ಕಿರುತೆರೆ

ಯಾರು ಹಿತವರು ಈ ಮೂವರೊಳಗೆ? ಈ ಬಾರಿಯ ಬಿಗ್ ಬಾಸ್ ಟ್ರೋಫಿ ಸೆಲೆಬ್ರಿಟಿಗೋ? ಕಾಮನ್ ಮ್ಯಾನ್ ಗೋ?

ಯಾರು ಹಿತವರು ಈ ಮೂವರೊಳಗೆ? ಈ ಬಾರಿಯ ಬಿಗ್ ಬಾಸ್ ಟ್ರೋಫಿ ಸೆಲೆಬ್ರಿಟಿಗೋ? ಕಾಮನ್ ಮ್ಯಾನ್ ಗೋ?

 

 

ಬಿಗ್ ಬಾಸ್ ಸೀಸನ್ 5 ಗ್ರಾಂಡ್ ಫೈನಲ್ ಅದ್ಧೂರಿಯಾಗಿ ನದೆಡೆಯುತ್ತಿದ್ದು ಮನೆಗೆ ಎಂಟ್ರಿಕೊಟ್ಟಿದ್ದ 18 (2 ವೈಲ್ಡ್ ಕಾರ್ಡ್ ಎಂಟ್ರಿ)ಜನ ಸ್ಪರ್ಧಿಗಳ ಪೈಕಿ ಇನ್ನು ಕೇವಲ ಮೂರು ಜನ ಸದಸ್ಯರಷ್ಟೇ ಬಿಗ್ ಬಾಸ್ ಫಿನಾಲೆಯಲ್ಲಿ ಉಳಿದುಕೊಂಡಿದ್ದು ಬಿಗ್ ಬಾಸ್ ಟ್ರೋಫಿ ಯಾರ ಮಾಡಿಸಿಗೆ ಒಲಿಯುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ. ಫೈನಲ್ಗೆ ಎಂಟ್ರಿ ಕೊಟ್ಟಿದ್ದ ಜಯರಾಂ ಕಾರ್ತಿಕ್, ಚಂದನ್ ಶೆಟ್ಟಿ, ದಿವಾಕರ್, ಶ್ರುತಿ ಪ್ರಕಾಶ್ ಮತ್ತು ನಿವೇದಿತಾ ಗೌಡ ಒಳಗೊಂಡ ಐದು ಜನರ ಪೈಕಿ ಈಗಾಗಾಗಲೇ ಶ್ರುತಿ, ಮತ್ತು ನಿವೇದಿತಾ ಸ್ಪರ್ಧೆಯಿಂದ ಔಟ್ ಆಗಿದ್ದಾರೆ.

 


ಯಾರಿಗೆ ಗೆಲವು ಸಿಕ್ಕಿದೆ ಎಂದು ಇನ್ನೂ ಎಲ್ಲೂ ಕೂಡ ಸ್ಪಷ್ಟವಾಗಿಲ್ಲ. 105ನೇ ದಿನವೇ ವಿಜಯಿ ಹೆಸರು ಘೋಷಿಸಬಹುದೆಂಬ ನಿರೀಕ್ಷೆಯಲ್ಲಿದ್ದ ಕಡೆಯ ಮೂವರು ಸ್ಪರ್ಧಿಗಳಿಗೆ ಆಶ್ಚರ್ಯ ಎಂಬಂತೆ ಮತ್ತೊಂದು ದಿನ ಬಿಗ್ ಬಾಸ್ ಮನೆಯಲ್ಲಿಯೇ ಕಾಲ ಕಳೆಯುವ ಅವಕಾಶ ಸಿಕ್ಕಿದೆ. ಜಯರಾಂ ಕಾರ್ತಿಕ್, ದಿವಾಕರ್ ಹಾಗೂ ಚಂದನ್ ಶೆಟ್ಟಿ ಮದ್ಯೆ ಗೆಲುವ ಯಾರಿಗೆ ದಾಕಲಿದೆ ಎಂಬ ಲೆಕ್ಕಾಚಾರಗಳು ಶುರುವಾಗಿವೆ. ತಮ್ಮ ಹಾಡಿನ ಮೂಲಕ ಚಂದನ್ ಜನರನ್ನು ರಂಜಿಸಿದ್ದರೆ, ಕಾಮಿಡಿ ಮೂಲಕ ದಿವಾಕರ್ ಮತ್ತು ತಮ್ಮ ಆಟಿಟ್ಯೂಡ್ ಮೂಲಕವೇ ತಮ್ಮ ಅಭಿಮಾನಿಗಳೇ ಎಂಟರ್ಟೈನ್ ಮಾಡಿದ್ದಾರೆ.

