ಮನೋರಂಜನೆ

ಕಾಮನ್ ಮ್ಯಾನ್ ದಿವಾಕರ್ ಕನ್ನಡದ ಸೂಪರ್ ಹಿಟ್ ಚಿತ್ರವೊಂದರಲ್ಲಿ ನಟಿಸಿದ್ದಾರೆ! ಆ ಚಿತ್ರ ಯಾವುದು ಗೊತ್ತಾ?

ಕಾಮನ್ ಮ್ಯಾನ್ ದಿವಾಕರ್ ಕನ್ನಡದ ಸೂಪರ್ ಹಿಟ್ ಚಿತ್ರವೊಂದರಲ್ಲಿ ನಟಿಸಿದ್ದಾರೆ! ಆ ಚಿತ್ರ ಯಾವುದು ಗೊತ್ತಾ?

 

 

ಬಿಗ್ ಬಾಸ್ ಮನೆಗೆ ಕಾಮನ್ ಮ್ಯಾನ್ ಕೋಟಾದಲ್ಲಿ ಎಂಟ್ರಿ ಕೊಟ್ಟು ಈಗ ಫಿನಾಲೆವರೆಗೂ ಬಂದು ನಿಂತಿರುವ ದಿವಾಕರ್ ಅವರು ಕನ್ನಡದ ಸೂಪರ್ ಚಿಟ್ ಚಿತ್ರವಾದ ಉಗ್ರಂ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಚಿತ್ರದಲ್ಲಿ ದಿವಾಕರ್ ಕಾಣಿಸಿಕೊಂಡಿರುವ ದೃಶ್ಯದ ಫೋಟೋ ಕೂಡ ಸೋಷಿಯಲ್ ಸೈಟ್’ಗಳಲ್ಲಿ ತುಂಬಾ ಆಗುತ್ತಿದೆ. ಆದರೆ ಈ ಫೋಟೋ ನಿಜವೋ ಇಲ್ಲಾ ಎಡಿಟ್ ಮಾಡಲಾಗಿದೆಯೋ ಗೊತ್ತಿಲ್ಲಾ. ಒಂದು ವೇಳೆ ನಿಜ ಆಗಿದ್ದರೆ ಸಂತೋಷ..

 

 

ಬಿಗ್ ಬಾಸ್ ಸೀಸನ್ 5 ಗ್ರಾಂಡ್ ಫೈನಲ್ ಅದ್ಧೂರಿಯಾಗಿ ನದೆಡೆಯುತ್ತಿದ್ದು ಮನೆಗೆ ಎಂಟ್ರಿಕೊಟ್ಟಿದ್ದ 18 (2 ವೈಲ್ಡ್ ಕಾರ್ಡ್ ಎಂಟ್ರಿ)ಜನ ಸ್ಪರ್ಧಿಗಳ ಪೈಕಿ ಇನ್ನು ಕೇವಲ ಮೂರು ಜನ ಸದಸ್ಯರಷ್ಟೇ ಬಿಗ್ ಬಾಸ್ ಫಿನಾಲೆಯಲ್ಲಿ ಉಳಿದುಕೊಂಡಿದ್ದು ಬಿಗ್ ಬಾಸ್ ಟ್ರೋಫಿ ಯಾರ ಮಾಡಿಸಿಗೆ ಒಲಿಯುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ. ಕಾಮನ್ ಕೋಟಾದಲ್ಲಿ ಈ ಭಾರಿ ಮನೆಗೆ ಒಟ್ಟು ಆರು ಮಂದಿ ಎಂಟ್ರಿ ಪಡೆದುಕೊಂಡಿದ್ದರು . ಆರು ಜನರ ಪೈಕಿ ದಿವಾಕರ್ ಟಾಪ್ 3ಗೆ ಬಂದು ನಿಂತಿದ್ದು ಗೆಲ್ಲುತ್ತಾರೆಯೇ ಎಂಬುದನ್ನು ಕಾದುನೋಡಬೇಕು!

 

 

ಅಂತಿಮ ಗೆಲುವು ಒಬ್ಬರದ್ದೇ ಆದರೂ, ಉಳಿದಿರುವ ಮೂರು ಜನರ ಮಧ್ಯೆ ಪೈಪೋಟಿ ಜೋರಾಗಿದೆ.. ಅದರಲ್ಲಿ ಚಂದನ್ ಮತ್ತು ಜೆಕೆ ನಡುವೆ ಪ್ರಬಲ ಸ್ಪರ್ಧೆಯಿದೆ ಎಂಬ ಸುದ್ದಿ ಹರಿದಾಡುತ್ತಿದ್ದು ವೀಕ್ಷರಲ್ಲಿ ಚಂದನ್ ಕಡೆಗೆ ಹೆಚ್ಚು ಒಲವನ್ನು ತೋರಿಸುತ್ತಿದ್ದಾರೆ. ಒಟ್ಟಾರೆಯಾಗಿ ತಮ್ಮ ನೆಚ್ಚಿನ ಸ್ಪರ್ಧಿಗಳ ಗೆಲುವಿನ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ಕರ್ನಾಟಕ ಕಾಯುತ್ತಿದ್ದರೆ, ಮತ್ತೊಂದು ಕಡೆ ಗೆಲುವಿನ ಕನಸಿನಲ್ಲಿ ಪ್ರತಿಯೊಬ್ಬ ಸದಸ್ಯರೂ ಇದ್ದಾರೆ. ಬಿಗ್ ಬಾಸ್ ಟ್ರೋಫಿಗೆ ಯಾರು ಮುತ್ತಿಡಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಬೀಳಬೇಕೆಂದರೆ ಇಂದು ಸಂಜೆವರೆಗೂ ಕಾಯಲೇಬೇಕು.

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top