fbpx
ಮನೋರಂಜನೆ

ಧೃವ ಸರ್ಜಾ ನೋವಿನ ದಿನಗಳ ಕಣ್ಣೀರಿನ ಕಥೆಯನ್ನೊಮ್ಮೆ ಓದಿ!

 ಸ್ಟಾರ್ ಕುಟುಂಬದಲ್ಲೇ ಹುಟ್ಟಿದ್ದರೂ ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಧೃವ ಸರ್ಜಾ ಪಟ್ಟಿದ್ದ ನೋವಿನ ದಿನಗಳ ಬಗ್ಗೆ ನೀವು ತಿಳ್ಕೊಳ್ಳೆಬೇಕು?

 

 

ಸದ್ಯದ ಮಟ್ಟಿಗೆ ಸ್ಯಾಂಡಲ್ ವುಡ್ ನಿರ್ಮಾಪಕರ ಪಾಲಿಗೆ ಚಿನ್ನದ ಮೊಟ್ಟೆಯನ್ನು ಇಡುವ ಕೋಳಿಯೆನಿಸಿಕೊಂಡಿರುವ ಆಕ್ಷನ್ ಪಿನ್ಸ್ ತಮ್ಮ ಸ್ವಂತ ಪರಿಶ್ರಮದಿಂದ ಬೆಳೆದುಬಂದವರು. ಚಿತ್ರರಂಗದ ಸ್ಟಾರ್ ಕುಟುಂಬದ ಕುಡಿಯಾಗಿದ್ದರೂ ತಮ್ಮ ಸ್ವಂತ ಪರಿಶ್ರಮದಿಂದ ಬೆಳೆಯಬೇಕು ಎಂಬ ಕನಸನ್ನು ಹೊತ್ತುಕೊಂಡಿದ್ದ ಧೃವ ಸರ್ಜಾ ಸಿನಿಮಾಗಳಲ್ಲಿ ನಟಿಸಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಧೃವ ಸರ್ಜಾ ಅವರ ಆರಂಭಿಕ ದಿನಗಳ ಕಷ್ಟದ ಸಮಯದ ಬಗ್ಗೆ ನಾವು ನಿಮಗೆ ಹೇಳ್ಥಿವಿ ಕೇಳಿ.

 

 

ಚಿತ್ರರಂಗಕ್ಕೆ ತಮ್ಮ ಸ್ವಂತ ಪರಿಶ್ರಮದಿಂದಲೇ ಬರಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದ ಧೃವ ಒಂದು ಕಾಲದಲ್ಲಿ ಸಿಗುತ್ತಿದ್ದ ಸಣ್ಣ ಪುಟ್ಟ ಅವಕಾಶಗಳನ್ನು ಕೈಚೆಲ್ಲುತ್ತಿರಲಿಲ್ಲ. ಕಿರುಚಿತ್ರ, ಮಾಡಲೆಂಗ್, ಸ್ಟೇಜ್ ಷೋ, ಬೀದಿ ನಾಟಕಗಳನ್ನು ಕೂಡ ಮಾಡಿದ್ದಾರೆ. ಇದೆ ವೇಳೆ ಚಂದನ್ ರಚಿಸಿ ಕಂಪೋಸ್ ಮಾಡಿದ್ದ ಮೊದಲ ರ‍್ಯಾಪ್‌ ಸಾಂಗ್ ನಲ್ಲಿ ಧೃವ ಸರ್ಜಾ ನಟಿಸಿದ್ದರು. ಆಗ ಅವರಿಗೆ ಸಂಭಾವನೆ ದಿನಕ್ಕೆ 150 ರೂಪಾಯಿ ಸಂಭಾವನೆ, ಬಹುಷಃ ಈ ವಿಚಾರ ಎಷ್ಟೋ ಜನಕ್ಕೆ ಗೊತ್ತಿರಲಿಕ್ಕಿಲ್ಲ. ಒಂದು ಕಾಲದಲ್ಲಿ ಚಂದನ್ ಶೆಟ್ಟಿಯವರಿಗೆ ಆಶ್ರಯ ನೀಡಿದ್ದೆ ಧೃವ ಅಣ್ಣ ಚಿರು ಸರ್ಜಾ ಹಾಗಂತ ಸ್ವತಃ ಚಂದನ್ ಅವರೇ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಧೃವ ಮತ್ತು ಚಂದನ್ ರ‍್ಯಾಪ್‌ ಸಾಂಗಿನ ಒಂದು ಝಲಕ್ ಇಲ್ಲಿದೆ ನೋಡಿ.