ವಿಶೇಷವೆಂದರೆ ಪ್ರತಿ ಬಾರಿ ಕೇವಲ ಸೆಲೆಬ್ರೆಟಿಗಳಿಗೆ ಮಾತ್ರ ಪ್ರವೇಶವಿರುತ್ತಿದ್ದ ಬಿಗ್ ಬಾಸ್ ಮನೆಗೆ ಈ ಭಾರಿ ಸಾಮಾನ್ಯ ವ್ಯಕ್ತಿಗಳಿಗೂ ಅವಕಾಶ ಕಲ್ಪಿಸಲಾಗಿತ್ತು. ಕಾಮನ್ ಕೋಟಾದಲ್ಲಿ ಈ ಭಾರಿ ಮನೆಗೆ ಒಟ್ಟು ಆರು ಮಂದಿ ಎಂಟ್ರಿ ಪಡೆದುಕೊಂಡಿದ್ದರು . ಆರು ಜನರ ಪೈಕಿ ದಿವಾಕರ್ ಟಾಪ್ 3ಗೆ ಬಂದು ನಿಂತಿದ್ದು ಗೆಲ್ಲುತ್ತಾರೆಯೇ ಎಂಬುದನ್ನು ಕಾದುನೋಡಬೇಕು!

 

 

ಅಂತಿಮ ಗೆಲುವು ಒಬ್ಬರದ್ದೇ ಆದರೂ, ಉಳಿದಿರುವ ಮೂರು ಜನರ ಮಧ್ಯೆ ಪೈಪೋಟಿ ಜೋರಾಗಿದೆ.. ಅದರಲ್ಲಿ ಚಂದನ್ ಮತ್ತು ಜೆಕೆ ನಡುವೆ ಪ್ರಬಲ ಸ್ಪರ್ಧೆಯಿದೆ ಎಂಬ ಸುದ್ದಿ ಹರಿದಾಡುತ್ತಿದ್ದು ವೀಕ್ಷರಲ್ಲಿ ಚಂದನ್ ಕಡೆಗೆ ಹೆಚ್ಚು ಒಲವನ್ನು ತೋರಿಸುತ್ತಿದ್ದಾರೆ. ಒಟ್ಟಾರೆಯಾಗಿ ತಮ್ಮ ನೆಚ್ಚಿನ ಸ್ಪರ್ಧಿಗಳ ಗೆಲುವಿನ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ಕರ್ನಾಟಕ ಕಾಯುತ್ತಿದ್ದರೆ, ಮತ್ತೊಂದು ಕಡೆ ಗೆಲುವಿನ ಕನಸಿನಲ್ಲಿ ಪ್ರತಿಯೊಬ್ಬ ಸದಸ್ಯರೂ ಇದ್ದಾರೆ. ಬಿಗ್ ಬಾಸ್ ಟ್ರೋಫಿಗೆ ಯಾರು ಮುತ್ತಿಡಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಬೀಳಬೇಕೆಂದರೆ ಇಂದು ಸಂಜೆವರೆಗೂ ಕಾಯಲೇಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top