ ಸೌಹಾರ್ದ ಆದರ್ಶಗಳು ಅಸ್ತವ್ಯಸ್ತಗೊಳ್ಳುವುದು ನಿಮ್ಮ ಎಲ್ಲಾ ಸಮಯವೂ ಈ ವರ್ಷ ಸಂತೋಷವನ್ನು ನೀಡುವುದಿಲ್ಲ .

ನಿಮ್ಮ ಸ್ವಂತ ಆಂತರಿಕ ಸಮತೋಲನಕ್ಕೆ ನೀವೇ ಹೋರಾಡಬೇಕಾಗುವುದು. ನಿಮ್ಮ ಬುದ್ಧಿವಂತಿಕೆಯನ್ನು ಬಳಸಿಕೊಂಡು ಸನ್ನಿವೇಶವನ್ನು ಮತ್ತು ಸಮಸ್ಯೆಗಳನ್ನು ನಿಭಾಯಿಸಬೇಕಾಗುವುದು.

 

ವೃಶ್ಚಿಕ ರಾಶಿ.

 

 

ಈ ವರ್ಷ ನಿಮ್ಮ ಪ್ರೀತಿಯನ್ನು ನೀವೇ ಕಳೆದುಕೊಳ್ಳುವ ಸಾಧ್ಯತೆಗಳಿವೆ, ನಿಮ್ಮ ಹೃದಯಕ್ಕೆ ನೀವೇ ನೋವುಂಟು ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ, ವರ್ಷದ ಆರಂಭದಲ್ಲಿ ಕಾಣುವ ಕೆಲವು ಪ್ರಕ್ರಿಯೆಯು ನಿಮ್ಮ ಮನಸ್ಸಿಗೆ ಅಪಾರವಾದ ನೋವನ್ನು ಉಂಟು ಮಾಡುವುದು, ಆಗಾಗ ನಿಮ್ಮ ಸಮಸ್ಯೆಗಳು ನಿಮ್ಮನ್ನು ಪ್ರಚೋದಿಸುತ್ತಲೇ ಇರುತ್ತದೆ, ಜೊತೆಗೆ ಸುತ್ತಲಿನ ಜನರ ಪ್ರಚೋದನೆಗೂ ನೀವು ಒಳಗಾಗುವಿರಿ. ನಿಮ್ಮ ಹಾನಿಕಾರಕ ಶಕ್ತಿಯನ್ನು ನೀವು ಆದಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಆಗಲೇ ಸಮಸ್ಯೆ ಹಾಗೂ ಸನ್ನಿವೇಶಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವುದು .

ಈ ವರ್ಷದ ಕೆಲವು ಗ್ರಹಗತಿಗಳ ಬದಲಾವಣೆಯಿಂದ ನೀವು ಅನೇಕ ನಷ್ಟಗಳನ್ನು ಎದುರಿಸಬೇಕಾಗುವುದು. ನೀವು ಯಾವ ಕೆಲಸವನ್ನು ಮಾಡಬೇಕು ? ಯಾವುದನ್ನು ಮಾಡಬಾರದು ? ಎನ್ನುವುದರ ಬಗ್ಗೆ ನಿಮಗೆ ಎಚ್ಚರ ಮತ್ತು ಅರಿವು ಇರಬೇಕು. ಆಗಲೇ ನೀವು ನಿಮ್ಮ ಕಷ್ಟ, ನಷ್ಟ ಹಾಗೂ ನೋವುಗಳ ಪ್ರಮಾಣವನ್ನು ತಗ್ಗಿಸಿಕೊಳ್ಳಲು ಸಾಧ್ಯವಾಗುವುದು. ವರ್ಷದ ಅಂತ್ಯದಲ್ಲಾದರೂ ಒಂದಷ್ಟು ಸಮಾಧಾನವನ್ನು ಪಡೆದುಕೊಳ್ಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top