 

 

ಇನ್ನು ದ್ರುವ ವಿಚಾರಕ್ಕೆ ಬಂದರೆ ಅವರ ತಾತ ದಿಗ್ಗಜ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದರು, ಮಾವ ಸೌತ್ ಇಂಡಿಯಾ ಸಿನಿ ದುನಿಯಾದಲ್ಲೇ ಸ್ಟಾರ್ ನಟನಾಗಿ ಮೆರೆದಿದ್ದರು ಅಷ್ಟಾಗ್ಯೂ ಚಿತ್ರರಂಗಕ್ಕೆ ತನ್ನ ಸ್ವತಃ ಪರಿಶ್ರಮದಿನ ಬರಬೇಕು ಎಂಬ ಆಸೆಯನ್ನು ಹೊಂದಿದ್ದರು. ನಟ ಆಗಬೇಕು ಅಂತ ಕನಸನ್ನು ಕಟ್ಟುಕೊಂಡಿದ್ದ ದ್ರುವ ಅವರು ಸರ್ಜಾ ಕುಟುಂಬದ ಕುಡಿಯಾಗಿದ್ದರೂ ಚಿತ್ರರಂಗ ಇವರಿಗೇನು ಕರೆದು ಅವಕಾಶ ಕೊಟ್ಟಿರಲಿಲ್ಲ. ಫೋಟೋ ಶೂಟ್ ಮಾಡಿಸೋಕೂ ಹಣವಿಲ್ಲದ ದ್ರುವ ಸ್ನೇಹಿತನಿಂದ ಸಾಲಪಡೆದು ಅದನ್ನು ತೀರಿಸೋಕೆ ಆಗದೆ ಬೀದಿ ನಾಟಕಗಳನ್ನ ಮಾಡಿ ಸಾಲ ತೀರಿಸಿದ್ರು.

ಚಿತ್ರರಂಗಕ್ಕೆ ಬರುವ ಮುಂಚೆ ಬಾಕ್ಸರ್ ಆಗಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದ ಧೃವ ಕಾರಣಾಂತರಗಳಿಂದ ತಮ್ಮ ಮೂಗಿನ ಮೂಳೆಯನ್ನು ತೆಗೆಸಿದ್ದರು. ಆದರೆ ಕೆಲವು ದಿನಗಳ ನಂತರ ಅವರಿಗೆ ಸಿನಿಮಾದಲ್ಲಿ ನಟಿಸುವ ತುಡಿತ ಹೆಚ್ಚಾಗಿತ್ತು ಆಗ ಅವರು ಕೆಲವು ನಿರ್ಮಾಪಕರ ಬಳಿ ಹೋಗಿ ಅವಕಾಶವನ್ನು ಕೇಳಿದ್ದರಂತೆ, ಆ ವೇಳೆ ಧೃವ ಅವರ ಮೂಗನ್ನು ನೋಡಿ ಕೀಟಲೆ ಮಾಡಿದ್ದ ನಿರ್ಮಾಪಕರು ಧ್ರುವರನ್ನು ಅವಮಾನ ಮಾಡಿ ಕಳುಹಿಸಿದ್ದರಂತೆ. ಒಂದು ಕಾಲದಲ್ಲಿ ಧೃವ ಅವರಿಗೆ ಅವಕಾಶ ಕೊಡದೆ ಅವಮಾನಿಸುತ್ತಿದ್ದ ನಿರ್ಮಾಪಕರೇ ಇಂದು ಧೃವ ಹಿಂದೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

 

 

ಧೃವ ಸರ್ಜಾ ನಟನೆಯ ಮೊದಲ ಸಿನಿಮಾ ಅದ್ಧೂರಿ. ಸಿನಿಮಾ ಸೆಟ್ಟಿರಿದರೂ ಆರಂಭಿನಂದಲೇ ಸಾಕಷ್ಟು ವಿಘ್ನಗಳು ಎದುರಾಗಿದ್ದವು. ಮುಹೂರ್ತದ ದಿನವೇ ಲೈಟ್ ಶೀಟ್’ಗೆ ಬೆಂಕಿ ಬಿತ್ತು ಅನ್ನೋ ಕಾರಣಕ್ಕೆ ನಿರ್ಮಾಪಕರು ಸಿನಿಮಾ ಮಾಡುವುದಿಲ್ಲ ಎಂದು ಹಿಂದೆ ಸರಿದಿದ್ದರು. ಬೆಳಿಗ್ಗೆ ಆಗಿದ್ದ ಮುಹೂರ್ತ ಸಂಜೆಯೊಳಗೆ ಕ್ಯಾನ್ಸಲ್ ಆಗಿತ್ತು. ಒಬ್ಬರು ಬೆಂಕಿ ಬಿತ್ತು ಅಂತ ಸಿನಿಮಾ ನಿಲ್ಲಿಸಿದರೆ ಕೆಲವರಿಗೆ ಧೃವ ಸರ್ಜಾ ಮೇಲೆ ನಂಬಿಕೆ ಇರಲಿಲ್ಲ. ಹೀಗೆ ಒಟ್ಟು ಐದು ಮಂದಿ ನಿರ್ಮಾಪಕರು ಚೊಚ್ಚಲ ಚಿತ್ರದಲ್ಲೇ ಬದಲಾಗಿದ್ದರು.

