fbpx
News

ಆಧಾರ್ ಇಲ್ಲದವರಿಗೆ ಇನ್ಮುಂದೆ ಸಿಗೋದಿಲ್ಲಾ ಗ್ಯಾಸ್ ಸಿಲೆಂಡರ್

ಆಧಾರ್ ಇಲ್ಲದವರಿಗೆ ಇನ್ಮುಂದೆ ಸಿಗೋದಿಲ್ಲಾ ಗ್ಯಾಸ್ ಸಿಲೆಂಡರ್

 

 

ಗ್ಯಾಸ್ ಸಿಲಿಂಡರ್ ಸಂಪರ್ಕಕ್ಕೆ ಆಧಾರ್ ಅನ್ನು ಲಿಂಕ್ ಮಾಡಿಸಲು ಕೊನೆಯ ದಿನ ಈಗಾಗಲೇ ಮುಗಿದಿರುವುದರಿಂದ ಸರ್ಕಾರದಿಂದ ಸ್ವಾಮ್ಯತೆ ಪಡೆದ ಗ್ಯಾಸ್ ಅನಿಲ ಕಂಪನಿಗಳು ಆಧಾರ್ ಅನ್ನು ಸಂಯೋಜಿಸದವರಿಗೆ ಗ್ಯಾಸ್ ಪೂರೈಕೆಯನ್ನು ನಿಲ್ಲಿಸಿವೆ . ಆಧಾರ್ ಸಂಯೋಜಿಸದವರು ಅಡುಗೆ ಅನಿಲವಿಲ್ಲದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ . ಆಧಾರ್ ಅನ್ನು ಲಿಂಕ್ ಮಾಡಿಸಿದರೆ ಮಾತ್ರ ಗ್ಯಾಸ್ ಪೂರೈಸಲಾಗುತ್ತದೆ ಎನ್ನಲಾಗುತ್ತಿದೆ .

 

ಇಂಡಿಯನ್ ಗ್ಯಾಸ್ ಕಂಪನಿಯ ಪ್ರತಿನಿಧಿಯೊಬ್ಬರನ್ನು ಗ್ಯಾಸ್ ಸಿಲಿಂಡರ್ ಸಂಪರ್ಕಕ್ಕೆ ಆಧಾರ್ ಅನ್ನು ಲಿಂಕ್ ಮಾಡಿಸಲು ಮಾರ್ಚ್ 31 ರ ವರೆಗೆ ದಿನಾಂಕವನ್ನು ನೀಡಲಾಗಿದೆಯಲ್ಲ ಎಂದು ಪ್ರಶ್ನಿಸಿದಾಗ ” ಇದರ ಬಗ್ಗೆ ನಮಗೆ ಇಂಡಿಯನ್ ಗ್ಯಾಸ್ ಕಂಪನಿಯಿಂದ ಯಾವ ಮಾಹಿತಿಯು ಬಂದಿಲ್ಲ . ಇಂಡಿಯನ್ ಗ್ಯಾಸ್ ಕಂಪನಿ ನೀಡುವ ಆದೇಶಗಳನ್ನು ಪಾಲಿಸುತ್ತೇವೆ ಅಷ್ಟೇ . ಅದರಂತೆ ಆಧಾರ್ ಅನ್ನು ಲಿಂಕ್ ಮಾಡಿಸದವರಿಗೆ ಗ್ಯಾಸ್ ಸಿಲಿಂಡರ್ ಪೂರೈಸದಂತೆ ಆದೇಶ ಬಂದಿರುವುದರಿಂದ ಸಿಲಿಂಡರ್ ಪೂರೈಕೆಯನ್ನು ನಿಲ್ಲಿಸಲಾಗಿದೆ ” ಎಂದರು .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top