ಜ್ಯೋತಿಷ್ಯ

ಜನವರಿ 31 ನೇ ತಾರೀಖಿನ ಖಂಡಗ್ರಾಸ, ಪೂರ್ಣ ಚಂದ್ರ ಗ್ರಹಣ ಈ 4 ರಾಶಿಗಳಿಗೆ ಶುಭ ಫಲ ನೀಡುತ್ತೆ ,ಅವು ಯಾವುವು ಮುಂದೆ ಓದಿ

ಜನವರಿ 31 ನೇ ತಾರೀಖಿನ ಖಂಡಗ್ರಾಸ, ಪೂರ್ಣ ಚಂದ್ರ ಗ್ರಹಣ ಯಾವ ರಾಶಿಗಳಿಗೆ ಶುಭ ಫಲ, ಅಶುಭ ಫಲ ಹಾಗು ಮಿಶ್ರ ಫಲ ನೀಡುತ್ತವೆ ತಿಳ್ಕೊಳ್ಳಿ

ಈ ಎಂಟು ರಾಶಿಯವರ ಬದುಕಂತೂ ಆಗಲಿದೆಯಂತೆ ಹರೋಹರ, ಪೂರ್ಣ ಚಂದ್ರಗ್ರಹಣ ಹೊತ್ತು ತರಲಿದೆ ಸಾಲು ಸಾಲು ಕಂಟಕ, ಹೆಜ್ಜೆ ಹೆಜ್ಜೆಗೂ ಕಾಡಿದೆಯಂತೆ ಖಂಡಗ್ರಾಸ ಚಂದ್ರಗ್ರಹಣದ ಭಯ. ಇದು ಭಯಂಕರ ಎನ್ನುತ್ತಾರೆ. ಜನವರಿ 31 ನೇ ತಾರೀಖಿನಂದು ಖಂಡಗ್ರಾಸ ಚಂದ್ರ ಗ್ರಹಣ ಮತ್ತು ಪೂರ್ಣ ಚಂದ್ರಗ್ರಹಣ ಹೂತ್ತು ತರುತ್ತಿದೆ ಕೆಟ್ಟ ಶಕುನ. ಜನರಿಗೆ ಶುರುವಾಗಿದೆ ನಡುಕ, ಜನವರಿ 31ನೇ ತಾರೀಖಿನಂದು ಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ . ಅದು ವರ್ಷದ ಮೊದಲ ಗ್ರಹಣವಾಗಿದ್ದು, ಜನರಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತದೆ, ಹಾಗೆ ಪ್ರಕೃತಿಯಲ್ಲಿನ ಮಡಿಲಲ್ಲೂ ಕೂಡ ಅನೇಕ ಬದಲಾವಣೆಗಳು ವಿಸ್ಮಯಗಳು ನಡೆಯುತ್ತದೆ.
ಶುಭ ಫಲವನ್ನು ಹೊಂದುವ ರಾಶಿಗಳು ವೃಷಭ ರಾಶಿ, ತುಲಾ ರಾಶಿ ,ಕುಂಭ ರಾಶಿ ಕನ್ಯಾ ರಾಶಿ .

 

 

ಅಶುಭ ಫಲವನ್ನು ಹೊಂದುವ ರಾಶಿಗಳು ಮೇಷ ರಾಶಿ, ಸಿಂಹ ರಾಶಿ, ಕಟಕ ರಾಶಿ ಮತ್ತು ಧನಸ್ಸು ರಾಶಿ.
ಮಿಶ್ರ ಫಲವನ್ನು ಹೊಂದುವ ರಾಶಿಗಳು ಮೀನ ರಾಶಿ, ಮಿಥುನ ರಾಶಿ, ಮಕರ ರಾಶಿ ಮತ್ತು ವೃಶ್ಚಿಕ ರಾಶಿ.

ಅಶುಭ ಫಲ ರಾಶಿಗಳು.
ಮೇಷ ರಾಶಿ.
ಮೇಷ ರಾಶಿಯವರಿಗೆ ಕಾದಿದೆ ಹೆಜ್ಜೆ ಹೆಜ್ಜೆಗೂ ಆಪತ್ತು.ಮೇಷ ರಾಶಿಯವರು ತಾವೇ ಖುದ್ದು ಸಮಸ್ಯೆಗಳನ್ನು ಹುಡುಕಿಕೊಂಡು ಹೋಗುತ್ತಾರಂತೆ. ತಾವೇ ಹುಟ್ಟು ಹಾಕಿಕೊಂಡ ಸಮಸ್ಯೆಯಲ್ಲಿಯೇ ತಾವೇ ಬಿದ್ದು ಬಿಡುತ್ತಾರೆ. ಹಾಗಾಗಿ ಯಾವುದೇ ಹೊಸ ಸಾಹಸಗಳಿಗೆ ಕೈ ಹಾಕಿದಂತೆ ಸಲಹೆ ನೀಡುತ್ತದೆ ಜ್ಯೋತಿಷ್ಯ.

