ಜ್ಯೋತಿಷ್ಯ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ಸಮಯದಲ್ಲಿ ಸೂರ್ಯ ಹಾಗೂ ಚಂದ್ರನನ್ನು ನೋಡಬಾರದು ಅಂತ ಹೇಳ್ತಾರೆ ಯಾಕೆ ಗೊತ್ತಾ ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ಸಮಯದಲ್ಲಿ ಸೂರ್ಯ ಹಾಗೂ ಚಂದ್ರನನ್ನು ನೋಡಬಾರದು ಅಂತ ಹೇಳ್ತಾರೆ ಯಾಕೆ ಗೊತ್ತಾ ?

 

ಸೂರ್ಯ ಹಾಗೂ ಚಂದ್ರನನ್ನು ಈ ಸಮಯದಲ್ಲಿ ನೋಡಬಾರದೆಂದು ಹೇಳುತ್ತಾರೆ. ಹೀಗೆ ಯಾಕೆ ? ಹೇಳುತ್ತಾರೆ. ಎಂದು ನಿಮಗೆ ಗೊತ್ತಾ ? ಬನ್ನಿ ತಿಳಿಯೋಣ…..
ಮನುಷ್ಯನ ಜೀವನದಲ್ಲಿ ಸೂರ್ಯ ಹಾಗೂ ಚಂದ್ರನ ಪಾತ್ರ ಬಹಳ ಮಹತ್ವವನ್ನು ವಹಿಸುತ್ತದೆ. ಈ ಗ್ರಹಗಳ ದೋಷದಿಂದ ಅಸಾಧ್ಯವಾದ ರೋಗ ಕಾಡಲು ಶುರುವಾಗುತ್ತದೆ. ಸೂರ್ಯ ದೋಷದಿಂದ ತಲೆ ನೋವು, ಜ್ವರ, ಕಣ್ಣಿಗೆ ಸಂಬಂಧಿಸಿದ ಸಮಸ್ಯೆ, ನೌಕರಿಯಲ್ಲಿ ತೊಂದರೆ ಸೇರಿದಂತೆ ಅನೇಕ ಸಮಸ್ಯೆಗಳು ಕಾಡುತ್ತವೆ.

 

 

ಚಂದ್ರನ ದೋಷದಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ, ಧನ ಹಾನಿ,ಚರ್ಮ ವ್ಯಾಧಿಗಳು,ಕುಷ್ಠ ರೋಗ ಮತ್ತು ಮಾನಸಿಕ ಖಾಯಿಲೆಗಳು ಮಾನಸಿಕ ಖಿನ್ನತೆ ಕಾಡುತ್ತದೆ .
ಶಾಸ್ತ್ರದ ಪ್ರಕಾರ ಕೆಲವೊಂದು ಸಮಯದಲ್ಲಿ ಸೂರ್ಯ ಹಾಗೂ ಚಂದ್ರನನ್ನು ನೋಡಬಾರದು ಇದು ಕೂಡ ದೋಷಕ್ಕೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಸೂರ್ಯ ಹಾಗೂ ಚಂದ್ರ ಮುಳುಗುವ ವೇಳೆ ನೋಡಬಾರದಂತೆ. ಇದರಿಂದ ಕಣ್ಣಿನ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ಶಾಸ್ತ್ರದಲ್ಲಿ ಅಪಶಕುನವೆಂದು ಪರಿಗಣಿಸಲಾಗಿದೆ.

 

 

ಸೂರ್ಯೋದಯ ನೋಡುವುದು ಶುಭಕರ.
ಸೂರ್ಯನ ಉದಯವಾಗುತ್ತಿದ್ದಾಗ ದಿನ ಆರಂಭವಾಗುತ್ತದೆ. ಸೂರ್ಯಾಸ್ತದ ನಂತರ ದಿನ ಮುಗಿಯುತ್ತದೆ. ಸೂರ್ಯೋದಯವಾಗುತ್ತಿದ್ದಂತೆ ನಿದ್ರೆಯಿಂದ ಎಳಬೇಕು. ಸೂರ್ಯೋದಯವಾದ ಮೇಲೆ ತುಂಬಾ ಸಮಯ ಮಲಗುವವರಿಗೆ ತಾಯಿ ಲಕ್ಷ್ಮೀ ದೇವಿಯ ಕೃಪೆ ಸಿಗುವುದಿಲ್ಲ.

 

 

ಪೌರ್ಣಮಿಯ ಚಂದ್ರೋದಯ ನೋಡುವುದು ಶುಭ.
ನವ ಗ್ರಹಗಳಲ್ಲಿ ಚಂದ್ರನಿಗೆ ಮಹತ್ವದ ಸ್ಥಾನವಿದೆ. ಹುಣ್ಣಿಮೆಯಂದು ಅಂದರೆ ಪೌರ್ಣಮಿಯ ದಿನ ಚಂದ್ರೋದಯವನ್ನು ನೋಡುವುದು ಶುಭಕರವೆಂದು ಪರಿಗಣಿಸಲಾಗಿದೆ. ಆ ಸಂದರ್ಭದಲ್ಲಿ ಚಂದ್ರನಿಗೆ ವಿಶೇಷ ಪೂಜೆ ಮಾಡುವುದು ಹಾಗೆ ಭಕ್ತಿಯಿಂದ ನಮಸ್ಜರಿಸುವುದು ಮಂಗಳಕರವೆಂದು ಮತ್ತು ಶುಭವೆಂದು ಪರಿಗಣಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top