fbpx
ಐಪಿಎಲ್

ಚನ್ನೈ ಸೂಪರ್ ಕಿಂಗ್ಸ್ ಎಂಬುದು ಕ್ರಿಕೆಟ್ ತಂಡವೋ ಅಥವಾ ವೃದ್ಧಾಶ್ರಮವೋ?

ಚನ್ನೈ ಸೂಪರ್ ಕಿಂಗ್ಸ್ ಎಂಬುದು ಕ್ರಿಕೆಟ್ ತಂಡವೋ ಅಥವಾ ವೃದ್ಧಾಶ್ರಮವೋ?

 


ಬೆಂಗಳೂರು ನಗರದಲ್ಲಿ ಇದೇ ಶನಿವಾರ ಮತ್ತು ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ 11ನೇ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಭರ್ಜರಿಯಾಗಿ ನಡೆಡಿದ್ದು ಯುವ ಆಟಗಾಗರಿಗೆ ಬಂಪರ್ ಹೊಡೆದಿದೆ. ಒಟ್ಟು 578 ಆಟಗಾರರ ಹರಾಜು ಪ್ರಕ್ರಿಯೆ ಶನಿವಾರ ಮತ್ತು ಭಾನುವಾರ ನಡೆಡಿದ್ದು, ಎಂಟು ಫ್ರ್ಯಾಂಚೈಸ್‌ಗಳು ತಮಗೆ ಬೇಕಾದ ಆಟಗಾರರನ್ನು ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿವೆ.

 

 

ಹರಾಜು ಮುಗಿದ ನಂತರ ಎರಡು ವರ್ಷಗಳ ನಂತರ ಐಪಿಎಲ್ ಗೆ ಮರಳಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಷಿಯಲ್ ಮೀಡಿಗಳಲ್ಲಿ ಟ್ರೊಲ್ ಗೆ ಒಳಗಾಗಿದೆ. ಅದಕ್ಕೆ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀಧಿ ಮಾಡಿರುವ ಆಟಗಾರರು. ಹೌದು ಹೊಡಿಬಿಡಿ ಆಟಕ್ಕೆ ಹೆಸರಾಗಿರುವ ಟಿ20 ಕ್ರಿಕೆಟ್’ನಲ್ಲಿ ಸಾಮಾನ್ಯವಾಗಿ ಯುವಕರೇ ಹೆಚ್ಚು ಮಿಂಚುವುದು ಸಾಮಾನ್ಯ. ಆದರೆ ಚೆನ್ನೈ ಸೂಪರ್’ಕಿಂಗ್ಸ್ ಇದಕ್ಕೆ ತದ್ವಿರುದ್ದ ಎಂಬಂತೆ ಯುವಕರಿಗಿಂತ ಹಿರಿಯ ಆಟಗಾರಿಗೆ ಮಣೆಹಾಕಿದೆ. ಟೀಮ್ ಮ್ಯಾನೇಜ್ ಮೆಂಟ್ ನ ಈ ನಡೆ ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ.

 

 

ಹೌದು, ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಹೆಚ್ಚಾಗಿ 30 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರನ್ನೇ ಆಯ್ಕೆ ಮಾಡಿಕೊಳ್ಳಲಾಗಿದ್ದು ಸಿಎಸ್‌’ಕೆ ನಾಯಕ ಧೋನಿಗೆ (36), ತಾಹಿರ್ (38),ಜಾಧವ್ (32), ರಾಯುಡು(32), ರೈನಾ (31), ಕರ್ಣ್ ಶರ್ಮಾ (30) ಹಭರ್ಜನ್ (37), ವಾಟ್ಸನ್ (36), ಬ್ರಾವೋ (34), ಡುಪ್ಲೆಸಿ (33), ರಷ್ಟು ವಯಸ್ಸಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ 30 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಆಟಗಾರರ ಆಯ್ಕೆಯನ್ನು ನೋಡಿ ಟೀಂ ಇಂಡಿಯಾ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ “ಇದು ಐಪಿಎಲ್ ತಂಡವೋ ಅಥವಾ ವಯಸ್ಕರ ವೃದ್ದಾಶ್ರಮವೋ” ಎಂದು ವ್ಯಂಗವಾಗಿ ಟ್ವೀಟ್ ಮಾಡಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top