ಸಿಂಹ ರಾಶಿ .
ಸಿಂಹ ರಾಶಿಯವರಿಗೆ ಹಣಕಾಸಿನ ವಿಚಾರವಾಗಿ ಎಷ್ಟು ಹುಷಾರಾಗಿ ಇರುತ್ತೀರೋ, ಅಷ್ಟು ಒಳ್ಳೆಯದು. ಯಾಕೆಂದರೆ ಈ ಚಂದ್ರ ಗ್ರಹಣ ಸಿಂಹ ರಾಶಿಯವರಿಗೆ ದಿಢೀರ್ ಅಂತ ನಷ್ಟ ತಂದುಕೊಡಲಿದೆಯಂತೆ. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಕಾಗದ ಪತ್ರವಿರಲಿ, ಎರಡೆರಡು ಬಾರಿ ಕಣ್ಣಾಡಿಸಿ ಸಹಿ ಹಾಕಿದರೆ ಒಳ್ಳೆಯದಂತೆ ಇಲ್ಲಿ ಮತ್ತೊಬ್ಬರನ್ನು ನಂಬಿ ಮೋಸಹೋಗುವ ಸಾಧ್ಯತೆ ಹೆಚ್ಚಿರುವುದರಿಂದ ಬಹಳ ಎಚ್ಚರದಿಂದ ವ್ಯವಹರಿಸುವಂತೆ ಸಲಹೆ ನೀಡಲಾಗಿದೆ.

 

ಕಟಕ ರಾಶಿ.
ಕಟಕ ರಾಶಿಯವರು ಕೂಡ ಬಹಳ ಎಚ್ಚರಿಕೆಯಿಂದ ಇರಬೇಕಂತೆ. ಯಾಕೆಂದರೆ ಒಮ್ಮೆಲೆ ಎದುರಾಗುವ ಸಮಸ್ಯೆಗಳಲ್ಲಿ ನಿಮಗೇ ಗೊತ್ತಾಗದಂತೆ ಸಿಲುಕಿ ಬಿಡುವ ಸಂಭವ ಇದೆ. ಏನಾಗುತ್ತಿದೆ ?ಯಾಕೆ ? ಹೀಗೆ ಆಗುತ್ತಿದೆ ? ಎನ್ನುವ ಅರಿವು ಕೂಡ ಇವರಿಗೆ ಆಗುವುದಿಲ್ಲವಂತೆ. ನಿಮಗೆ ಸತ್ಯ ಮತ್ತು ವಾಸ್ತವಾಂಶ ಗೊತ್ತಾಗುವಷ್ಟರಲ್ಲಿ ತಲೆಯೇ ಹಾರಿ ಹೋಗುವ ಅಪಾಯ ಕಾದಿದೆಯಂತೆ. ಹಾಗಾಗಿ ಬೇಡದ ರಾಜಕೀಯ ಮತ್ತು ಮತ್ತೊಬ್ಬರ ಉಸಾಬರಿಯನ್ನು ತಮ್ಮ ಮೈಮೇಲೆ ತಂದುಕೊಳ್ಳದೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಧನಸ್ಸು ರಾಶಿ.
ಇವರು ಕೂಡ ಬಹಳ ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡಬೇಕಾಗಿದೆ. ಈ ಗ್ರಹಣ ಧನಸ್ಸು ರಾಶಿಯವರಿಗೆ ಭಾರೀ ಕೆಡುಕನ್ನು ಉಂಟು ಮಾಡಲಿದೆಯಂತೆ ದೂರ ಪ್ರಯಾಣ ಬೇಡವೇ ಬೇಡ ಎಂದು ಹೇಳುತ್ತದೆ ಜ್ಯೋತಿಷ್ಯ. ಮನೆಯಲ್ಲಿ ಕೂಡ ವಿದ್ಯುತ್ ವಸ್ತುಗಳು ಮತ್ತು ಗ್ಯಾಸ್ ಸ್ಟವ್ ಮತ್ತಿತರ ಶಾಖದ ವಸ್ತುಗಳ ಬಗ್ಗೆ ಜಾಗರೂಕತೆಯನ್ನು ವಹಿಸಿ. ಯಾವುದೇ ಅಪಾಯಕ್ಕಾಗಿ ನೀವಾಗಿಯೇ ಕೈ ಹಾಕದಿರುವುದು ಉತ್ತಮ.
ಮಿಶ್ರಫಲದ ರಾಶಿಗಳು ಕೂಡ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಮಕರ ರಾಶಿ, ಮೀನ ರಾಶಿ ,ಮಿಥುನ ರಾಶಿ ಹಾಗೂ ವೃಶ್ಚಿಕ ರಾಶಿ .ಇವರಿಗೆ ಹೇಳಿಕೊಳ್ಳುವಂತಹ ಅಪಾಯವೇನೂ ಇಲ್ಲ ಆದರೂ ಈ ಗ್ರಹಣ ಸ್ವಲ್ಪ ಯಾಮಾರಿದರೂ ಸಹ ಬದುಕನ್ನೇ ಹಾಳು ಮಾಡುತ್ತದೆ.

