fbpx
ಕಿರುತೆರೆ

ಬಿಗ್’ಬಾಸ್ ಮುಗಿಸಿಕೊಂಡು ಬಂದಿದ್ದ ಮನೆಗೆ ಬಂದ ದಿವಾಕರ್’ಗೆ ಸಿಕ್ತು ಅರಗಿಸಿಕೊಳ್ಳಲಾಗದ ಶಾಕಿಂಗ್ ನ್ಯೂಸ್ !

ಬಿಗ್’ಬಾಸ್ ಮುಗಿಸಿಕೊಂಡು ಬಂದಿದ್ದ ಮನೆಗೆ ಬಂದ ದಿವಾಕರ್’ಗೆ ಸಿಕ್ತು ಅರಗಿಸಿಕೊಳ್ಳಲಾಗದ ಶಾಕಿಂಗ್ ನ್ಯೂಸ್ !

 

 

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಷೋ ‘ಬಿಗ್ ಬಾಸ್ ಕನ್ನಡ ಸೀಸನ್-5’ ಅಂತ್ಯಗೊಂಡಿದೆ. ಬಹುತೇಕ ವೀಕ್ಷಕರ ಬಯಕೆಯಂತೆ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಕಾಮನ್ ಮ್ಯಾನ್ ಕೋಟಾದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ದಿವಾಕರ್‌ ಬಿಗ್‌ಬಾಸ್‌ ಸೀಸನ್ 5ನ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದು ಸೂಪರ್ ಸ್ಟಾರ್ ಜಯರಾಮ್ ಕಾರ್ತಿಕ್ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

 

 

ಬಿಗ್ ಬಾಸ್ ಕಾರ್ಯಕ್ರಮದ ಅಔಪಚಾರಿಕತೆಯನ್ನು ಮುಗಿಸಿಕೊಂಡು ಮನೆಗೆ ಬಂದ ಶೋನ ರನ್ನರ್ ಅಪ್ ದಿವಾಕರ್ ಅವರಿಗೆ ಅಕ್ಷರಶಃ ಆಘಾತವಾಗಿದೆ. ಇದು ಎಂತವರಿಗೂ ಅರಗಿಸಿಕೊಳ್ಳಲಾಗದಂತಹ ಸುದ್ದಿ. ಹೌದು ದಿವಾಕರ್ ಅವರು ಬಿಗ್ ಬಾಸ್ ಮನೆಗೆ ತೆರಳುವ ಮುನ್ನ ಅವರ ಪತ್ನಿ ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದರು. ಮೊದಲ ಮಗು ಗಂಡಾಗಿದ್ದ ಕಾರಣ ಈ ಮಗು ಹೆಣ್ಣಾಗಬೇಕು ಎಂಬ ಆಸೆಯನ್ನು ಇಬ್ಬರೂ ಇಟ್ಟುಕೊಂಡಿದ್ದರು. ಆದರೆ ಅವರ ಆಸೆಗೆ ತಣ್ಣೀರು ಬಿದ್ದಿದೆ.

 

 

ದಿವಾಕರ್ ಅವ್ರು ಬಿಗ್ ಬಾಸ್ ಮನೆಯಲ್ಲಿದ್ದಾಗ ಇತ್ತ ಅನಾರೋಗ್ಯಕ್ಕೆ ತುತ್ತಾಗಿದ್ದ ಪತ್ನಿ ಮಮತಾಗೆ ಗರ್ಭಪಾತವಾಗಿ ಮಗುವನ್ನು ಕಳೆದುಕೊಂಡಿದ್ದಾರೆ. ಬಿಗ್’ಬಾಸ್ ಮನೆಯೊಳಗೆ ಪತ್ನಿ ಮಮತಾ ಹೋಗಿದ್ದಾಗ, ಈ ವಿಚಾರವನ್ನು ದಿವಾಕರ್ ಗೆ ಹೇಳಿರಲಿಲ್ಲ. ಒಂದು ವೇಳೆ ಹೇಳಿದರೆ ಅವರ ಆಟಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಹೇಳಿರಲಿಲ್ಲ. ಈಗ ಷೋ ಮುಗಿಸಿಕೊಂಡು ಹೊರಬಂದ ನಂತರ ಈ ಸಂಗತಿಯನ್ನು ತಿಳಿದ ದಿವಾಕರ್ ಅವರಿಗೆ ತುಂಬಾ ಬೇಸರವಾಗಿದ್ದು “ಕೊಡೋದು ತೆಗೆದುಕೊಳ್ಳುವುದು ಎರಡು ದೇವರ ಕೈನಲ್ಲಿರುವಾಗ ನಾವು ನೀವು ಏನು ಮಾಡೋಕೆ ಆಗುತ್ತೆ” ಎಂದು ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top