fbpx
ಹೆಚ್ಚಿನ

ವಾಸ್ತು ಶಾಸ್ತ್ರದ ಪ್ರಕಾರ ಮದುವೆ ನಂತರ ಹಾಸಿಗೆಯ ಆಯ್ಕೆ ಹೀಗಿರಬೇಕು

ವಾಸ್ತು ಶಾಸ್ತ್ರದ ಪ್ರಕಾರ ಮದುವೆ ನಂತರ ಹಾಸಿಗೆಯ ಆಯ್ಕೆ ಹೀಗಿರಬೇಕು

ಮದುವೆ ಎನ್ನುವುದು ಎರಡು ಮನಸ್ಸುಗಳ ಜೊತೆ ಎರಡು ಕುಟುಂಬವನ್ನು ಬೆಸೆಯುತ್ತದೆ. ಮದುವೆಯ ನಂತರ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಬದಲಾವಣೆಯಾಗುತ್ತದೆ. ಮದುವೆಗೆ ಧಾರ್ಮಿಕ ನಂಬಿಕೆಗಳ ಜೊತೆ ಜ್ಯೋತಿಷ್ಯ ಶಾಸ್ತ್ರದಲ್ಲೂ ಮಹತ್ವವನ್ನು ನೀಡಲಾಗಿದೆ.

 

ವಾಸ್ತುಶಾಸ್ತ್ರದ ಪ್ರಕಾರ ನಿಮ್ಮ ಸುತ್ತಮುತ್ತಲೂ ಇರುವ ವಸ್ತುಗಳು ನಿಮ್ಮ ಜೀವನದ ಮೇಲೆ ಮಹತ್ವದ ಬದಲಾವಣೆ ತರುತ್ತವೆ. ಅದರಲ್ಲೂ ದಂಪತಿ ಮೇಲೆ ಅವರು ಮಲಗುವ ಹಾಸಿಗೆ ಕೂಡ ಪ್ರಭಾವ ಬೀರುತ್ತದೆ.
ಮದುವೆಗೆ ಮುನ್ನ ಹಾಸಿಗೆ ಖರೀದಿ ಮಾಡುವ ಮೊದಲು ವಾಸ್ತು ಶಾಸ್ತ್ರದ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಸೂಕ್ತವಾಗಿದೆ. ವಾಸ್ತು ಶಾಸ್ತ್ರದಂತೆ ಹಾಸಿಗೆ ಖರೀದಿ ಮಾಡಿದರೆ ಎಂದಿಗೂ ಸಹ ದಾಂಪತ್ಯದಲ್ಲಿ ಬಿರುಕು ಮೂಡುವುದಿಲ್ಲವೆಂದು ನಂಬಲಾಗಿದೆ.

 

ವಾಸ್ತು ಶಾಸ್ತ್ರದ ಪ್ರಕಾರ ಕಬ್ಬಿಣದ ಮಂಚದ ಮೇಲೆ ಎಂದೂ ಸಹ ಮಲಗಬಾರದು. ಇದು ಋಣಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.

 

 

ಮರದ ಮಂಚ ವಾಸ್ತು ಪ್ರಕಾರ ಒಳ್ಳೆಯದು. ಮರದ ಮಂಚ ವಾಸ್ತು ಪ್ರಕಾರ ಒಳ್ಳೆಯದು, ಹಾಸಿಗೆ ಮೇಲೆ ಅಥವಾ ಕೆಳಗಿನ ಭಾಗದಲ್ಲಿ ಸೌಂದರ್ಯ ಹೆಚ್ಚಿಸಲು ಗ್ಲಾಸ್ ಅನ್ನು ಬಳಸಿದ್ದರೆ ತಕ್ಷಣ ಅದನ್ನು ತೆಗೆದು ಹಾಕಿ. ಅದು ವಿಭಿನ್ನ ಶಕ್ತಿಯನ್ನು ತನ್ನತ್ತ ಸೆಳೆಯುತ್ತದೆ. ಇದರಿಂದ ದೈಹಿಕ ತೊಂದರೆಯ ಜೊತೆಗೆ ನಿದ್ರೆಯ ಸಮಸ್ಯೆ ಕಾಡುತ್ತದೆ.

 

 

ತ್ರಿಕೋಣದ ಆಕಾರವಿರುವ ಹಾಸಿಗೆಯನ್ನು ಮರೆತು ಕೂಡ ಖರೀದಿ ಮಾಡಬೇ.ಡಿ ಎರಡು ಬೆಡ್ ಒಟ್ಟುಗೂಡಿಸಿ ದಾಂಪತ್ಯ ಜೀವನ ನೆಡೆಸಬಾರದು, ಮಲಗಬಾರದು.
ಒಂದೇ ಬೆಡ್ ಮೇಲೆ ಮಲಗಬೇಕೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ವಾಸ್ತು ಪ್ರಕಾರ ಪತಿ ಮತ್ತು ಪತ್ನಿ ಉಪಯೋಗಿಸುವ ತಲೆ ಹಿಂದಿನ ಬಣ್ಣ ಕೂಡ ಒಂದೇ ರೀತಿಯದ್ದು ಆಗಿರಬೇಕಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top