 

 

ಮೀನ ರಾಶಿ.
ಮೀನ ರಾಶಿಯವರಿಗೆ ಈ ಬಾರಿಯ ಗ್ರಹಣ ಹೇಳಿಕೊಳ್ಳುವಂತಹ ಶುಭವೇನು ಅಲ್ಲ ಎನ್ನಲಾಗುತ್ತಿದೆ. ಈ ರಾಶಿಯವರಿಗೆ ಆಗುವ ಮುಖ್ಯ ಸಮಸ್ಯೆ ಎಂದರೆ ಮಾನಸಿಕ ಒತ್ತಡ. ಅದರಲ್ಲೂ ನಾನಾ ಬಗೆಯ ಸಮಸ್ಯೆ ಮತ್ತು ಸವಾಲುಗಳು ಎದುರಾಗಲಿದೆಯಂತೆ. ಹಾಗಾಗಿ ಎಷ್ಟೇ ಜೋಪಾನದಿಂದ ಇದ್ದರೂ ಸಹ ಸಾಕಾಗಲ್ಲ.

ಮಿಥುನ ರಾಶಿ.
ಮಿಥುನ ರಾಶಿಯವರಿಗೆ ಈ ಬಾರಿಯ ಖಂಡಗ್ರಾಸ ಚಂದ್ರಗ್ರಹಣ ಫಲಿತಾಂಶ ಚೆನ್ನಾಗಿಲ್ಲ. ಭಾರಿ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಸಾಲ ಕೊಡುವ ಉಸಾಬರಿಗೆ ಹೋಗಬೇಡಿ, ಸಾಲ ಕೊಟ್ಟು ಸಾವು ತಂದು ಕೊಳ್ಳುವುದಕ್ಕಿಂತ ಯಾರೊಂದಿಗೂ ಹಣಕಾಸಿನ ವ್ಯವಹಾರ ಮಾಡದೇ ಇರುವುದು ಒಳ್ಳೆಯದು. ಅದೇ ರೀತಿ ಹಣವನ್ನು ಹೂಡಿಕೆ ಮಾಡುವ ವಿಚಾರಕ್ಕೂ ಕೈ ಹಾಕದೇ ಇರುವುದು ಒಳ್ಳೆಯದು.

ಮಕರ ರಾಶಿ.
ಮಕರ ರಾಶಿಯವರಿಗೆ ಏಳನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿದೆ. ಆದ್ದರಿಂದ ಅದು ಕಳತ್ರ ಸ್ಥಾನ ಆಗಿರುವುದರಿಂದ ಬಾಳ ಸಂಗಾತಿಯೊಂದಿಗೆ ಯಾವುದೇ ರೀತಿಯ ಜಗಳ ಮಾಡಿಕೊಳ್ಳದೇ ಇರುವುದು ಒಳ್ಳೆಯದು. ಸಂಗಾತಿಯನ್ನು ತೃಪ್ತಿಪಡಿಸಿದರೆ ಸಾಕು ಯಾವುದೇ ರೀತಿಯ ಬಿಕ್ಕಟ್ಟು ಎದುರಾಗುವುದಿಲ್ಲವಂತೆ. ಆದ್ದರಿಂದ ಆದಷ್ಟು ಮನೆಯಲ್ಲಿ ಅದರಲ್ಲೂ ಸಂಗಾತಿಯೊಂದಿಗೆ ನೆಮ್ಮದಿಯನ್ನು ಕಾಪಾಡಿ ಕೊಂಡರಷ್ಟೇ ಸಾಕು.

