fbpx
ಮನೋರಂಜನೆ

ಹೆಬ್ಬುಲಿ ಹೀರೋಯಿನ್ ಅಮಲಾ ಪೌಲ್ ಅರೆಸ್ಟ್ ಮಾಡಿದ ಕೇರಳ ಪೊಲೀಸರು! ಕಾರಣವೇನು ಗೊತ್ತಾ?

ಹೆಬ್ಬುಲಿ ಹೀರೋಯಿನ್ ಅಮಲಾ ಪೌಲ್ ಅರೆಸ್ಟ್ ಮಾಡಿದ ಕೇರಳ ಪೊಲೀಸರು! ಕಾರಣವೇನು ಗೊತ್ತಾ?

 

 

ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ್ದ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರದ ಹೀರೋಯಿನ್ ಅಮಲಾ ಪೌಲ್ ಅವರನ್ನು ಕೇರಳದ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಹಿಂದೆ ಕೇರಳದಲ್ಲಿ ತೆರಿಗೆ ತಪ್ಪಿಸಲು ತಮ್ಮ ಐಷಾರಾಮಿ ವಾಹನಗಳಿಗೆ ಪುದುಚೆರಿಯಲ್ಲಿ ನೋಂದಣಿ ಮಾಡಿಸಿರುವ ಆರೋಪದ ಹಿನ್ನೆಲೆಯಲ್ಲಿ ಅಮಲಾ ಪೌಲ್ ವಿರುದ್ಧ ಪೊಲೀಸರು ಎಫ್.ಐ.ಆರ್ FIR ದಾಖಳಿದ್ದರು.

ಅಮಲಾ ಪೌಲ್ ಕೇರಳದ ನಿವಾಸಿಯಾಗಿದ್ದು ತೆರಿಗೆ ತಪ್ಪಿಸುವ ಸಲುವಾಗಿ ಪುದುಚೇರಿಯಲ್ಲಿ ನಕಲಿ ದಾಖಲೆಗಳನ್ನು ನೀಡುವ ಮೂಲಕ ಕಾರು ಖರೀದಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಕೇರಳದಲ್ಲಿ 20 ಲಕ್ಷ ರೂಪಾಯಿಗಿಂತ ಜಾಸ್ತಿ ಬೆಳೆಯ ಕಾರುಗಳಿಗೆ ಶೇ.20 ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ. ಈ ತೆರಿಗೆಯಿಂದ ತಪ್ಪಿಸಿಕೊಳ್ಳಲು ಪುದುಚೇರಿಯಲ್ಲಿ ಕಾರು ಖರೀದಿಸಿದ್ದಾರೆ. ಪುದುಚೇರಿಯಲ್ಲಿ ವಾಹನ ನೋಂದಣಿಗಾಗಿ ವೈಯಕ್ತಿಕ ದಾಖಲೆಗಳನ್ನು ನಕಲು ಮಾಡಿದ್ದಾರೆ ಎಂದು ಹೇಳಲಾಗಿತ್ತು.

 

 

ಈ ವಿಚಾರವನ್ನು ಸ್ವತಃ ಪುದುಚ್ಚೇರಿ ರಾಜ್ಯಪಾಲರಾಗಿರುವ ಕಿರಣ್ ಬೇಡಿಯವರು ಅಮಲಾ ಪೌಲ್’ರ ಮೋಸವನ್ನು ಬಯಲಿಗೆಳೆದಿದ್ದು ಕೇರಳದ ಪೋಲೀಸರಿಗೆ ಅಮಲಾಪೌಲ್ ವಿರುದ್ಧ ‘ತೆರಿಗೆ ವಂಚನೆ ಮೊಕದ್ದಮೆ’ಯನ್ನು ದಾಖಲಿಸುವಂತೆ ತಾಕೀತು ಮಾಡಿದ್ದರು, ಅದರಂತೆ ಪೊಲೀಸರು ಕೂಡ ಮೊಕದ್ದಮೆ ದಾಖಲಿಸಿಕೊಂಡು ಇದರ ಬಗ್ಗೆ ವಿವರಣೆ ಕೊಡುವುವಂತೆ ಆಕೆಗೆ ಅನೇಕ ನೊಟೀಸ್’ಗಳನ್ನು ನೀಡಿದ್ದರೂ ಯಾವ ನೋಟಿಸ್’ಗೂ ಉತ್ತರಿಸದ ಅಮಲಾ ಪೌಲ್ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದಾರೆ.

 

 

ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಎಚ್ಚೆತ್ತುಕೊಂಡ ತಮ್ಮ ಬಂದನವಾಗಬಹುದು ಎಂದು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ. ಆ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ಕೋರ್ಟ್ ಜನವರಿ 15ರೊಳಗೆ ಪೊಲೀಸ್ ಸ್ಟೇಷನ್ ಗೆ ಹೋಗಿ ಈ ಪ್ರಕರಣದ ಕುರಿತು ವಿವರಣೆಗಳನ್ನು ನೀಡುವಂತೆ ಆದೇಶಿಸಿತ್ತು ಆದರೆ ಆದೇಶವನ್ನು ಪಾಲಿಸದ ನಟಿ ಅಮಲರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಂತರ ಅಮಲಾ ತಿರುವನಂತಪುರಂನಲ್ಲಿರುವ ಕ್ರೈಂ ಬ್ರ್ಯಾಂಚ್‌ ಪೊಲೀಸರ ಮುಂದು ಹಾಜರಾಗಿ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಸದ್ಯ ಅಮಲಾಗೆ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿದ್ದು ಪೊಲೀಸರ ಅತಿಥಿಯಾಗಿದ್ದ ಅಮಲಾ ಪೌಲ್‌ ಈಗ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top