fbpx
ಮನೋರಂಜನೆ

ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಕಿಚ್ಚ ಸುದೀಪ್!

ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಕಿಚ್ಚ ಸುದೀಪ್!

 

 

ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ ಕಿಚ್ಚ ಸುದೀಪ್! ಹಾಕಿದ ghalige ಸ್ಯಾಂಡಲ್‌ವುಡ್ ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಹೊಸ ಮೈಲುಗಲ್ಲು ಮುಟ್ಟಿದ್ದಾರೆ. ಕನ್ನಡ ಚಿತ್ರೋದ್ಯಮದಲ್ಲಿ ಸುದೀಪ್ ಅವರು 22 ವರ್ಷಗಳನ್ನು ಮುಕ್ತಾಯಗೊಳಿಸಿದ್ದಾರೆ. ಈ ಬಗ್ಗೆ ಸ್ವತಃ ತಮ್ಮ ಸಿನಿ ಪಯಣದ ಬಗ್ಗೆ ಪತ್ರವೊಂದನ್ನು ಬರೆದು 22 ವರ್ಷದ ಅನುಭವವನ್ನ ಹಂಚಿಕೊಂಡಿದ್ದಾರೆ.

 

 

ಸುಂದರ ನೋಟ, ಉತ್ತಮ ನಿಲುವು, ಗಡುಸಾದ ಧ್ವನಿ ಹೀಗೆ ಒಬ್ಬ ಹೀರೋಗೆ ಯಾವೆಲ್ಲಾ ಕ್ವಾಲಿಟಿಗಳು ಬೇಕೋ ಅವೆಲ್ಲವನ್ನು ಹೊಂದಿರುವ ಅಭಿನಯ ಚಕ್ರವರ್ತಿ’ ಎಂದೇ ಖ್ಯಾತರಾದ ಸುದೀಪ್ ತಮ್ಮ ಬಣ್ಣದ ಬದುಕಿನ ಬಗ್ಗೆ ಸೋಷಿಯಲ್ ಮೀಡಿಯಾವಾದ ಗೂಗಲ್ ಪ್ಲಸ್‌ನಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಚಿತ್ರರಂಗದ ಬದುಕಿನಲ್ಲಿ ಅವರಿಗೆ ಸಹಕರಿಸಿದ ಎಲ್ಲಾ ತಂತ್ರಜ್ಞರು, ಸಹ ಕಲಾವಿದರು, ವಿತರಕರು, ಮಾಧ್ಯಮ ಮಿತ್ರರಿಗೆ ಸುದೀಪ್ ಕೃತಜ್ಞತೆ ತಿಳಿಸಿದ್ದಾರೆ.

 

pic credit: Kicchana Hudugru

 

“1996, ಜನವರಿ 31ರಂದು ಮೊದಲ ಸಲ ಬಣ್ಣಹಚ್ಚಿ ‘ಕಟ್, ಆ್ಯಕ್ಷನ್’ಗೆ ತಲೆ ಬಾಗಿ, ತಾವು ಆರಂಭಿಸಿದ ಅವರ ಮೊದಲ ಶಾಟ್ ಬಗ್ಗೆ ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. “ನನ್ನ ಮೊದಲ ಶೂಟ್‌ನಲ್ಲಿ ನನ್ನ ಅಣ್ಣನಿಂದ ಆಶೀರ್ವಾದವನ್ನು ಪಡೆಯುವ ಸೀನ್ ಆಗಿತ್ತು, ಅಲ್ಲಿ ನನ್ನ ಅಣ್ಣನ ಪಾತ್ರದಲ್ಲಿ ‘ಅಂಬರೀಷ್ ಮಾಮ’ ನಿಂತಿದ್ದರು. ಅವರ ಆಶೀರ್ವಾದ ಪಡೆಯುವ ದೃಶ್ಯವೇ ನನ್ನ ಸಿನಿ ಬದುಕಿನ ಮೊದಲ ಶಾಟ್ ಎಂದು ಹೇಳಿರುವ ಸುದೀಪ್, ಅಲ್ಲಿಂದ ಇಲ್ಲೀವರೆಗೂ ಸಾಗಿದ ತಮ್ಮ ಪ್ರಯಾಣದ ಬಗ್ಗೆ ಸಂತಸ ವ್ಯಕ್ತಪಡಿಸಿ 22 ವರ್ಷದ ತಮ್ಮ ಅನುಭವವನ್ನು ಚಿಕ್ಕದಾಗಿ ಮತ್ತು ಚೊಕ್ಕವಾಗಿ ಬರೆದುಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top