ವೃಶ್ಚಿಕ ರಾಶಿ .
ವೃಶ್ಚಿಕ ರಾಶಿಯವರಿಗೆ ಈ ಪೂರ್ಣ ಚಂದ್ರಗ್ರಹಣ ವರ್ಚಸ್ಸು ಮತ್ತು ಗೌರವಕ್ಕೆ ಧಕ್ಕೆ ತರಲಿದೆಯಂತೆ. ಯಾಕೆಂದರೆ ಈ ಗ್ರಹಣ ನಷ್ಟ ಮತ್ತು ಅವಮಾನಗಳನ್ನು ಸೂಚಿಸುತ್ತದೆ. ಆದ್ದರಿಂದ ದುಷ್ಟ ಆಲೋಚನೆಯನ್ನು ಹೊಂದಿರುವ ಜನರಿಂದ ದೂರವಿರುವುದು ಒಳ್ಳೆಯದು. ಶತ್ರುಗಳಿಂದ ದೂರ ಇದ್ದು ದುಗುಡಗಳನ್ನು ದೂರ ಮಾಡಿಕೊಂಡರೆ ಯಾವುದೇ ಕೆಡುಕು ಇಲ್ಲವೆಂದು ಹೇಳಲಾಗುತ್ತಿದೆ.

 

 

ಶುಭ ಫಲದ ರಾಶಿಗಳು.
ವೃಷಭ ರಾಶಿ, ಕನ್ಯಾ ರಾಶಿ, ಕುಂಭ ರಾಶಿ ಮತ್ತು ತುಲಾ ರಾಶಿ .

ವೃಷಭ ರಾಶಿ.
ವೃಷಭ ರಾಶಿಯವರಿಗೆ ಈ ಗ್ರಹಣದಿಂದ ಶುಭ ಫಲ ಇದೆ. ಈ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಅನುಕೂಲತೆಗಳು ಗೋಚರಿಸುತ್ತವೆ. ಅದು ಕೂಡ ನಿಮ್ಮ ಎಂದಿನ ಆದಾಯ ಮೂಲವಲ್ಲದ ಅಚ್ಚರಿಯ ಧನಾಗಮನ ಆಗಬಹುದು. ಇದು ಹೊಸದಾದ ಆದಾಯ ಮೂಲದಿಂದ ಸಿಗುವ ಧನಲಾಭ ಎನ್ನುತ್ತದೆ ಜ್ಯೋತಿಷ್ಯ.

ಕನ್ಯಾ ರಾಶಿ.
ಕನ್ಯಾ ರಾಶಿಯವರಿಗೆ ಧನ ಲಾಭ ಆಗುವ ಸಾಧ್ಯತೆ ಹೆಚ್ಚು. ಹಣ ತರುವ ಅವಕಾಶಗಳು ಬಂದಾಗ ನೀವಾಗಿಯೇ ಅದನ್ನು ನಿರಾಕರಿಸಬೇಡಿ. ಪ್ರತಿಭೆಗೆ ತಕ್ಕಂತೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಇದೇ ಪೂರ್ಣ ಚಂದ್ರ ಗ್ರಹಣದ ಪ್ರಭಾವ ಅಂತ ಹೇಳಲಾಗುತ್ತಿದೆ.

ತುಲಾ ರಾಶಿ.
ತುಲಾ ರಾಶಿಯವರಿಗೆ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಲಿದೆ. ಸಮಸ್ಯೆಗಳಿಗೆ ಸ್ನೇಹಿತರು ಮತ್ತು ಸಹೋದ್ಯೋಗಿಗಳ ಹಾಗೂ ಬಂಧು, ಮಿತ್ರರ ಸಹಕಾರ ದೊರೆಯಲಿದೆ. ಇದು ಗ್ರಹಣವು ನಿಮ್ಮ ರಾಶಿಯ ಮೇಲೆ ಬೀರುವಂತಹ ಪರಿಣಾಮದ ಫಲಿತಾಂಶ ಎಂದು ಹೇಳಲಾಗುತ್ತಿದೆ .