ಅಷ್ಟಕ್ಕೂ ಧೃವ ನಿರ್ದೇಶಕ ಎಪಿ ಅರ್ಜುನ್ ಕಣ್ಣಿಗೆ ಬಿದ್ದಿದ್ದೆ ಒಂದು ಇಂಟೆಸ್ರೆಸ್ಟಿಂಗ್ ಸ್ಟೋರಿ.ಅಲ್ಲಲ್ಲಿ ಬೀದಿ ನಾಟಕಗಳಲ್ಲಿ ಧೃವ ನಟಿಸುತ್ತಿದ್ದರು. ಆಗ ಸ್ನೇಹಿತ ಚೇತನ್ ರೊಂದಿಗೆ ಎಪಿ.ಅರ್ಜುನ್ ಅವರ ಚಿತ್ರಕ್ಕೆ ಹೊಸ ಹುಡುಗನನ್ನು ಹುಡುಕಲು ಹೋಗಿದ್ದರು ಆಗ ಧೃವ ಸರ್ಜಾ ಮಾಡಿದ್ದ ‘ಊರುಭಂಗ’ ನಾಟಕದಲ್ಲಿನ ಧೃವ ಅಭಿನಯ ನೋಡಿ ಕ್ಲೀನ್ ಬೋಲ್ಡ್ ಆದ ಅರ್ಜುನ್ ಧೃವ ಬಳಿ ನೇರವಾಗಿ ಹೀರೋ ಆಗುವಂತೆ ಕೇಳಿಕೊಂಡಿದ್ದರಂತೆ.

 

 

ಮೊದಲ ಚಿತ್ರಕ್ಕೆ ಅವಕಾಶ ಸಿಕ್ಕಾಗ ತಾನು ಅರ್ಜುನ್ ಸರ್ಜಾ ತಂಗಿ ಮಗ ಎಂದು ಹೇಳಿಕೊಂಡಿರಲೇ ಇಲ್ಲ. ಇನ್ನೇನು ಕಥೆ ಓಕೆ ಆದ್ಮೇಲೆ ಸಿನಿಮಾ ಸೆಟ್ಟೋರೋಕೆ ಮೂರು ದಿನ ಇರುವಾಗಲೇ ಎಪಿ ಅರ್ಜುನ್ ಗೆ ಅರ್ಜುನ್ ಸರ್ಜರನ್ನ ಭೇಟಿ ಮಾಡಿಸಿ ಈ ವಿಷಯವನ್ನು ಬಹಿರಂಗಪಡಿಸಿದ್ದರು.

ದ್ರುವ ಸರ್ಜಾ ದುರಾಧೃಷ್ಟವೆಂದರೆ ಅವರ ಮೂರು ಚಿತ್ರಗಳೂ ಕೂಡ ಯಾವುದಾದರೂ ಒಂದು ಕಾರಣಕ್ಕೆ ತಡವಾಗುತ್ತಿತ್ತು ಅದ್ಧೂರಿ, ಬಹದ್ದೂರ್, ಭರ್ಜರಿ ಚಿತ್ರಗಳು ಕಾರಣಾಂತರಗಳಿಂದ ತಡವಾಗುತ್ತಿತ್ತು. ಆದರೂ ಇಂದು ಅವರ ಡೆಡಿಕೇಷನ್ ಮತ್ತು ಹಾರ್ಡ್ ವರ್ಕ್ ನಿಂದ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಬೆಳೆಸಿಕೊಂಡಿದ್ದಾರೆ. ದ್ರುವ ಕೇವಲ ಆಕ್ಟಿಂಗ್, ಡ್ಯಾನ್ಸ್ ನಲ್ಲಿ ಮಾತ್ರ ಹೆಸರು ಮಾಡಿಲ್ಲ ಅವರ ಒಂದೊಂದು ಡೈಲಾಗ್ ಗಳು ಕೂಡ ಅಷ್ಟೇ ಫೇಮಸ್ ಆಗಿವೆ. ಸ್ಟಾರ್ ನಟನಾಗಿ ಬೆಳೆದಿದ್ದರು ಸ್ವಲ್ಪವೂ ಅಹಂ ಇಲ್ಲದ ಧೃವ ಅಭಿಮಾನಿಗಳ ಪಾಲಿನ ಆರಾಧ್ಯ ದೈವವಾಗಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top