fbpx
ಆರೋಗ್ಯ

ತೆಳ್ಳಗಿರೋರು ತೂಕ ಹೆಚ್ಚು ಮಾಡಲು ಏನು ಮಾಡಬೇಕು ಗೊತ್ತಾ.

ತೆಳ್ಳಗಿರೋರು ತೂಕ ಹೆಚ್ಚು ಮಾಡಲು ಏನು ಮಾಡಬೇಕು ಗೊತ್ತಾ.

 

ಪ್ರತಿಯೊಬ್ಬರಿಗೆ ಸುಂದರವಾದ ಆಕರ್ಷಕವಾದ ಶರೀರವನ್ನು ಹೊಂದಿರಬೇಕೆಂಬ ಬಯಕೆ ಇದ್ದೆ ಇರುತ್ತದೆ. ತೆಳ್ಳಗಿರುವವರು ತೂಕವನ್ನು ಕೆಚ್ಚು ಮಾಡಲು ಹರಸಾಹಸ ಪಟ್ಟು ಸಿಕ್ಕಾಪಟ್ಟೆ ತಿಂದ್ರು ತೂಕ ಹೆಚ್ಚಾಗಲ್ಲ.

ದಪ್ಪಗಿರುವವವರು ಹೇಗೆ ಸರಿಯಾದ ಆಹಾರ ಕ್ರಮದಿಂದ ತೆಳ್ಳಗಾಗುತ್ತಾರೋ ಹಾಗೆಯೆ ಸಣ್ಣಗಿರುವವರು ಸರಿಯಾದ ಆಹಾರ ಕ್ರಮದಿಂದ ದಪ್ಪವಾಬೇಕು. ಕ್ಯಾಲೋರಿ ಹೆಚ್ಚಾಗಿರುವ ಆಹಾರ ಪಧಾರ್ಥಗಳನ್ನು ಸೇವನೆ ಮಾಡಬೇಕು. ತೂಕ ಹೆಚ್ಚಿಸುವ ಬರದಲ್ಲಿ ಅತಿಯಾದ ಜಂಕ್ ಫುಡ್, ಎಣ್ಣೆಯ ಪಧಾರ್ಥಗಳ ಸೇವನೆ ಆರೋಗ್ಯದ ದೃಷ್ಟಯಿಂದ ಹಿತಕರವಲ್ಲ. ಇದರಿಂದ ಹೊಟ್ಟೆಯ ಭಾಗಶಲ್ಲಿ ಬೊಬ್ಬು ಬರುತ್ತದೆ ಹೊರತು ತೂಕ ಹೆಚ್ಚು ಮಾಡಲು ಸಾಧ್ಯವಿಲ್ಲ. ಇದು ಆರೋಗ್ಯಕರವಾದ ವುಧಾನವು ಅಲ್ಲವೇ ಅಲ್ಲ.

 

 

ದಪ್ಪಗಾಗಲು ಅನುಸರಿಸಬೇಕಾದ ಕ್ರಮಗಳು:
1. ಕ್ರಮೇಣವಾಗಿ ನಾವು ಸೇವಿಸುವ ಆಹಾರವನ್ನು ಹೆಚ್ಚಿಸುತ್ತ ಹೋಗಬೇಕು.

2. ಒಂದು ಗ್ಲಾಸ್ ಹಾಲಿನಲ್ಲಿ ಇಂದು ಚಮಚ ಅಶ್ವಗಂಧ ಪುಡಿಯನ್ನು ಸೇರಿಸಿ, ಆಕಳಿನ ತುಪ್ಪ ಬೆರೆಸಿ ದಿನಾಲೂ ಎರಡು ಬಾರಿ ಕುಡಿಯಬೇಕು.

3. ಐದರಿಂದ ಆರು ಖರ್ಜುರವನ್ನು ಹಾಲಿನಲ್ಲಿ ಬೆರೆಸಿ 5 -6 ಘಂಟೆ ನೆನೆಸಿಟ್ಟು ರಾತ್ರಿ ಮಲಗುವ ಮುನ್ನ ಕುಡಿಯಬೇಕು

 

 

4. ಒಣ ದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ತಿನ್ನಬೇಕು.

5. ಪೋಷಕಾಂಶಗಳ ಖನಿಜವಾಗಿರುವ ಬಾಳೆಹಣ್ಣನ್ನು ಹಾಲಿನಲ್ಲಿ ಮಿಲ್ಕ್ ಶೇಕ್ ಮಾಡಿ ಕುಡಿಯಬೇಕು.

6. ಊಟಕ್ಕೆ ಮುನ್ನ ಅತಿಯಾಗಿ ನೀರನ್ನು ಸೇವನೆ ಮಾಡಬಾರದು ಇದರಿಂದ ನಿಮ್ಮ ಊಟದ ಸೇವನೆ ಪ್ರಮಾಣ ಕಡಿಮೆಯಾಗುತ್ತದೆ.

 

7. ಪ್ರತಿದಿನ ನಾವು ವ್ಯಾಯಾಮ ಮಾಡುವುದನ್ನು ರೂಡಿಸಿಕೊಳ್ಳಬೇಕು ಇದರಿಂದ ಹೆಚ್ಚಾಗಿ ಹಸಿವಾಗುತ್ತದೆ, ನಾವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗಲು ಸಹಾಯಕಾರಿಯಾಗುತ್ತದೆ ಇದರಿಂದ ನಮ್ಮ ಶರೀರದ ತೂಕ ಹೆಚ್ಚಳ ಮಾಡಲು ಸಹಾಯಕಾರಿಯಾಗುತ್ತದೆ.

8. ಸರಿಯಾದ ಸಮಯಕ್ಕೆ ಊಟ ಮಾಡುವ ಕ್ರಮವನ್ನು ನಾವು ಅಳವಡಿಸಿಕೊಳ್ಳಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top