fbpx
ಮನೋರಂಜನೆ

ಕಾಮನ್‌ಮ್ಯಾನ್ ಆಗಿದ್ದ ದಿವಾಕರ್‌ ಈಗ ಸಿನಿಮಾ ಹೀರೋ.

ಕಾಮನ್‌ಮ್ಯಾನ್ ಆಗಿದ್ದ ದಿವಾಕರ್‌ ಈಗ ಸಿನಿಮಾ ಹೀರೋ.

 

 

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಷೋ ‘ಬಿಗ್ ಬಾಸ್ ಕನ್ನಡ ಸೀಸನ್-5’ ಅಂತ್ಯಗೊಂಡಿದ್ದು ವೀಕ್ಷಕರ ಬಯಕೆಯಂತೆ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಕಾಮನ್ ಮ್ಯಾನ್ ಕೋಟಾದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ದಿವಾಕರ್‌ ಬಿಗ್‌ಬಾಸ್‌ ಸೀಸನ್ 5ನ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದು ಸೂಪರ್ ಸ್ಟಾರ್ ಜಯರಾಮ್ ಕಾರ್ತಿಕ್ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

 

 

ಬಿಗ್ ಬಾಸ್ ಮುಗಿದಿದ್ದರೂ ಆಟದ ತಾಪ ಮಾತ್ರ ಇನ್ನೂ ಹಾಗೆಯೇ ಇದೇ, ಬಿಗ್ ಬಾಸ್ ಮುಗಿದು ಮೂರು ದಿನಗಳೇ ಕಳೆದರೂ ಸ್ಪರ್ಧಿಗಳನ್ನು ಟಿವಿ ಚಾನೆಲ್ ಗಳು ಬಿಡುವಂತೆ ಕಾಣಿಸುತ್ತಿಲ್ಲ. ಅವರನ್ನು ಸ್ಟುಡಿಯೋಗಳಲ್ಲಿ ಕೂರಿಸಿಕೊಂಡು ಬಿಗ್ ಮನೆಯ ಕಥೆ ಪುರಾಣಗಳನ್ನೆಲ್ಲಾ ಕೇಳಿ ಕಾರ್ಯಕ್ರಮಕಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಕಾಮನ್ ಮ್ಯಾನ್ ಆಗಿ ಬಿಗ್ ಬಾಸ್ ಮನೆಗೆ ಹೋಗಿ ಕಾರ್ಯಕ್ರಮದ ರನ್ನರ್ ಅಪ್ ಆದ ದಿವಾಕರ್ ಕುರಿತು ಆಶ್ಚರ್ಯಕರವಾದ ಸಂಗತಿಯೊಂದು ಹೊರಬಿದ್ದಿದೆ.

 

 

ಮೊನ್ನೆಯಷ್ಟೇ ಬಿಗ್ ಬಾಸ್ ಮನೆಯಿಂದ ತನ್ನ ಮನೆಗೆ ಬಂದಿರುವ ದಿವಾಕರ್ ಗೆ ಸ್ಯಾಂಡಲ್ ವುಡ್ ನಿರ್ಮಾಪಕರಿಂದ ಕರೆ ಬಂದಿದೆಯಂತೆ. ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸುವಂತೆ ಸ್ಯಾಂಡಲ್ ವುಡ್ ನಿಂದ ಕರೆ ಬಂದಿರುವ ಬಗ್ಗೆ ಸ್ವತಃ ದಿವಾಕರ್ ಅವ್ರೆ ಟಿವಿ ಚಾನೆಲ್ ವೊಂದರಲ್ಲಿ ಬಾಯ್ಬಿಟ್ಟಿದ್ದಾರೆ. “ಸಿನಿಮಾ ಮತ್ತು ದಾರಾವಾಹಿಗಳಿಂದ ಆಗಲೇ ಅನೇಕ ಆಫರ್’ಗಳು ಬರುತ್ತಿದೆ. ಆದರೆ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಬಹಳ ಎಚ್ಚರ ವಹಿಸಿ ಒಂದೊಳ್ಳೆ ನಿರ್ಧಾರ ತೆಗೆದುಕೊಳ್ಳಬೇಕು. ಸದ್ಯದಲ್ಲೇ ನಿಮಗೆ ಎಲ್ಲಾ ಗೊತ್ತಾಗಲಿದೆ”ಎಂದು ದಿವಾಕರ್ ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top