fbpx
ಸಿನಿಮಾ

ತೆಲುಗಿಗೆ ರಿಮೇಕ್ ಆಗಲಿದೆ ಭರ್ಜರಿ ಯಶಸ್ಸು ಕಾಣುತ್ತಿರುವ ಕನಕ ಚಿತ್ರ.

ತೆಲುಗಿಗೆ ರಿಮೇಕ್ ಆಗಲಿದೆ ಭರ್ಜರಿ ಯಶಸ್ಸು ಕಾಣುತ್ತಿರುವ ಕನಕ ಚಿತ್ರ.

ದುನಿಯಾ ವಿಜಯ್ ನಾಯಕ ನಟನಾಗಿರುವ ಕನಕ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮುನ್ನೂರಕ್ಕೂ ಅಧಿಕ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡು ಭರ್ಜರಿಯಾಗಿ ಯಶಸ್ಸು ಕಾಣುತ್ತಿದೆ. ಆರ್. ಚಂದ್ರು ನಿರ್ದೇಶನದ ಈ ಚಿತ್ರದ ರಿಮೇಕ್ ರೈಟ್ ತೆಲುಗು ಚಿತ್ರಕ್ಕೆ ಬಹಳ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಈ ಮೊದಲು ಆರ್. ಚಂದ್ರು ರವರ ಕೆಲವು ಚಿತ್ರಗಳು ಬೇರೆ ಭಾಷೆಗೆ ರಿಮೇಕ್ ಆಗಿದ್ದವು.

 

 

ಚಿತ್ರದ ಯಶಸ್ವಿ ಪ್ರದರ್ಶ ಹಾಗು ದೊಡ್ಡ ಮೊತ್ತಕ್ಕೆ ರಿಮೇಕ್ ರೈಟ್ ಸೇಲ್ ಆಗಿದ್ದು ಚಿತ್ರ ತಂಡದ ಖುಷಿಗೆ ಪಾರವೇ ಇಲ್ಲ. ಚಿತ್ರದಲ್ಲಿ ಅಪ್ಪಟ ಅಣ್ಣಾವ್ರ ಅಭಿಮಾನಿಯಾಗಿ ಮಿಂಚಿರುವ ದುನಿಯಾ ವಿಜಯ್ ಪ್ರೇಕ್ಷಕರಿಗೆ ರಸದೌತಣ ಬಡಿಸಿದ್ದಾರೆ. ಹರಿಪ್ರಿಯಾ ಈ ಚಿತ್ರದ ನಾಯಕಿಯಾಗಿದ್ದಾರೆ.

 

 

ಅಮಾವಾಸ್ಯೆ ದಿನ ಮಗು ಹುಟ್ಟಿದರೆ ಮನೆ ನಿರ್ನಾಮವಾಗುತ್ತದೆ ಅನ್ನೋದು ಜ್ಯೋತಿಷಿಯ ನುಡಿ. ಇದನ್ನು ತಡೆಯಲು ಬಸುರಿ ಹೆಂಡತಿಯ ಕಾಲುಗಳನ್ನು ಮೇಲಕ್ಕೆತ್ತಿ ಕಟ್ಟುವ ಕಲ್ಲು ಮನಸ್ಸಿನ ತಂದೆ. ಇಷ್ಟಾದರೂ ಅಮಾವಾಸ್ಯೆ ದಿನವೇ ಗರ್ಭಸೀಳಿಬರುವ ಮಗು. ಆತ ಕನಕ!

 

 

ಅಪ್ಪನ ಕಣ್ಣಿಗೆ `ದರಿದ್ರ’ನಂತೆ ಕಾಣುವ ಕನಕ. ಅಡಿಗಡಿಗೂ ಮೂದಲಿಕೆಗೆ ಒಳಪಟ್ಟು ಕಡೆಗೊಂದು ದಿನ ಈತ ಊರುಬಿಟ್ಟು ಪೇಟೆ ಸೇರುತ್ತಾನೆ. ಇಲ್ಲಿ ಪೋಸ್ಟರು ಅಂಟಿಸೋ ಕಾಯಕ ಮಾಡುವ ರಂಗಾಯಣ ರಘು ಕೈಗೆ ಸಿಕ್ಕು ಆಶ್ರಯ ಪಡೆದು ದೊಡ್ಡವನಾಗುತ್ತಾನೆ. ಆಟೋ ಓಡಿಸೋದು ಕನಕನ ಉದ್ಯೋಗ. ಜೊತೆಗೆ ಸಂಕಷ್ಟದಲ್ಲಿರೋ ಜನತೆಗೆ ಕೈಹಿಡಿಯೋದು ಕರುಣಾಮಯಿ ಕನಕನ ಗುಣ. ಹಾಗೆ ಯಾರದ್ದೋ ಸಂಕಷ್ಟಕ್ಕೆ ಮಿಡಿಯುವಾಗ ಜೊತೆಯಾಗುವಾಕೆ ಮಾನ್ವಿತಾ. ಕೇಡುಗರ ಕಾಟದೊಂದ ಒದ್ದಾಡುತ್ತಿದ್ದ ನಾಯಕಿಗೂ ಕನಕನೇ ಬಾಡಿಗಾರ್ಡು! ಜತೆಗಿದ್ದು ಹಿತ ಕಾಯುವ ಕನಕನ ಮೇಲೆ ಆಕೆಗೆ ಲವ್ವು. ಇನ್ನೇನು ಇಬ್ಬರೂ ಪ್ರೇಮ ನಿವೇದಿಸಿಕೊಂಡು ಜೊತೆಯಾಗಬೇಕು ಅನ್ನುವಷ್ಟರಲ್ಲಿ ಮಹಾ ತಿರುವೊಂದು ಘಟಿಸಿ ಮಧ್ಯಂತರಕ್ಕೆ ಮುಟ್ಟುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top