fbpx
ಹೆಚ್ಚಿನ

ಮೈಸೂರಿಗೆ ದೇಶದ ಸ್ವಚ್ಛ ನಗರಿ ಪಟ್ಟವನ್ನು ಮತ್ತೆ ತರಲು ಪಣ ತೊಟ್ಟ ಮಹಾರಾಜ ಯದುವೀರ್

ಮೈಸೂರಿಗೆ ದೇಶದ ಸ್ವಚ್ಛ ನಗರಿ ಪಟ್ಟವನ್ನು ಮತ್ತೆ ತರಲು ಪಣ ತೊಟ್ಟ ಮಹಾರಾಜ ಯದುವೀರ್

 

ಸ್ವಚ್ಛ ಮೈಸೂರು ನಗರಕ್ಕಾಗಿ ಪಣ ತೊಟ್ಟಿರುವ ಯದುವಂಶದ ಮಹಾರಾಜರಾಗಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಯಾನ ಒಂದನ್ನು ಪ್ರಾರಂಭಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಯಾನದ ಕುರಿತು ವಿಡಿಯೋ ಹಾಕಿದ್ದಾರೆ. ತಮ್ಮ ಫೇಸ್ಬುಕ್ ಹಾಗು ಇಸ್ಟಾಗ್ರಾಮ್ ಅಕೌಂಟ್ ನಲ್ಲಿ ವಿಡಿಯೋ ಹಾಕಿ ಜನರಿಗೆ ಸ್ವಚ್ಚ ಮೈಸೂರು ಅಭಿಯಾನದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

 

 

ಮೈಸೂರು ಮಹಾನಗರ ಪಾಲಿಕೆಯ ಸ್ವಚ್ಛ ಮೈಸೂರು ಅಭಿಯಾನದ ಬ್ರಾಂಡ್ ಅಂಬಾಸಿಡಾರ್ ಆಗಿರುವ ಯದುವೀರ್‌ ಫೇಸ್ಬುಕ್ ಇನ್ಸ್ಟಾ ಗ್ರಾಂ ನಲ್ಲಿ ಮೈಸೂರು ನಗರವನ್ನು ಇನ್ನಷ್ಟು ಸ್ವಚ್ಛ ವಾಗಿಡಲು ಸ್ವಚ್ಛ ಭಾರತ್‌ ಮೊಬೈಲ್ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ ಎಂದು ಜನರಿಗೆ ತಿಳಿಸಿದ್ದಾರೆ.

 

 

ವಿಡಿಯೋದಲ್ಲಿ ಅವರು ಮೊದಲೆರಡು ವರ್ಷ ಮೈಸೂರು ಸ್ವಚ್ಛತೆಯಲ್ಲಿ ದೇಶದಲ್ಲಿ ಮೊದಲನೇ ಸ್ಥಾನದಲ್ಲಿಟ್ಟು ಆದರೆ ಈಗ ಐದನೇ ಸ್ಥಾನಕ್ಕೆ ಕುಸಿದಿದೆ ಅದರಿಂದ ನಾವೆಲ್ಲ ಮೈಸೂರನ್ನು ಮೊದಲನೇ ಸ್ಥಾನಕ್ಕೆ ತರಲು ಪಣತೊಡೋಣ. ಹಸಿ ಕಸ ಒಣ ಕಸ ವಿಂಗಡಣೆ ಮಾಡಿ ಮಹಾನಗರ ಪಾಲಿಕೆಯ ವಾಹನ ಬಂದಾಗ ಅದರಲ್ಲಿ ಹಾಕೋಣ ಎಂದು ಹೇಳಿದರು.

ಹಲವು ಸಾಮಾಜಿಕ ಕೆಲಸವನ್ನು ಮಾಡುತ್ತಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ಮಹತ್ವದ ಕೆಲಸವನ್ನು ಮಾಡುತ್ತಿದ್ದು ಜನರ ಪ್ರಶಂಶೆಗೆ ಕಾರಣರಾಗಿದ್ದಾರೆ.

ವಿಡಿಯೋ ನೋಡಿ:

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top