 

 

ಕುಂಭ ರಾಶಿ.
ಕುಂಭ ರಾಶಿಯವರಿಗೆ ಪೂರ್ಣ ಚಂದ್ರಗ್ರಹಣ ಸಂತೋಷದ ಫಲಿತಾಂಶವನ್ನು ನೀಡಲಿದೆಯಂತೆ . ಸಂಬಂಧಗಳು ವೃದ್ಧಿಯಾಗಿ ಗೌರವ, ಮನ್ನಣೆಗಳು ಹೆಚ್ಚಾಗಲಿವೆಯ೦ತೆ.ಸಾಮಾಜಿಕ ಬದುಕಿನಲ್ಲಿ ಉನ್ನತ ಸ್ಥಾನಕ್ಕೆ ಏರುತ್ತೀರಿ. ಇಷ್ಟು ಕಾಲ ನಿಮ್ಮಲ್ಲಿ ಅಡಗಿದ್ದ ಪ್ರತಿಭೆಗೆ ಇತರರು ಮನ್ನಣೆ ನೀಡುತ್ತಾರೆ. ಒಟ್ಟಾಗಿ ಕುಂಭ ರಾಶಿಯವರಿಗೆ ಶುಭ ಫಲದ ಪರಿಣಾಮ ಬೀರುತ್ತದೆ ಎನ್ನುತ್ತದೆ ಜ್ಯೋತಿಷ್ಯ.

ಜನವರಿ 31 ತಾರೀಖಿನಂದು ಸಂಜೆ 5:17 ನಿಮಿಷಕ್ಕೆ ಗ್ರಹಣ ಸ್ಪರ್ಶವಾಗುವುದು, ನಿಮಿಷಕ್ಕೆ, ಮಧ್ಯಕಾಲ ರಾತ್ರಿ 7:19 ನಿಮಿಷಕ್ಕೆ, ಗ್ರಹಣ ಮೋಕ್ಷ ಕಾಲ ರಾತ್ರಿ 8:41 ನಿಮಿಷಕ್ಕೆ.
ಪರಿಹಾರ ಮತ್ತು ಕೆಲವು ಸೂಚನೆಗಳ .

 

 

• ಗ್ರಹಣದ ಆರಂಭ ಹಾಗೂ ಗ್ರಹಣ ಬಿಟ್ಟ ನಂತರ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.
• ಗ್ರಹಣ ದೋಷ ಇರುವವರು ಚಂದ್ರ ಬಿಂಬ ಹಾಗೂ ಅಕ್ಕಿಯನ್ನು ದಾನ ಮಾಡಬೇಕು.
• ಗ್ರಹಣದ ಸಮಯದಲ್ಲಿ ಊಟ ಮಾಡಬಾರದು.

• ಗ್ರಹಣ ಸ್ಪರ್ಶ ಸಮಯದಲ್ಲಿ ಮಾಡುವ ಸ್ನಾನ ಲಕ್ಷ ಸ್ನಾನಗಳ ಫಲ ನೀಡುತ್ತದೆ.
• ಗ್ರಹಣ ಮೋಕ್ಷದ ನಂತರ ಮಾಡುವ ಸ್ನಾನವು ಅನಂತ ಸ್ನಾನದ ಫಲ ಕೊಡುತ್ತದೆ.
• ಗ್ರಹಣ ಮಧ್ಯದಲ್ಲಿ ಮಾಡುವ ಹೋಮವು ಕೋಟಿ ಹೋಮಗಳ ಫಲವನ್ನು ನೀಡುತ್ತದೆ.

• ರಾಶಿಗಳ ಮೇಲೆ ಗ್ರಹಣದ ಪ್ರಭಾವ ಮತ್ತು ಶುಭ ,ಅಶುಭ ಫಲಿತಾಂಶ ಗ್ರಹಣದ ದಿನವೇ ತುಂಬಾ ಹೆಚ್ಚಾಗಿ ಇರುತ್ತದೆ. ಆದರೆ ಗ್ರಹಣದ ಪರಿಣಾಮ ಹದಿನೈದು ದಿನಗಳ ಮುಂಚೆಯೇ ಕಾಣಿಸಿಕೊಳ್ಳಲಿದೆಯಂತೆ. ಅಂದರೆ ಸಂಕ್ರಾಂತಿ ಹಬ್ಬದ ನಂತರ ನಿಮ್ಮ ರಾಶಿಗೆ ಅನುಗುಣವಾಗಿ ಈ ರೀತಿಯ ಶುಭ ಮತ್ತು ಅಶುಭ ಫಲಗಳು ನಿಮ್ಮ ಜೀವನದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಭವಿಷ್ಯ ಬದಲಾಗಲಿದೆ ಆದ್ದರಿಂದ ಎಚ್ಚರಿಕೆಯಿಂದ ಇರುವುದು ಉತ್ತಮ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top